• Home
 • »
 • News
 • »
 • mangaluru
 • »
 • Success Story: ಪುತ್ತೂರಿನಲ್ಲಿ ಹುಟ್ಟಿತು ಸ್ವದೇಶಿ TV ಬ್ರಾಂಡ್! ಟಿವಿ ರಿಪೇರಿ ಮಾಡ್ತಿದ್ದವರು ಕಂಪನಿ ಕಟ್ಟಿದ ಕಥೆ

Success Story: ಪುತ್ತೂರಿನಲ್ಲಿ ಹುಟ್ಟಿತು ಸ್ವದೇಶಿ TV ಬ್ರಾಂಡ್! ಟಿವಿ ರಿಪೇರಿ ಮಾಡ್ತಿದ್ದವರು ಕಂಪನಿ ಕಟ್ಟಿದ ಕಥೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಪುತ್ತೂರಿನ ಟಿವಿ ಕ್ಲಿನಿಕ್ ಮಾಲೀಕರಾದ ಸತ್ಯ ಶಂಕರ್ ಟಿವಿ ದುರಸ್ತಿಯ ತಮ್ಮ ಅನುಭವವನ್ನು ಧಾರೆಯೆರೆದು ಈ ಅಪೂರ್ವ ಸಾಧನೆ ತೋರಿದ್ದಾರೆ.

 • Share this:

  ಪುತ್ತೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಲ್ಪನೆಯಂತೆ ಭಾರತ ಇಂದು ಆತ್ಮನಿರ್ಭರತೆಯತ್ತ ದಾಪುಗಾಲಿಡುತ್ತಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಹೊಸ ಹೊಸ ಆವಿಷ್ಕಾರಗಳು, ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ದಕ್ಷಿಣಕನ್ನಡ ಜಿಲ್ಲೆಯ (Dakshina Kannada News) ಪುತ್ತೂರಿನಲ್ಲೂ (Puttur) ಇಂಥಹುದೇ ಒಂದು ಬ್ರ್ಯಾಂಡ್ ಮಾರುಕಟ್ಟೆಗೆ ಬಂದಿಳಿದಿದೆ. ಪುತ್ತೂರಿನಲ್ಲಿ ಕಳೆದ 22 ವರ್ಷಗಳಿಂದ ಟಿವಿ ರಿಪೇರಿಯಲ್ಲಿ ಅನುಭವ ಹೊಂದಿದ ಟಿವಿ ಕ್ಲಿನಿಲ್ (TV Clinic) ಎನ್ನುವ ಸಂಸ್ಥೆ ತನ್ನದೇ ಬ್ರ್ಯಾಂಡ್​ನ ಎಲ್.ಇ.ಡಿ ಸ್ಮಾರ್ಟ್ ಟಿವಿ (LED Smart TV Brand) ಹೊರ ತಂದಿದೆ. ಟಿವಿ ಕ್ಲಿನಿಕ್ ಮಾಲೀಕರಾದ ಸತ್ಯ ಶಂಕರ್ ಟಿವಿ ದುರಸ್ತಿಯ ತಮ್ಮ ಅನುಭವವನ್ನು ಧಾರೆಯೆರೆದು ಈ ಅಪೂರ್ವ ಸಾಧನೆ ತೋರಿದ್ದಾರೆ.


  ಸಾಮಾನ್ಯವಾಗಿ ಎಲ್ಲಾ ಅಂತರರಾಷ್ಟ್ರೀಯ ಮಟ್ಟದ ಟಿವಿ ಕಂಪನಿಗಳು ಮಾಡುವಂತೆ ಸ್ಮಾರ್ಟ್ ಟಿವಿಗೆ ಬೇಕಾದಂತಹ ಸ್ಲ್ರೀನ್ ,ಬೋರ್ಡ್, ಬ್ಯಾಕ್ ಲೈಟ್ ಮೊದಲಾದ ಬಿಡಿ ಭಾಗಗಳು ಫ್ಯಾಕ್ಟರಿಗಳಲ್ಲಿ ತಯಾರಾಗುತ್ತದೆ. ಈ ಬಿಡಿ ಭಾಗಗಳನ್ನು ಜೋಡಿಸಿ ಬೃಹತ್ ಟಿವಿ ಕಂಪನಿಗಳು ಅವರವರ ಬ್ಯಾಂಡ್ ಮಾಡಿಕೊಂಡು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಇದೇ ರೀತಿಯಲ್ಲಿ ಸತ್ಯಶಂಕರ್ ತಮ್ಮದೇ ಆದ ಎಸ್.ಟಿ.ವಿ.ಸಿ ಎನ್ನುವ ಹೆಸರಿನ ಟಿವಿಯನ್ನು ಸಿದ್ಧಪಡಿಸಿದ್ದಾರೆ.


  ಗ್ರಾಹಕರ ಅಗತ್ಯಕ್ಕೆ ತಕ್ಕ ಸೌಕರ್ಯವೇ ಇದರ ವಿಶೇಷ!
  ಈ ಟಿವಿಯನ್ನು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಪರಿವರ್ತನೆ ಮಾಡಿಕೊಡುವ ಆಪ್ಷನ್ ಅನ್ನೂ ಸತ್ಯಶಂಕರ್ ನೀಡಿದ್ದಾರೆ. ಸ್ಕ್ರೀನ್, ಮದರ್ ಬೋರ್ಡ್ ಹೊರತುಪಡಿಸಿ ಎಚ್.ಡಿ ಇನ್ಪುಟ್, ಔಟ್ ಪುಟ್ ಗಳನ್ನು ಗ್ರಾಹಕರಿಗೆ ಬೇಕಾಗುವಷ್ಟು ಮಾಡಿಕೊಡುತ್ತಿದ್ದಾರೆ.


  ಕರಾವಳಿ ಹವಾಮಾನಕ್ಕೆ ಇದೇ ಬೆಟರ್!
  ಅಲ್ಲದೇ ಈ ಟಿವಿ ದಕ್ಷಿಣ ಕನ್ನಡದ ಹವಾಮಾನವನ್ನು ಹೊಂದಿಕೊಂಡು ನಿರ್ಮಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆ ಹೆಚ್ಚಾಗಿ ತೇವಾಂಶ ಹೊಂದಿದ ಹವಾಮಾನವನ್ನು ಹೊಂದಿರುವುದರಿಂದ ಬಹುತೇಕ ಕಂಪನಿಗಳ ಟಿವಿ ಹೆಚ್ಚಿನ ಕಾಲ ಬಾಳಿಕೆ ಬರುತ್ತಿಲ್ಲ. ಟಿವಿ ದುರಸ್ತಿಯ ಈ ಅನುಭವವನ್ನು ಪಡೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ತೇವಾಂಶಕ್ಕೆ ಹೊಂದಿಕೊಳ್ಳುವ ಬೋರ್ಡ್ ಗಳನ್ನು ಈ ಟಿವಿಗಳಿಗೆ ಜೋಡಿಸಲಾಗಿದೆ.
  ಇದನ್ನೂ ಓದಿ: Birthday: ಗೋಶಾಲೆಯಲ್ಲಿ ಮಗುವಿನ ಮೊದಲ ಬರ್ತ್ ಡೇ ಆಚರಿಸಿಕೊಂಡ ದಂಪತಿ


  ಸದ್ಯದಲ್ಲೇ ಮಾರುಕಟ್ಟೆಗೆ
  ಅಲ್ಲದೇ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕದಲ್ಲಾಗುತ್ತಿರುವ ಓಲ್ಟೇಜ್ ಫ್ಲಕ್ಚುವೇಶನ್ ನಿಂದಾಗಿ ಬಹುತೇಕ ಟಿವಿಗಳಲ್ಲಿ ಸಮಸ್ಯೆಗಳು ಕಂಡುಬರುತ್ತಿವೆ. ಈ ಕಾರಣಕ್ಕಾಗಿ ಎಸ್.ಟಿ.ವಿ.ಸಿ ಟಿವಿಗಳಲ್ಲಿ ಇಂಥಹ ಸಮಯದಲ್ಲಿ ಟಿವಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕೆಲವು ಬದಲಾವಣೆಗಳನ್ನೂ ಮಾಡಲಾಗಿದೆ. ತಮ್ಮ ಬ್ರ್ಯಾಂಡ್ ನ ಈ ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಈಗಾಗಲೇ ಸಿದ್ಧತೆ ನಡೆಸಿರುವ ಸತ್ಯಶಂಕರ್ ಗೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆಯೂ ಬರುತ್ತಿದೆ.


  ಇದನ್ನೂ ಓದಿ: High-Tech Bus Stand: ದಕ್ಷಿಣ ಕನ್ನಡದಲ್ಲಿ ರಾಜ್ಯದ ಮೊದಲ ಹೈಟೆಕ್ ಬಸ್ ಸ್ಟಾಂಡ್! ಎಷ್ಟೇ ರಾತ್ರಿಯಾದ್ರೂ​ ಸೇಫ್!


  ಕೈಗೆಟಕುವ ದರ, ಭಾರೀ ನಿರೀಕ್ಷೆ
  ತಮ್ಮ ಟಿವಿಯನ್ನು ಗ್ರಾಹಕರಿಗೆ ಹೆಚ್ಚಿನ ಹೊರೆಯಿಲ್ಲದೆ,ಕೈಗೆಟಕುವ ದರದಲ್ಲಿ ನೀಡಲಾಗುವುದು ಎಂದು ಸತ್ಯಶಂಕರ್ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಟಿವಿಗಳಿಗೆ ಪೈಪೋಟಿ ನೀಡುವ ಟಿವಿ ಪುತ್ತೂರಿನಲ್ಲಿ ಸಿದ್ಧಗೊಂಡಿರುವುದಕ್ಕೆ ಗ್ರಾಹಕರಿಂದ ಭಾರೀ ಬೆಂಬಲವೂ ವ್ಯಕ್ತವಾಗಿದೆ. ಸತ್ಯಶಂಕರ್ ಅವರ ಈ ಸಾಧನೆ ಪುತ್ತೂರಿಗೇ ಹೆಮ್ಮೆ ಎನ್ನುವ ಅಭಿಮಾನದ ಮಾತುಗಳೂ ಕೇಳಿ ಬರಲಾರಂಭಿಸಿದೆ.

  Published by:ಗುರುಗಣೇಶ ಡಬ್ಗುಳಿ
  First published: