ದಕ್ಷಿಣ ಕನ್ನಡ: ತೆಂಗು, ರಬ್ಬರ್ ಜೊತೆಗೆ ಒಂದಷ್ಟು ಹಂದಿ, ಕೋಳಿ. ಅಲ್ಲಲ್ಲಿ ಮೇಯುತ್ತಿರೋ ದನಗಳು. ಹೀಗೆ ಕೃಷಿ, ಹೈನುಗಾರಿಕೆ ಎರಡನ್ನೂ ನೆಚ್ಚಿಕೊಂಡು ಇಲ್ಲೋರ್ವ ಮಹಿಳೆ ಸಕ್ಸಸ್ (Agriculture Success Story) ಕಂಡಿದ್ದಾರೆ. ಮನೆ ಮಂದಿಯ ಸಪೋರ್ಟ್, ಕೃಷಿ ಇಲಾಖೆಯ ಅಗತ್ಯ ಮಾರ್ಗದರ್ಶನ ಅವರ ತೋಟವನ್ನ ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡಿದೆ. ಹಾಗಿದ್ರೆ ಹೇಗಿದೆ ನೋಡಿ ಈ ಲೇಡಿಯ (Women Success Story) ಕೃಷಿ ಸಕ್ಸಸ್ ಸ್ಟೋರಿ.
ಇವರು ಅನಿತಾ ಪುಷ್ಪಾ ಪೆರೆರಾ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕೊಕ್ರಾಡಿಯಲ್ಲಿರುವ ಇವರ 18 ಹೆಚ್ಚಿನ ಎಕರೆ ಜಾಗಕ್ಕೆ ಕಾಲಿಟ್ಟರೆ ಹಸಿರ ಸಿರಿ ನಿಮ್ಮ ಮೈಮರೆಸೋದು ಖಚಿತ. ಹಂದಿ, ಆಕಳು, ಕೋಳಿ ಸಾಕಣೆ ಜೊತೆಗೆ ಇವರು ಕೃಷಿಯನ್ನೂ ಮಾಡ್ತಿದ್ದಾರೆ.
ಪೊದೆಗಳಿಂದಲೇ ತುಂಬಿತ್ತು ಜಾಗ
ಅನಿತಾ ಪೆರೆರಾ ಅವರು, 2000 ನೇ ಇಸ್ವಿಯಲ್ಲಿ ಈ ಜಾಗವನ್ನು ಖರೀದಿಸುವಾಗ ಬರೀ ಪೊದೆಗಳೇ ತುಂಬಿಹೋಗಿದ್ದವು. ಆದ್ರೀಗ ಈ ಜಾಗ ಹಚ್ಚಹಸಿರ ಭೂಮಿಯಾಗಿದ್ದು ಕೃಷಿ ಫಸಲುಗಳ ಸಂಪದ್ಭರಿತ ಜಮೀನಾಗಿ ಬದಲಾಗಿದೆ.
2007ರಿಂದ ಸತತ ಕೃಷಿಯಲ್ಲೇ ತೊಡಗಿರುವ ಅನಿತಾ ಅವರು ಮಾಡದ ಕೃಷಿ ಕೆಲಸವಿಲ್ಲ. ಕತ್ತಲಾದರೆ ರಬ್ಬರ್ ಟ್ಯಾಪಿಂಗ್, ಬೆಳಗಿನ ಅವಧಿಯಲ್ಲಿ ಅಡುಗೆ ಜೊತೆ ಅಡಿಕೆಯ ಕೆಲಸ ಹೀಗೆ ಕೃಷಿಯನ್ನ ಬಹಳವಾಗಿ ಅಪ್ಪಿಕೊಂಡಿದ್ದಾರೆ. ಕೋವಿಡ್ ಮೊದಲು 80 ಲೀಟರ್ ಹಾಲು ಉತ್ಪಾದನೆಯೂ ಆಗುತ್ತಿತ್ತಂತೆ.
ಇದನ್ನೂ ಓದಿ: Dakshina Kannada: ಇವ್ರಿಗೆ ಮೆಸ್ಕಾಂ ಬೇಡ, ಕರೆಂಟ್ ಬಿಲ್ ಕೂಡಾ ಬರಲ್ಲ; ತೋಟದಲ್ಲೇ ತಯಾರಾಗುತ್ತೆ ವಿದ್ಯುತ್!
ಗಂಡ ಮಕ್ಕಳಿಂದಲೂ ಸಾಥ್
ರಬ್ಬರ್ ಒಣಗಿಸೋಕೆ ಸಣ್ಣ ಸ್ಮೋಕಿಂಗ್ ಕೋಣೆ ಮಾಡಿಕೊಂಡಿದ್ದು, ಸ್ಮೋಕಿಂಗ್ ಕೋಣೆಯಲ್ಲಿ ನೀರು ಕೂಡ ಕುದಿಯುವಂತೆ ಹಾಗೂ ಅಡಿಕೆ ಕೂಡ ಒಣಗೋ ತರ ಮಾಡ್ಕೊಂಡಿದಾರೆ. ಇನ್ನು 18 ಎಕರೆ ತೋಟದಲ್ಲಿ ಹಸು ಹಾಗೂ ಹಂದಿ ಮೇವಿಗೆ ಸರ್ಕಾರಿ ಹುಲ್ಲು, ಅಡಿಕೆ ಸಸಿ ಹೀಗೆ ಬೇಡವೆಂದರೂ ಐದಾರು ಬಗೆಯ ವಾಣಿಜ್ಯ ಬೆಳೆಗಳು ಕಾಣಸಿಗುತ್ತೆ. ಅನಿತಾ ಪೆರೆರಾ ಅವರ ಈ ಕಾರ್ಯಕ್ಕೆ ಗಂಡ ಹಾಗೂ ಮಕ್ಕಳು ಕೂಡ ಸಾಥ್ ಕೊಡ್ತಿದ್ದಾರೆ. ಹೀಗಾಗಿ ಅನಿತಾ ಅವರ ಪ್ರಯತ್ನವೂ ಹೆಚ್ಚಿದೆ. ಅರ್ಹವಾಗಿಯೇ ಹಲವಾರು ಅವಾರ್ಡುಗಳು ಕೂಡ ಹುಡುಕಿಕೊಂಡು ಬಂದಿವೆ.
ಇದನ್ನೂ ಓದಿ: Success Story: ಜೇನು ಸಾಕಿ ಸಕ್ಸಸ್ ಆದ ಕರಾವಳಿ ಯುವಕ, ಇವರ ಸಾಧನೆ ಕೇಳಿದ್ರೆ ಹುಬ್ಬೇರಿಸ್ತೀರ!
ಒಟ್ಟಿನಲ್ಲಿ ಕೃಷಿ ಅಂದರೆ ಒಲ್ಲೆ ಅನ್ನೋ ಈ ಕಾಲದಲ್ಲಿ ಕೃಷಿ ಮಾಡಿ ಲಕ್ಷಗಟ್ಟಲೆ ಆದಾಯಗಳಿಸುತ್ತಿರೋ ಅನಿತಾ ಪುಷ್ಪಾ ಪೆರೆರಾ ಮಾದರಿಯಾಗಿದ್ದಾರೆ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ