ದಕ್ಷಿಣ ಕನ್ನಡ: ಜೇನುತುಪ್ಪ ಸವಿಯೋದಕ್ಕೆ ಎಷ್ಟು ಟೇಸ್ಟಿನೋ, ಜೇನು ಸಾಕೋದಕ್ಕೆ ಅಷ್ಟೇ ಕಷ್ಟ ಮಾರಾಯ್ರೇ! ಹೌದು, ಹೀಗೆ ಅಡಿಕೆ ತೋಟದ ಮಧ್ಯೆ ಅಲ್ಲೊಂದು ಇಲ್ಲೊಂದು ಜೇನು ಪೆಟ್ಟಿಗೆ, ಅದ್ರಿಂದ ಮೆಲ್ಲನೆ ಜೇನುಗೂಡು ಹೊರ ತೆಗೆಯುತ್ತಿರುವ ಯುವಕನನ್ನ ನೋಡ್ತಿದ್ರೆ ನಿಮ್ಗೆ ಇದೆಲ್ಲ ಅರ್ಥ ಆಗ್ಲೇಬೇಕು. ಹಾಗಂತ ಆದಾಯಕ್ಕೆ ಏನು ಮೋಸ ಮಾಡದ ಈ ಜೇನು ಸಾಕಾಣಿಕೆಯಲ್ಲಿ (Honey Farming) ಸಕ್ಸಸ್ ಕಂಡ ಈ ಯುವಕನ ಕಥೆ ನಿಜಕ್ಕೂ (Success Story) ಸ್ಫೂರ್ತಿದಾಯಕ.
ಯೆಸ್, ಜೇನು ಪೆಟ್ಟಿಗೆಯಿಂದ ಹೊರ ತೆಗೆಯುತ್ತಾ ಜೇನುಗಳೊಂದಿಗೆ ತನ್ನ ಒಡನಾಟ ಎಂತಹದ್ದು ಎಂದು ಪ್ರದರ್ಶಿಸುತ್ತಿರೋ ಇವರು ಮಂಗಳೂರಿನ ಮೂಡುಬಿದಿರೆಯ ಸಂಪಿಗೆ ಎಂಬ ಪುಟ್ಟ ಊರಿನ ರೋಷನ್.
ಬಾಲ್ಯದಿಂದಲೇ ಜೇನುಕೃಷಿ!
ಈ ರೋಷನ್ ಮತ್ತು ಜೇನು ನೊಣಗಳ ಸಂಬಂಧ ಭಾರೀ ಹಳೆಯದ್ದು. ಬಾಲ್ಯದಿಂದಲೇ ಜೇನು ಸಾಕಾಣಿಕೆ ಬಗ್ಗೆ ಹೆಚ್ಚು ಆಸಕ್ತರಾಗಿದ್ದ ರೋಷನ್ ಆಗಿಂದಲೇ ಒಂದು ಜೇನು ಗೂಡಿನಿಂದ ತನ್ನ ಜೇನುಕೃಷಿ ಆರಂಭಿಸಿದ್ದರು. ಹೀಗೆ ದಶಕಗಳಿಂದ ಆರಂಭವಾದ ಇವರ ಹವ್ಯಾಸ ಈಗ ಉದ್ಯಮ ಅನ್ನೋ ಲೆವೆಲ್ಗೆ ಬಂದು ತಲುಪಿದೆ.
ಅನ್ನದ ತಟ್ಟೆಯೇ ಜೇನು ಪೆಟ್ಟಿಗೆ
ಇಂದು 50ಕ್ಕೂ ಹೆಚ್ಚಿನ ಜೇನು ಪೆಟ್ಟಿಗೆಯೊಂದಿಗೆ ಜೇನು ಸಾಕಾಣಿಕೆ ಮಾಡುತ್ತಿರುವ ರೋಷನ್ ಅವ್ರಿಗೆ ಈ ಜೇನು ನೊಣಗಳೇ ಆದಾಯದ ಮೂಲವೂ, ಅನ್ನದ ತಟ್ಟೆಯೂ ಆಗಿದೆ.
150 ಕೆಜಿವರೆಗೂ ಜೇನು ಮಾರಾಟ
ರೋಷನ್ ಅವರು ಪ್ರತಿ ತಿಂಗಳು ಏನಿಲ್ಲ ಅಂದ್ರೂ ತೊಂಬತ್ತರಿಂದ ನೂರೈವತ್ತು ಕೆಜಿ ವರೆಗೂ ಜೇನುತುಪ್ಪ ಮಾರುತ್ತಾರೆ. ಜೊತೆಗೆ ಇವರ ಬಳಿ ಜೇನುಗೂಡು, ಜೇನುಮೇಣವೂ ಸಿಗುತ್ತವೆ. ಈ ಬಾರಿಯ ಹವಾಮಾನ ವೈಪರೀತ್ಯ ಜೇನು ಸಾಕಾಣೆಯ ಮೇಲೆ ಹೊಡೆತ ಕೊಟ್ಟಿದ್ದು ಇವರ ಆದಾಯವನ್ನ ಕೊಂಚ ಕದಲಿಸಿದೆಯಾದರೂ ಜೇನುತುಪ್ಪಕ್ಕೆ ಕೆಜಿಗೆ 600 ರೂಪಾಯಿಯಂತೆ ಬೇಡಿಕೆ ಬಂದಿದ್ದು ರೋಷನ್ ಅವರ ಹುರುಪು ಹೆಚ್ಚಿಸಿದೆ.
ಇದನ್ನೂ ಓದಿ: Dakshina Kannada: ಇವ್ರಿಗೆ ಮೆಸ್ಕಾಂ ಬೇಡ, ಕರೆಂಟ್ ಬಿಲ್ ಕೂಡಾ ಬರಲ್ಲ; ತೋಟದಲ್ಲೇ ತಯಾರಾಗುತ್ತೆ ವಿದ್ಯುತ್!
ಏನೇ ಇರಲಿ, ತಿಂಗಳಿಗೆ ನೂರು ಕೆಜಿಯಷ್ಟು ಜೇನು ತುಪ್ಪ ಮಾಡಿ ಮಾರಾಟ ಮಾಡೋದು ಅಂದ್ರೆ ಸುಲಭದ ಮಾತಲ್ಲ. ಅದ್ರಲ್ಲೂ ಜೇನು ಸಾಕಾಣಿಕೆಗೆ ತಾಳ್ಮೆ ತುಸು ಜಾಸ್ತಿಯೇ ಬೇಕು. ಮೋಡ ಕವಿದ ವಾತಾವರಣದಲ್ಲಿ ಸಖತ್ ಅಗ್ರೆಸ್ಸಿವ್ ಮೂಡ್ಗೆ ಹೋಗೋ ಜೇನು ನೊಣಗಳನ್ನ ಕಾಮ್ ಆಗಿ ಹ್ಯಾಂಡಲ್ ಮಾಡ್ಲೇಬೇಕು.
ಇದನ್ನೂ ಓದಿ: Kanthavara Kannada Sangha: ಕನ್ನಡ ಬೆಳೆಸೋಕೆ ಕಾಂತಾವರದ ಈ ಸಂಘವೇ ಮಾದರಿ
ಇಷ್ಟೆಲ್ಲದರ ನಡುವೆ ಅದರ ಪರಿಪಾಲನೆ ಮಾಡಿಕೊಂಡು ಉತ್ತಮ ಆದಾಯವನ್ನ ಗಳಿಸ್ತಾ ಇರುವ ರೋಷನ್ ಅವರ ಬದುಕು ಕೂಡಾ ಜೇನು ತುಪ್ಪದಂತೆ ಸಿಹಿಯಾಗಿರುವುದು ಖುಷಿಯ ವಿಚಾರ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ