ಇಲ್ಲಿಗೆ ಬರೋ ಭಕ್ತರ ಕೈಯ್ಯಲ್ಲಿ ಹಾರ, ತುರಾಯಿ ಬದಲು ಸೀಯಾಳವಿರುತ್ತೆ. ಭಕ್ತರು ಇಷ್ಟಾರ್ಥಗಳ ಬೇಡಿಕೆ ಈಡೇರೋಕೆ ಇಲ್ಲಿರೋ ಹನುಮನಿಗೆ (Lord Hanuman) ಎಳನೀರು ಸಮರ್ಪಿಸ್ತಾರೆ. ಈ ಹನುಮನಿಗೆ (Hanuman Temple Moodbidri) ಎಳ್ಳೆಣ್ಣೆ ಅಲ್ಲ, ಸೀಯಾಳದ (Tender Coconut Water) ಅಭಿಷೇಕವೇ ನಡೆಯುತ್ತೆ. ಹಾಗಿದ್ರೆ ಈ ಅಪರೂಪದ ಪವಿತ್ರ ಕ್ಷೇತ್ರ ಯಾವುದು ಅಂತೀರಾ? ಹೇಳ್ತೀವಿ ನೋಡಿ.
ಹೌದು, ರಾಮ ಬಂಟ ಹನುಮನಿಗೆ ಎಳ್ಳೆಣ್ಣೆ ಅಭಿಷೇಕ ಮಾಡುವ ಪದ್ಧತಿಯಿದೆ. ಆದರೆ ದಕ್ಷಿಣ ಕನ್ನಡದ ಮೂಡುಬಿದಿರೆಯ ಈ ಹನುಮಂತನಿಗೆ ಸೀಯಾಳ ಅಭಿಷೇಕ ನಡೆಸಿ ಪೂಜಿಸಲಾಗುತ್ತೆ. ಹಾಗಾಗಿ ಇಲ್ಲಿಯ ಹನುಮಂತ ಬೊಂಡ ಪ್ರಿಯ ಎಂದೇ ಪ್ರಸಿದ್ಧಿ ಪಡೆದಿದ್ದಾನೆ.
ಈ ಹನುಮ ಕೊಡುವ ಭಕ್ತರು ಬೇಡಿದ ವರವ!
ಹೀಗಾಗಿ ಕ್ಷೇತ್ರಕ್ಕೆ ಸೀಯಾಳ ಹಿಡಿದುಕೊಂಡೇ ಭಕ್ತರು ಆಗಮಿಸ್ತಾರೆ. ಹೀಗೆ ದಿನನಿತ್ಯ ಸಾವಿರಾರು ಶೀಯಾಳಗಳನ್ನ ಭಕ್ತರಿಂದ ಪಡೆಯುವ ಹನುಮಂತ ಭಕ್ತರು ಬೇಡಿದ ವರ ಕೊಡುವ ಪ್ರತೀತಿಯಿದೆ. ವ್ಯಾಜ್ಯಗಳೇ ಆಗಿರಲಿ, ಆರೋಗ್ಯ ಸಮಸ್ಯೆಯೆ ಆಗಿರಲಿ, ಇಲ್ಲಿರೋ ಭಜರಂಗಿ ಬಗೆಹರಿಸದ ಸಮಸ್ಯೆಗಳೇ ಇಲ್ಲವಂತೆ.
ಹನುಮಂತನ ಪಾದಕ್ಕೆ ಸೀಯಾಳ ಅರ್ಪಣೆ
ಮೂಡುಬಿದಿರೆಯ ಹೃದಯಭಾಗದಲ್ಲಿರುವ ಹನುಮ ಮಂದಿರ ಸೀಯಾಳಾಭಿಷೇಕಕ್ಕೆ ಭಾರೀ ಫೇಮಸ್. ಕೋವಿಡ್ಗಿಂತ ಮೊದಲು ಅರ್ಧ ದೇಗುಲ ತುಂಬುವಷ್ಟು ಸೀಯಾಳಗಳು ಭಕ್ತರಿಂದ ಬರುತ್ತಿತ್ತು. ಕೋವಿಡ್ ನಂತರ ಒಬ್ಬರಿಗೆ ಒಂದು ಸೀಯಾಳ ಮಾತ್ರ ಅನ್ನೋ ನಿಯಮ ಮಾಡಲಾಗಿದೆ. ಹೀಗೆ ಭಕ್ತರಿಂದ ಬಂದ ಸೀಯಾಳಗಳನ್ನ ಹನುಮಂತನ ಪಾದಕ್ಕೆ ಸಮರ್ಪಿಸಿ ಹನುಮನಿಗೆ ಮಜ್ಜನ ಮಾಡಲಾಗುತ್ತೆ.
ಇದನ್ನೂ ಓದಿ: Ganapathi Temple: ಭಕ್ತರಿಂದಲೇ ದೇಗುಲ ಕಟ್ಟಿಸಿಕೊಂಡ ದೇಲಂಪುರಿಯ ಗಣಪ!
ಹಲವೆಡೆಯಿಂದ ಆಗಮಿಸುವ ಭಕ್ತರು
ಈ ಎಳನೀರು ಪ್ರಿಯ ಹನುಮನನ್ನ ನೋಡಲು ಮಂಗಳೂರು, ಬೆಂಗಳೂರು, ಶಿರಸಿ ಹೀಗೆ ಹಲವಾರು ಭಾಗಗಳಿಂದ ಭಕ್ತಾದಿಗಳು ಪ್ರತಿದಿನ ಆಗಮಿಸ್ತಾರೆ. ತಮ್ಮ ಸಮಸ್ಯೆಗಳನ್ನು ಹನುಮಂತನ ಎದುರಿಟ್ಟು ಪರಿಹಾರವನ್ನು ಕಂಡುಕೊಳ್ಳುತ್ತಾರೆ.
ಇದನ್ನೂ ಓದಿ: Success Story: ಬಸಳೆ ಬೆಳೆದು ತಿಂಗಳಿಗೆ 40 ಸಾವಿರ ಆದಾಯ ಗಳಿಸ್ತಿರೋ ಕರಾವಳಿ ಕೃಷಿಕ!
ಹೀಗೆ ಮೂಡುಬಿದಿರೆಯ ಹನುಮಾನ್ ದೇಗುಲವು ಸೀಯಾಳಭಿಷೇಕದಿಂದ ಗಮನ ಸೆಳೆಯುತ್ತಾನೆ. ಮೂಡುಬಿದಿರೆ ಕಡೆ ಪ್ರವಾಸ ಬಂದ್ರೆ ಈ ದೇಗುಲಕ್ಕೂ ಭೇಟಿ ಆಂಜನೇಯನನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ