ಮಂಗಳೂರು: ಶ್ರೀಗಂಧ, ರುದ್ರಾಕ್ಷಿ, ಭದ್ರಾಕ್ಷಿ, ರಕ್ತ ಚಂದನ, ಹೊನ್ನೆ, ದರ್ಬೆ, ಬಜೆ, ಅಂಕೋಲೆ ಹೀಗೆ ಅಪರೂಪದಲ್ಲಿ ಅಪರೂಪ ಅನ್ನೋವಂತಹ ಮರಗಳ (Trees) ಸಾಲು. ಕರಾವಳಿಯಲ್ಲಿ (Coastal Karnataka) ಕಷ್ಟಪಟ್ಟರೂ ಬೆಳೆಯದು ಅನ್ನೋ ವೃಕ್ಷಗಳು. ಔಷಧೀಯ ಗಿಡಗಳಿಂದ (Medicine Plants) ಹಿಡಿದು ಅಧ್ಯಾತ್ಮದ ಸೆಳೆತ ಹುಟ್ಟುಹಾಕುವ ಮರಗಳು ಇಲ್ಲಿವೆ. ಹಾಗಿದ್ರೆ ಇದು ಎಲ್ಲಿದೆ? ಹೇಗಿದೆ? ಇದೆಲ್ಲವನ್ನೂ ಹೇಳ್ತೀವಿ ನೋಡಿ.
ಇದು ದಕ್ಷಿಣ ಕನ್ನಡದ ಮೂಡುಬಿದಿರೆಯ ಮಿಜಾರಿನ ಶೋಭಾವನ. ಐದು ಎಕರೆ ಜಾಗದಲ್ಲಿರುವ ಈ ವನದಲ್ಲಿ ನೂರಕ್ಕೂ ಅಧಿಕ ತಳಿಗಳು, ಸಾವಿರಕ್ಕೂ ಹೆಚ್ಚು ಮರಗಳಿವೆ. ಆಯುರ್ವೇದದಲ್ಲಿ ಹೇಳಲಾದ ಸಸ್ಯಗಳು, ರಾಶಿಗೆ ಮೀಸಲಿಟ್ಟ ಸಸ್ಯಗಳು, ಪೂಜೆಗೆಂದೇ ಇರುವ ಸಸ್ಯಗಳು ಎಲ್ಲಾ ಇಲ್ಲಿವೆ ಅನ್ನೋದು ಇಲ್ಲಿನ ವಿಶೇಷ. ಎಲ್ಲ ಸಸ್ಯಗಳಿಗೂ ಬೊಟಾನಿಕಲ್ ಹೆಸರುಗಳಿದ್ದು ಜೊತೆಗೆ ಸ್ಥಳೀಯ ಹಾಗೂ ಸಂಸ್ಕೃತದ ಹೆಸರುಗಳನ್ನ ಕೂಡ ಬರೆಯಲಾಗಿದೆ.
ಹಿಮಾಲಯದಲ್ಲಿ ಬೆಳೆಯುವ ಸಸ್ಯಗಳೂ ಇವೆ!
ಇಲ್ಲಿರುವ ಸಸ್ಯಗಳಲ್ಲಿ ಬಹುತೇಕ ಪಶ್ಚಿಮಘಟ್ಟದ ವಿರಳ, ಅತಿ ವಿರಳ ಸಸ್ಯಗಳಾಗಿವೆ. ಕೆಲ ಸಸ್ಯಗಳು ಹಿಮಾಲಯದಂತಹ ಪರ್ವತ ಪ್ರದೇಶಗಳಲ್ಲಿ ಬೆಳೆಯುವಂತಹ ಸಸ್ಯಗಳಾಗಿವೆ.
ಇದನ್ನೂ ಓದಿ: Success Story: ದೃಷ್ಟಿ ಸಮಸ್ಯೆ ಇದ್ರೂ CA ಪರೀಕ್ಷೆಯಲ್ಲಿ ಸಾಧನೆ!
ಸಸ್ಯಗಳಿಗೂ ಅಧ್ಯಾತ್ಮಕ್ಕೂ ಇದೆ ಸಂಬಂಧ!
ಇನ್ನು ಈ ಶೋಭಾವನ ಆಯುರ್ವೇದ, ಸಸ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಅಧ್ಯಯನದ ವನವೂ ಆಗಿದೆ. ಆಳ್ವಾಸ್ನ ಮಿಜಾರ್ ಕ್ಯಾಂಪಸ್ನಲ್ಲಿ ಕಂಡುಬರುವ ಈ ಉದ್ಯಾನವನದಲ್ಲಿ ಅಧ್ಯಾತ್ಮಕ್ಕೆ ಸಂಬಂಧಿಸಿದ ಸಸ್ಯಗಳೂ ಅಧಿಕ ಪ್ರಮಾಣದಲ್ಲಿವೆ.
ಇದನ್ನೂ ಓದಿ: Mangaluru Special Talent: ಮಂಗಳೂರಿನ ವಿಶೇಷ ಪ್ರತಿಭೆ! ಕಣ್ಣಿಗೆ ಬಟ್ಟೆ ಕಟ್ಟಿ ಎರಡೂ ಕೈಯಲ್ಲಿ ಬರೆಯುವ ಬಾಲಕಿ
ಸತ್ಯನಾರಾಯಣನ ಪೂಜೆ, ನವಗ್ರಹಕ್ಕೆ ಸಂಬಂಧಿಸಿದ್ದಲ್ಲದೇ ಗಣಪತಿ, ಈಶ್ವರನಿಗೆ ಸಂಬಂಧಿಸಿದ ಗಿಡಗಳೂ ಇಲ್ಲಿವೆ. ಒಟ್ಟಿನಲ್ಲಿ ಸಸ್ಯ ಪರಿಚಯದ ಜೊತೆ ಜೊತೆಗೆ ಅಳಿವಿನಂಚಿನಲ್ಲಿರುವ ಸಸ್ಯಗಳ ಉಳಿಸುವ ಪ್ರಯತ್ನವೂ ಈ ಶೋಭಾವನದಲ್ಲಿ ಸಾಗಿ ಬಂದಿದೆ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ