ಮಾವಿನಕಾಯಿ, ನಿಂಬೆಹಣ್ಣು, ಕ್ಯಾರೆಟ್ ಉಪ್ಪಿನಕಾಯಿ. ಹೀಗೆ ಹಲವು ಉಪ್ಪಿನಕಾಯಿ ನೋಡಿದ್ದೀವಿ, ರುಚಿ ಕೂಡಾ ಸವಿದಿದ್ದೀವಿ. ಆದ್ರೆ ಇಲ್ಲಿ ಸಿಗೋ ಈ ಸ್ಪೆಷಲ್ ಉಪ್ಪಿನಕಾಯಿ ಟೇಸ್ಟ್ (Pickle Taste) ನೀವ್ ಒಂದ್ಸಲ ನೋಡ್ಲೇಬೇಕು. ಅದುವೇ ಅಣಬೆ ಉಪ್ಪಿನಕಾಯಿ. ಯೆಸ್, ಮಶ್ರೂಮ್ ಪಿಕಲ್. ಸಖತ್ ಟೇಸ್ಟಿ ಮತ್ತು ಸ್ಪೈಸಿ ಆಗಿರೋ ಈ ಅಣಬೆ ಉಪ್ಪಿನಕಾಯಿಗೆ (Mushroom Pickle) ಸಖತ್ ಡಿಮ್ಯಾಂಡ್ ಕೂಡಾ ಇದೆ.
ಈ ಅಣಬೆ ಉಪ್ಪಿನಕಾಯಿ ಪ್ರಾಡಕ್ಟ್ ತಯಾರಕರು ಪುತ್ತೂರಿನ ಗಿರೀಶ್ವರ್ ಭಟ್ ಹಾಗೂ ಆಶಾ ದರ್ಬೆ ಅವರು. ತನ್ನ ರುಚಿಯಿಂದಲೇ ಊಟದ ಬಟ್ಟಲಲ್ಲಿ ಮೇಲೆ ಸ್ಥಾನ ಗಿಟ್ಟಿಸಿಕೊಳ್ತಿರೋ ಅಣಬೆ ಉಪ್ಪಿನಕಾಯಿ ವ್ಯಾಪಾರವೂ ಕುದುರುತ್ತಿದೆಯಂತೆ. ಉಪ್ಪಿನಕಾಯಿ ಜೊತೆ ಅಣಬೆ ಹಪ್ಪಳವೂ ಇದ್ದು ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಇವರೇ ನೋಡಿ ಉಪ್ಪಿನಕಾಯಿ ತಯಾರಕರು
ಪುತ್ತೂರು ಮೂಲದವರಾದ ಗಿರೀಶ್ವರ ಭಟ್ ಹಾಗೂ ಆಶಾ ದರ್ಬೆ ತಮ್ಮ ಮನೆಯಲ್ಲಿ ಅಣಬೆ ಬೆಳೆದು ಸಂಸ್ಕರಿಸಿ ತರಹೇವಾರಿ ಫುಡ್ ಪ್ರಾಡಕ್ಟ್ ತಯಾರಿಸ್ತಿದ್ದಾರೆ.
ಇದನ್ನೂ ಓದಿ: Human Waste: ಹೊಲಸು ಎಂದು ಮೂಗು ಸಿಂಡರಿಸಬೇಡಿ, ಮಾನವ ತ್ಯಾಜ್ಯದಿಂದ ಆದಾಯ ಗಳಿಸ್ತಿದೆ ದಕ್ಷಿಣ ಕನ್ನಡದ ಈ ಸಂಸ್ಥೆ!
ಅಣಬೆ ಜಾತಿಯಲ್ಲಿ ಅತಿ ಬಿಳಿ ಬಣ್ಣದ ಹಾಲು ಅಣಬೆ, ಬಿಳಿ ಅಣಬೆ ಎಂದು ಕರೆಸಿಕೊಳ್ಳುವ ಮಿಲ್ಕಿ ಮಶ್ರೂಮ್ ಬಳಸಿ ಈ ಉಪಪ್ಇನಕಾಯಿಗಳನ್ನ ತಯಾರಿಸಲಾಗಿದೆ. ಪುತ್ತೂರಿನ ಬಾಳೆಗುಳಿಯಲ್ಲಿ ಸುಮಾಹಿ ಫುಡ್ಸ್ ಎಂಬ ಬ್ರಾಂಡ್ ಅಡಿ ತಯಾರಾಗೋ ಅಣಬೆ ಪ್ರಾಡಕ್ಟ್ಗಳಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇಡಿಕೆಯೂ ಇದೆ.
ಇದನ್ನೂ ಓದಿ: Arecanut Future: ಅಡಿಕೆಗೆ ಭವಿಷ್ಯವಿದೆಯೇ? ಪುತ್ತೂರಿನಲ್ಲಿ ಕೃಷಿಕರಿಂದ ಮಹತ್ವದ ತೀರ್ಮಾನ
ಉಪ್ಪಿನಕಾಯಿ ಬೇಕೇ, ಇವರನ್ನು ಸಂಪರ್ಕಿಸಿ
ಒಟ್ಟಿನಲ್ಲಿ ಉಪ್ಪಿನಕಾಯಿ ಪ್ರಿಯರ ಪಾಲಿಗೆ ಅಣಬೆ ಉಪ್ಪಿನಕಾಯಿ ಇನ್ನೊಂದಿಷ್ಟು ಸ್ಪೆಷಲ್ ರುಚಿ ನೀಡೋದರಲ್ಲಿ ಡೌಟಿಲ್ಲ. ಮನೆಯಲ್ಲೇ ತಯಾರಿಸೋ ಈ ಉಪ್ಪಿನಕಾಯಿನ ನೀವು ನಿಮ್ಮ ಮನೆ ಬಾಗಿಲಗೇ ತರಿಸಿಕೊಳ್ಳಬಹುದು. ಯಾವ್ದಕ್ಕೂ ಅಣಬೆ ಉತ್ಪನ್ನ ಸವಿಯೋಕೆ 94817 67227 ಈ ನಂಬರ್ಗೆ ವಾಟ್ಸಪ್ ಮಾಡಬಹುದಂತೆ ನೋಡಿ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ