ದಕ್ಷಿಣ ಕನ್ನಡ: ಓಯ್! ಮಾರಾಯ್ರೇ ಇದು ಯಾವುದರ ಹೋಳಿಗೆ ಗೊತ್ತುಂಟ ಮಾರ್ರೆ ನಿಮ್ಗೆ! ಚಾನ್ಸೇ ಇಲ್ಲ, ಅಷ್ಟು ಸುಲಭವಾಗಿ ನಿಮ್ಗ್ಯಾರಿಗೂ ಹೇಳಿಕ್ಕೆ ಸಾಧ್ಯವೇ ಇಲ್ಲ. ನೋಡೋದಕ್ಕೇನೋ ಚೂರು ಕಾಯಿ ಹೋಳಿಗೆ ಹಾಗೆಯೇ ಉಂಟು. ಆದ್ರೆ ಕಾಯಿ ಹೋಳಿಗೆಯೂ ಅಲ್ಲ, ಕಡಲೆಕಾಯಿ ಹೋಳಿಗೆನೂ (Kadlekayi Holige) ಅಲ್ಲ. ಹಾಗಾದ್ರೆ ಇದು ಯಾವುದರ ಹೋಳಿಗೆ (Holige) ಮಾರ್ರೆ ಅಂತಾ ಜಾಸ್ತಿ ತಲೆ ಬಿಸಿ ಮಾಡ್ಬೇಡಿ. ಇದು ಯಾವುದರ ಹೋಳಿಗೆ ಅಂತಾ ನಾವು ನಿಮ್ಗೇ ಹೇಳ್ತೀವಿ ನೋಡಿ.
ಹೌದು, ಹೀಗೆ ನೋಡ್ತಿದ್ರೇನೆ ಬಾಯಲ್ಲಿ ನೀರೂರಿಸೋ ಈ ಸಿಹಿ ಸಿಹಿಯಾದ ಹೋಳಿಗೆ ಮಾಡೋದು ಕೋಕೋದಿಂದ. ನಿಜ, ಆದ್ರೆ ಬೇರೆಲ್ಲ ಹೋಳಿಗೆಯಂತೆ ಮಾಡೋದಾಗ್ಲೀ, ಅದನ್ನ ಇಟ್ಟುಕೊಳ್ಳೋದಾಗಲೀ ಸುಲಭ ಅಲ್ದೇ ಹೋದ್ರೂ, ಇದರ ಟೇಸ್ಟ್ ಮಾತ್ರ ಸೂಪರ್ರೋ ಸೂಪರ್.
ಕೃಷಿಕ ತಯಾರಿಸಿದ ಕೋಕೋ ಹೋಳಿಗೆ
ಅಂದಹಾಗೆ ಇದು ದಕ್ಷಿಣ ಕನ್ನಡದ ಪುತ್ತೂರಿನ ಪುಣಚದ ನವೀನ್ ಕೃಷ್ಣ ಶಾಸ್ತ್ರಿಯವರು ತಯಾರಿಸಿದ ಕೋಕೋ ಹೋಳಿಗೆ. ಅವರು ತಾವೇ ಖುದ್ದು ಬೆಳೆದ ಕೋಕೋದಲ್ಲಿಯೇ ಈ ಕೋಕೋ ಹೋಳಿಗೆ ತಯಾರಿಸಿ ಊರಿಗೆಲ್ಲ ಸಿಹಿ ಹಂಚುತ್ತಿದ್ದಾರೆ. ಈ ಮೂಲಕ ಕೋಕೋವನ್ನ ಕೇವಲ ಚಾಕಲೇಟ್ ಸಂಸ್ಥೆಗೆ ಮಾರಿದ್ರೆ ಸಾಕು ಅಂತಿದ್ದವರಿಗೆ ನವೀನ ಕೃಷ್ಣ ಶಾಸ್ತ್ರಿಗಳು ಮಾದರಿ ಕೂಡಾ.
ಅಂತರ್ ಬೆಳೆಯಾಗಿ ಕೋಕೋ
ನವೀನ್ ಶಾಸ್ತ್ರಿಯವರು ಎಕರೆಗೆ ಇನ್ನೂರರಂತೆ ಹತ್ತು ಎಕರೆಗೆ ಕೋಕೋ ಗಿಡವನ್ನ ಅಂತರ್ಬೆಳೆಯಾಗಿ ಬೆಳೆಯುತ್ತಿದ್ದಾರೆ. ಮೊದಲೆಲ್ಲ ಬೆಳೆದ ಕೋಕೋ ಚಾಕಲೇಟ್ ತಯಾರಿಕಾ ಕಂಪೆನಿಗಳಾದ ಕ್ಯಾಡ್ಬರಿ, ಕ್ಯಾಂಪ್ಕೊಗೆ ನೀಡುತ್ತಿದ್ದರು.
ಇದನ್ನೂ ಓದಿ: Kalkuda Kallurti Daiva: ಕಲ್ಕುಡ-ಕಲ್ಲುರ್ಟಿ ದೈವವೇ ತನ್ನ ರೋಚಕ ಕಥೆ ಹೇಳಿದೆ ನೋಡಿ
ಆದರೆ ಕೋವಿಡ್ನಲ್ಲಿ ಕೋಕೋ ಖರೀದಿಸುವುದನ್ನ ಆ ಕಂಪೆನಿಯೂ ನಿಲ್ಲಿಸಿತ್ತು. ಶಾಸ್ತ್ರಿಗಳು ಈ ಕಾರಣದಿಂದ ಬೆಳೆದ ಕೊಕೋವನ್ನ ತಾವೇ ಹುರಿದು ಹೋಳಿಗೆ, ಚಾಕೋಲೆಟ್, ಪುಡಿಯನ್ನಾಗಿ ಮಾಡಿ ಮಾರೋದಕ್ಕೆ ಶುರುಮಾಡಿದರು. ಈಗ ಇವರು ತಮ್ಮ ಕೋಕೋ ಉತ್ಪನ್ನವನ್ನು ಸೂರತ್ಗೂ ಕಳಿಸುವಷ್ಟರ ಮಟ್ಟಿಗೆ ಬ್ಯುಸಿನೆಸ್ ಇಂಪ್ರೂವ್ ಮಾಡ್ಕೊಂಡಿದ್ದಾರೆ.
ಇದನ್ನೂ ಓದಿ: Elephant Training: ಆನೆಗಳಿಗೆ ಪಾಠ ಹೇಳೋ ಶಾಲೆಯಿದು! ಊಟ, ಪಾಠ, ತುಂಟಾಟ ಎಲ್ಲ ಇಲ್ಲೇ
ಕಂಪ್ಯೂಟರ್ ಸೈನ್ಸ್ ಓದಿರುವ ನವೀನ್ ಕೃಷ್ಣ ಶಾಸ್ತ್ರಿ ಅವರು ಕೋಕೋ ಬೆಳೆಯಿಂದ ಪ್ರತಿ ತಿಂಗಳು ಹೆಚ್ಚು ಕಡಿಮೆ ಇಪ್ಪತ್ತರಿಂದ ಮೂವತ್ತು ಸಾವಿರ ಆದಾಯವನ್ನೂ ಪಡೆಯುತ್ತಿದ್ದಾರೆ. ಬಾಲ್ಯದಿಂದಲೇ ಕೃಷಿ ಬಗ್ಗೆ ಆಸಕ್ತರಾದ ಇವರು ಕೋಕೋ ಬೆಳೆಯಿಂದ ಕಂಡುಕೊಂಡ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಹಾಗಿದ್ರೆ ಇನ್ಯಾಕೆ ತಡ ನೀವೂ ಕೂಡಾ ಕೋಕೋ ಹೋಳಿಗೆ ರುಚಿ ನೋಡೇ ಬಿಡಿ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ