Dakshina Kannada: ಕಡೇಶಿವಾಲಯ ಶಾಲೆಯ ವಿದ್ಯಾರ್ಥಿಗಳು ಕೃಷಿಕರೂ ಹೌದು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಶಾಲೆಯಲ್ಲಿ ದೈಹಿಕ ಶಿಕ್ಷಕರು ದೈಹಿಕ ಶಿಕ್ಷಣದ ಪಾಠ ಮಾಡುವುದು ಸಹಜ. ಆದ್ರೆ, ಇಲ್ಲೊಂದು ಶಾಲೆಯಲ್ಲಿ ಪಿಟಿ ಮೇಷ್ಟ್ರು ಕೃಷಿ ಪಾಠವನ್ನೂ ಹೇಳಿಕೊಡುತ್ತಿದ್ದಾರೆ!

  • Share this:

    ದಕ್ಷಿಣ ಕನ್ನಡ: ಎದೆಯೆತ್ತರಕ್ಕೆ ಬೆಳೆದಿರೋ ಪಪ್ಪಾಯಿ ಗಿಡಗಳು, ಗೊಂಚಲು ಗೊಂಚಲು ಆಗಿ ಫಲ ನೀಡಿರೋ ಅಡಿಕೆ ಮರ, ಮಾಗೋದಕ್ಕೆ ರೆಡಿ ಆಗಿರೋ ಸೀತಾಫಲ, ಮರದ ಮರೆಯಿಂದ ಇಣುಕೋ ತೆಂಗುಹೀಗೆ ಅದ್ಯಾವ ಕೃಷಿ ತೋಟಕ್ಕೂ ಕಡಿಮೆಯಿಲ್ಲದ ಜಮೀನಿದು. ಹಾಗಿದ್ರೆ ಇದು ಯಾವುದೋ ಕೃಷಿಕನಿಗೆ (Farmer) ಸೇರಿದ ತೋಟ ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪು. ಬದಲಿಗೆ ಇದು ದಕ್ಷಿಣ ಕನ್ನಡ  ಜಿಲ್ಲೆಯ (Dakshina Kannada News) ಶಾಲೆಯೊಂದರ ಕೃಷಿ ತೋಟ ಅಂದ್ರೆ ನೀವು ನಂಬ್ಲೇಬೇಕು.


    ಒಂದೆರಡು ಗಿಡಗಳಿಂದ ಆರಂಭ
    ಬಂಟ್ವಾಳ ಸಮೀಪದ ಪೆರ್ಲಾಪುವಿನ ಕಡೇಶಿವಾಲಯದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅಂದ್ರೆ ನೆನಪಿಗೆ ಬರೋದು  ನಳನಳಿಸುವ ಕೃಷಿ ತೋಟ. 201 ವಿದ್ಯಾರ್ಥಿಗಳು, 6 ಶಿಕ್ಷಕರಿರುವ ಈ ಶಾಲೆ ವಿಶಿಷ್ಟ ಕಾರಣವೊಂದಕ್ಕೆ ಭಾರೀ ಫೇಮಸ್. ನಿಜ, ಕೆಲ ವರ್ಷಗಳ ಹಿಂದೆ ಬರೀ ಒಂದೆರಡು ಗಿಡಗಳಿಂದ ಶುರುವಾದ ಕೃಷಿ ಚಟುವಟಿಕೆ ಇದೀಗ ಶಾಲಾ ಆವರಣದ ಕಾಲು ಭಾಗದಷ್ಟು ಆವರಿಸಿಕೊಂಡಿದೆ.


    ವಿದ್ಯಾರ್ಥಿಗಳ ಶ್ರಮ
    ಕೈತೋಟವನ್ನ ವಿದ್ಯಾರ್ಥಿಗಳೇ ಪರಿಶ್ರಮ ವಹಿಸಿ ನಿರ್ಮಿಸಿದ್ದು ಇನ್ನೊಂದು ವಿಶೇಷ. ಅಷ್ಟೇ ಅಲ್ದೇ, ಶಾಲಾ ಆವರಣದಲ್ಲಿ ಔಷಧಿ ವನ, ಬಾಳೆಗಿಡ, ಸೀತಾಫಲ, ಮುಳ್ಳುಹಣ್ಣು, ಮಾವು, ಪಪ್ಪಾಯ ಹೀಗೆ ನೂರಕ್ಕೂ ಹೆಚ್ಚು ಸಸ್ಯಗಳು ಇಲ್ಲಿವೆ. ಸುಮಾರು 60 ಅಡಿಕೆ ಮರ ಇಲ್ಲಿದ್ದು ಉತ್ತಮ ಫಲ ಕೊಡುತ್ತಿದೆ.


    ಇದನ್ನೂ ಓದಿ: Nyaya Basadi: ನ್ಯಾಯ ಬೇಕಂದ್ರೆ ಇಲ್ಲೇ ಬರ್ಬೇಕು! ಮೂಡುಬಿದಿರೆಯಲ್ಲೊಂದು ಅಚ್ಚರಿಯ ತಾಣ

    ದೈಹಿಕ ಶಿಕ್ಷಕರ ಕೃಷಿ ಪಾಠ
    ಶಾಲೆಯ ದೈಹಿಕ ಶಿಕ್ಷಕರಾದ ಭಾಸ್ಕರ ನಾಯ್ಕ್ ಅವರ ಆಸಕ್ತಿಯಿಂದ ಶುರುವಾಗಿತ್ತು  ಕೃಷಿ ತೋಟ. ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಸಾಥ್ ಸಿಕ್ಕ ಬಳಿಕ ಕೃಷಿ ಚಟುವಟಿಕೆಗಳು ಹೆಚ್ಚಾಗಿವೆ.  ಇದೀಗ ಭಾಸ್ಕರ್ ನಾಯ್ಕ್ ಅವರು ದೈಹಿಕ ಶಿಕ್ಷಣದ ಜೊತೆ ಜೊತೆಗೆ ಕೃಷಿಯನ್ನು ಕಲಿಸಿಕೊಡುತ್ತಿದ್ದಾರೆ.


    ಇದನ್ನೂ ಓದಿ: Success Story: ಕೃಷಿ, ಹೈನುಗಾರಿಕೆ, ಪಶುಪಾಲನೆ ಎಲ್ಲದರಲ್ಲೂ ಈ ಮಹಿಳೆ ಇಟ್ಟಿದ್ದೇ ಹೆಜ್ಜೆ!



    ಸ್ಥಳೀಯರ ಸಹಕಾರ
    ಇದಕ್ಕೆ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಸಹಕಾರವೂ ಇದ್ದು, SDMC ಸೇರಿದಂತೆ ಊರವರ ಸಹಕಾರವೂ ಕಡಿಮೆಯೇನದ್ದಲ್ಲ. ಒಟ್ಟಿನಲ್ಲಿ ನಾಲ್ಕು ಗೋಡೆಗಳ ಸುತ್ತ ಕಲಿಯೋ ಪಾಠದ ಜೊತೆಗೆ ಪರಿಸರದ ಜೊತೆ ಬೆರೆತು ಫಸಲು ತೆಗೆಯುವ ಸರ್ಕಾರಿ ಶಾಲೆಯ ಪಾಠ ನಿಜಕ್ಕೂ ಮಾದರಿಯಾಗುವಂತಿದೆ. 


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು