ಮಂಗಳೂರು: ಕನಕದೊಳಗೆ ಹೂರಣ ತುಂಬುತ್ತಿರೋ ಮಹಿಳೆಯರು, ಲಗುಬಗೆಯಲ್ಲಿ ರುಚಿ ರುಚಿ ತಿಂಡಿ (Ugadi 2023) ತಯಾರಿಸ್ತಿರೋ ಹತ್ತಾರು ಮಂದಿ. ಕೇವಲ ಒಂದು ನೂರು ರೂಪಾಯಿ ಬಂಡವಾಳದಿಂದ (Holige Busines) ಸದ್ದಿಲ್ಲದೇ ಸಾಧನೆ ಮಾಡುತ್ತಿರುವ ಕನಸುಗಾರರಿವರು!
ಹೋಳಿಗೆ ಉದ್ಯಮಿ
ಇವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅಸೈಗೋಳಿ ನಿವಾಸಿ ಸುಧಾಕರ್ ಭಟ್. ಕಲಿತದ್ದು ನಾಲ್ಕನೇ ತರಗತಿಯಾದರೂ, ಇವರೀಗ ಓರ್ವ ಯಶಸ್ವೀ ಗೃಹೋದ್ಯಮಿ. ಯೌವನದಲ್ಲಿ ಹೋಟೆಲ್ ಹಾಗೂ ಇತರ ಕಡೆಗಳಲ್ಲಿ ಅಡುಗೆಯವರಾಗಿ ದುಡಿದ ಸುಧಾಕರ್ ಭಟ್ ತಮ್ಮ ತಂದೆಯವರು ಮಾಡುತ್ತಾ ಬಂದಿದ್ದ ಹೋಳಿಗೆ ತಯಾರಿಕೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಮುಂದಾಗಿದ್ದರು. ಆ ಬಳಿಕ ಹಿಂದಿರುಗಿ ನೋಡದ ಸುಧಾಕರ್ ಭಟ್ ಹೋಳಿಗೆಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.
ಸುಧಾಕರ ಭಟ್ರ ಹೋಳಿಗೆ ಫೇಮಸ್
100 ರೂಪಾಯಿ ಬಂಡವಾಳ ಹಾಕಿ ತೊಡಗಿಸಿಕೊಂಡ ಹೋಳಿಗೆ ಗೃಹೋದ್ಯಮ ಇಂದು ದಿನಕ್ಕೆ 3 ಸಾವಿರಕ್ಕೂ ಹೆಚ್ಚು ಹೋಳಿಗೆಯನ್ನು ತಯಾರಿಸಿ ವಿತರಿಸುವ ಹಂತಕ್ಕೆ ತಲುಪಿದೆ. ಮದುವೆ-ಮುಂಜಿ ಸೇರಿದಂತೆ ಶುಭ ಸಮಾರಂಭಗಳಲ್ಲಿ ಸುಧಾಕರ್ ಭಟ್ ತಯಾರಿಸಿದ ಹೋಳಿಗೆಗೇ ಹೆಚ್ಚಿನ ಬೇಡಿಕೆ.
ಮಹಿಳೆಯರಿಗೆ ಉದ್ಯೋಗ
ತಾವು ಮಾತ್ರವಲ್ಲದೆ ಐದಾರು ಯುವತಿಯರಿಗೂ ಉದ್ಯೋಗ ನೀಡುತ್ತಿರುವ ಸುಧಾಕರ್, ಆ ಯುವತಿಯರ ಮದುವೆ ಸಮಯದಲ್ಲಿ ಚಿನ್ನ ಹಾಗೂ ಮದುವೆಗೆ ಬೇಕಾದ ಖರ್ಚನ್ನೂ ಭರಿಸುವ ಮೂಲಕ ಉದಾರತೆ ಮರೆದಿದ್ದಾರೆ.
ಇದನ್ನೂ ಓದಿ: Viral Photos: ಬಾಯಿಯಿಂದ ಅಮ್ಮನ ಕಾಲು ಕಚ್ಚಿ ಹಾವಿನ ವಿಷ ತೆಗೆದ ಬಾಲಕಿ!
ಮಾದರಿ ಸೇವೆ
ನಾಲ್ಕನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಸುಧಾಕರ್ ಭಟ್ ತಮ್ಮ ಕೈಲಾದ ಮಟ್ಟಿಗೆ ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾದ ಸಹಾಯವನ್ನೂ ಮಾಡುತ್ತಿದ್ದಾರೆ. ಅಲ್ಲದೇ, ತಾನು ಕಲಿಯದಿದ್ದರೂ, ತನ್ನ ಪತ್ನಿಯನ್ನು ಪಿ.ಎಚ್.ಡಿ ತನಕ ಕಲಿಯಲು ಬೆಂಗಾವಲಾಗಿ ನಿಲ್ಲುವ ಮೂಲಕ ಮಹಿಳಾ ಸಬಲೀಕರಣಕ್ಕೂ ಆದರ್ಶಪ್ರಾಯರಾಗಿದ್ದಾರೆ.
ಇದನ್ನೂ ಓದಿ: Matsyagandha Express: ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಟ್ಟ ಪ್ರಖ್ಯಾತ ರೈಲಿಗೆ 25ರ ಪ್ರಾಯ!
ಯಶಸ್ವಿ ಉದ್ಯಮ
ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತದ ಕರೆಯಂತೆ ಹೋಳಿಗೆಯನ್ನೇ ತನ್ನ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಯ್ಕೆ ಮಾಡಿಕೊಳ್ಳುವ ಮೂಲಕ ಸುಧಾಕರ್ ಓರ್ವ ಯಶಸ್ವಿ ಹೋಳಿಗೆ ಗೃಹೋದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ವರದಿ: ನ್ಯೂಸ್ 18,ಪುತ್ತೂರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ