ಹಚ್ಚಹಸಿರಿನ ಬಸಳೆ ತೋಟ, ಬಿಸಿಲಿಗೆ ಮೈಯೊಡ್ಡಿ ನಗುತ್ತಿರೋ ಹಸಿರು ಎಲೆಗಳು. ಕರಾವಳಿಯಲ್ಲಿ ತೆಂಗಿನ ತೋಟ (Coconut Plant) ನೋಡಿದ್ದೀರಿ. ಆದ್ರೆ ಹೀಗೆ ಸದಾ ಹಚ್ಚ ಹಸಿರಾಗಿ ನಳನಳಿಸೋ ಈ ಬಸಳೆ ತೋಟ ನೋಡಿದ್ದೀರಾ? ನಾವ್ ತೋರಿಸ್ತೀವಿ ನೋಡಿ. ಕರಾವಳಿಯ (Coastal Karnataka) ಕೃಷಿಕರೋರ್ವರು ಬಸಳೆ ತೋಟವನ್ನೇ (Malabar Spinach) ಮಾಡಿ ಸಕ್ಸಸ್ ಕಂಡಿದ್ದಾರೆ. ಯಾಕಂದ್ರೆ ಕರಾವಳಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬಸಳೆ ಬೆಳೆಸೋದು ಸುಲಭದ ಮಾತಲ್ಲ
40 ರಿಂದ 50 ಸಾವಿರದವರೆಗೂ ಆದಾಯ!
ನಿಜ, ಕರಾವಳಿಯಲ್ಲಿ ಬಸಳೆ ಬೆಳೆಯೋದು ಸುಲಭದ ಮಾತಲ್ಲ. ಬಸಳೆ ಮಳೆಗೆ ಕೊಳೆಯುತ್ತೆ, ಚಳಿಗೆ ಇಳುವರಿ ಕಡಿಮೆಯಾಗುವ ಬೆಳೆ. ಆದ್ರೆ ದಕ್ಷಿಣ ಕನ್ನಡದ ಬಂಟ್ವಾಳದ ನಾವೂರು ಗ್ರಾಮದ ಮೈಂದಳೆ ನಿವಾಸಿ ತಾರಾನಾಥ ಕುಲಾಲ್ ಬಸಳೆ ಬೆಳೆದು ಫೇಮಸ್ ಆಗಿದ್ದಾರೆ. ತಿಂಗಳಿಗೆ 40 ರಿಂದ 50 ಸಾವಿರ ಆದಾಯವನ್ನೂ ಗಳಿಸಿ ಹುಬ್ಬೇರಿಸುವ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: Dakshina Kannada: ಅಷ್ಟಮಂಗಲದ ಪ್ರಕಾರವೇ ಪತ್ತೆಯಾಯ್ತು ಶಿವಲಿಂಗ!
ಸಾವಯವ ಪದ್ಧತಿಯ ಬಳಕೆ
ತಾರಾನಾಥ್ ಅವ್ರು ತಮ್ಮ ಕೃಷಿ ಜಮೀನಿನ ಅರ್ಧ ಎಕರೆ ಬಸಳೆ ಬೆಳೆಗಾಗಿಯೇ ಮೀಸಲಿರಿಸಿದ್ದಾರೆ. ಬಸಳೆ ಎಲೆಗಳಿಗೆ ಕೊಳೆರೋಗ ಬಾರದಂತೆ ಸಾವಯವ ಪದ್ಧತಿಯ ಜೀವಾಮೃತ ಅವಲಂಬಿಸಿಕೊಂಡಿದ್ದಾರೆ.
ಮಲ್ಲಿಗೆ, ತೊಂಡೆ ಬೆಳೆಯನ್ನೂ ಬೆಳೆಯುತ್ತಾರೆ!
ಉತ್ತಮ ಮಾರ್ಕೆಟಿಂಗ್ ಮಾಡಿ ಉತ್ತಮ ಆದಾಯವನ್ನೂ ಗಳಿಸ್ತಿದ್ದಾರೆ. ಸ್ಥಳೀಯ ಗ್ರಾಮಗಳಿಗಂತೂ ತಾರಾನಾಥ ಕುಲಾಲ್ ಜಮೀನಿನ ಬಸಳೆಯೇ ಅಚ್ಚುಮೆಚ್ಚಿನ ತರಕಾರಿ. ತಾರಾನಾಥ ಅವರು ಬಸಳೆಯ ಜೊತೆಜೊತೆಗೆ ಮಲ್ಲಿಗೆ ಮತ್ತು ತೊಂಡೆ ಬೆಳೆಯನ್ನೂ ಬೆಳೆಯುತ್ತಿದ್ದಾರೆ.
ಇದನ್ನೂ ಓದಿ: Jodukare Kambala: ರಣ ರೋಚಕ ಜೋಡುಕರೆ ಕಂಬಳ, ಕುದುರೆಗಳೂ ನಾಚುವಂತೆ ಓಡಿದ ಕೋಣಗಳು!
ಒಟ್ಟಾರೆ ಕರಾವಳಿಯಲ್ಲೂ ಬಸಳೆ ಬೆಳೆದು ಸಖತ್ ಆದಾಯ ಗಳಿಸ್ತಿರೋ ತಾರಾನಾಥ್ ಅವ್ರಿಗೆ ಒಂದು ಆಲ್ ದಿ ಬೆಸ್ಟ್ ಹೇಳೋಣ ಅಲ್ವಾ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ