ದಕ್ಷಿಣ ಕನ್ನಡ: ಚುರ್ ಎಂದು ಎಣ್ಣೆಯಲ್ಲಿ ಅಂಬೋಡೆ ಬಿಡ್ತಿರುವ ಮಹಿಳೆ. ಪುಟ್ಟದಾದ ಸ್ಟಾಲ್ನಲ್ಲಿ ವ್ಯಾಪಾರ. ಹೌದು, ಮನೆಯಲ್ಲಿ ತಯಾರಿಸೋ ಇಲ್ಲಿ ಸಿಗೋ ಅಂಬೋಡೆಗೆ ಸಖತ್ ಡಿಮ್ಯಾಂಡ್ ಇದೆ. ದಿನಕ್ಕೆ ಕಡಿಮೆಯೆಂದ್ರೂ ನೂರಾರು ಜನರು ಇದ್ರ ಟೇಸ್ಟ್ (Success Story) ಸವಿಯುತ್ತಾರೆ. ಅಷ್ಟೊಂದು ವೆರೈಟಿ ನೋಡಿ ಈ ಅಂಬೋಡೆ ಹಾಗೂ ಇಲ್ಲಿ ಸಿಗೋ ಚುರುಮುರಿ. ಅಷ್ಟೇ ಅಲ್ಲ, ಇದೇ ಚುರುಮುರಿ ಅಂಗಡಿಯೇ (Churumuri Shop) ಈ ಮಹಿಳೆಯ ಬದುಕಿನ ಜೀವನಾಧಾರ ಕೂಡ.
ಯೆಸ್, ಇವರು ಗಾಯತ್ರಿ ಅಂತ. ಇವರು ಮಾಡೋ ಆಂಬೊಡೆ, ಚುರುಮುರಿಯನ್ನ ತಿನ್ನೋದಕ್ಕೆ ಜನ ಕ್ಯೂ ನಿಲ್ತಾರೆ. ದಕ್ಷಿಣ ಕನ್ನಡದ ಮೂಡುಬಿದಿರೆಯ ಅಲಂಗಾರಿನಲ್ಲಿರುವ ಇವರ ಪುಟ್ಟದಾದ ಚುರುಮುರಿ ಶಾಪ್ ಅಂದ್ರೆ ಈ ಭಾಗದಲ್ಲಿ ಸಖತ್ ಫೇಮಸ್. ಅಂದಹಾಗೆ ಹನ್ನೊಂದು ವರ್ಷದ ಹಿಂದೆ ಪತಿಯನ್ನ ಕಳೆದುಕೊಂಡ ಗಾಯತ್ರಿಯವರ ಬದುಕಿಗೆ ಆಸರೆಯಾಗಿದ್ದೇ ಈ ಚುರುಮುರಿ ಸ್ಟಾಲ್.
ಎಷ್ಟೇ ಅಂಗಡಿ ಇದ್ರೂ ಇವರ ಅಂಗಡಿಯೇ ಬೇಕು!
ಈ ಭಾಗದಲ್ಲಿ ಅದೆಷ್ಟೋ ಚುರುಮುರಿ, ಆಂಬೊಡೆ ಶಾಪ್ಗಳಿದ್ದರೂ ಗಾಯತ್ರಿ ಅಕ್ಕ ತಯಾರಿಸೋ ಚುರುಮುರಿ, ಆಂಬೋಡೆ ಅಂದ್ರೆ ಇರೋ ಡಿಮ್ಯಾಂಡೇ ಬೇರೆ! ಹಾಗಾಗಿ ಜನ ಕೂಡಾ ಸಖತ್ ಟೇಸ್ಟ್ ಸಿಗೋ ಈ ಅಂಗಡಿಯ ಆಂಬೋಡೆಯನ್ನೇ ಖರೀದಿಸುತ್ತಾರೆ.
ಇದನ್ನೂ ಓದಿ: Dakshina Kannada: ಈ ಗಣಪನಿಗೆ ಪ್ರಕೃತಿಯೇ ಮಾಡುತ್ತೆ ನಿತ್ಯ ನಿರಂತರ ಅಭಿಷೇಕ!
150 ಕಿಲೋಮೀಟರ್ ಸ್ಕೂಟರ್ ಪ್ರಯಾಣ!
ಮಹಾನ್ ದೈವಭಕ್ತೆಯಾದ ಇವರು ವಾರಕ್ಕೊಮ್ಮೆ ತಪ್ಪದೇ ತಮ್ಮ ಹೆವಿ ಡ್ಯೂಟಿ ನಡುವೆಯೂ ಸ್ಕೂಟರ್ ಏರಿ 150 ಕಿಲೋ ಮೀಟರ್ ದೂರದ ಕುಂದಾಪುರದ ಸಿದ್ಧಾಪುರದಲ್ಲಿರೋ ಹೊನ್ನಮ್ಮನ ದೇವಸ್ಥಾನಕ್ಕೆ ಹೋಗಿ ಬರ್ತಾರೆ. ಇದ್ರಿಂದ ಬಂದ ಆದಾಯದಲ್ಲೇ ಜೀವನ ನಡೆಸುತ್ತಿದ್ದಾರೆ. ಮಗನ ವಿದ್ಯಾಭ್ಯಾಸವನ್ನು ನೋಡುತ್ತಿದ್ದಾರೆ.
ಇದನ್ನೂ ಓದಿ: Koti Raj: 1,700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿರಾಜ್!
ಒಟ್ಟಿನಲ್ಲಿ ಸ್ವಂತ ಉದ್ಯಮ ಮಾಡಿ, ಸ್ವಾಭಿಮಾನಿ ಜೀವನ ನಡೆಸಿ ಮಹಿಳೆ ಅಬಲೆಯಲ್ಲ ಸಬಲೆ ಅನ್ನುವಂತೆ ಬದುಕು ಕಟ್ಟಿಕೊಂಡಿರುವ ಗಾಯತ್ರಿ ಅವರು ಇತರೆ ಮಹಿಳೆಯರಿಗೂ ಮಾದರಿಯಾಗಿದ್ದಾರೆ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ