ಆಯಕಟ್ಟಿನ ರಸ್ತೆ, ಬದಿಯಲ್ಲೊಂದು ಹಳೆಮನೆ. ಎಂತವರ ಮನಸನ್ನೂ ಸೆಳೆಯುವ ಮರದ ದೊಡ್ಡ ದೊಡ್ಡ ಕಂಬಗಳು. ನೋಡೋದಕ್ಕೂ ಪುರಾತನ ಮನೆ. ನಿಜ, ಈ ಮನೆಯೇ ಕನ್ನಡದ ಶ್ರೇಷ್ಠ ಕವಿಯೋರ್ವರ ಜನ್ಮ ತಾಣ. ಹಾಗಿದ್ರೆ ಆ ಕವಿ ಯಾರು? ಈ ಮನೆ ಯಾರದ್ದು? ಇದನ್ನೆಲ್ಲ ಹೇಳ್ತೀವಿ ನೋಡಿ. ಯೆಸ್, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಶಿರ್ತಾಡಿ ರಸ್ತೆಗೆ ತಾಕಿಕೊಂಡಿರುವ ಈ ಹಳೆಯ ಮನೆಗೆ ಭವ್ಯ ಇತಿಹಾಸವಿದೆ.
ಇದು ಜೈನ ಧರ್ಮದ ಪ್ರಮುಖ ದಾರ್ಶನಿಕ, ಕನ್ನಡದ ಮೇರು ಕವಿ, ರತ್ನಾಕರವರ್ಣಿ ಹುಟ್ಟಿ, ಬೆಳೆದು ಕೃತಿಗಳನ್ನು ರಚಿಸಿದ ಮನೆಯಿದು. ಮನೆಯೂ ಕುತೂಹಲ ಹುಟ್ಟಿಸುವಂತಿದೆ. ಸಣ್ಣ ಸಣ್ಣದಾದ ಬಾಗಿಲುಗಳು, ಒಳಗೆ ಹೊಕ್ಕರೆ ವಿಶಾಲವಾದ ಕೋಣೆಗಳು, ಕೋಣೆಯೊಳಗೆ ನಡೆಯತ್ತಿದ್ದಂತೆ ಹಳೆಯ ಕಾಲದ ಮರಗಳಿಂದಾದ ಜಂತಿಗಳು ಕಾಣಸಿಗುತ್ತೆ.
ಇದನ್ನೂ ಓದಿ: High-Tech Bus Stand: ದಕ್ಷಿಣ ಕನ್ನಡದಲ್ಲಿ ರಾಜ್ಯದ ಮೊದಲ ಹೈಟೆಕ್ ಬಸ್ ಸ್ಟಾಂಡ್! ಎಷ್ಟೇ ರಾತ್ರಿಯಾದ್ರೂ ಸೇಫ್!
ಕಬ್ಬಿಣದ ಸಲಾಕೆಗಳಿಗೆ ಇಂದಿಗೂ ತುಕ್ಕು ಹಿಡಿದಿಲ್ಲ!
ಮನೆಯ ಹೃದಯಭಾಗವನ್ನು ಸಂಪೂರ್ಣವಾಗಿ ಕಲ್ಲಿನಿಂದ ರಚಿಸಲಾಗಿದೆ. ದೇವರ ಕೋಣೆಗೆ ಎದುರಾಗಿ ತೂಗು ಮಂಚವೊಂದಿದೆ. ಈ ತೂಗು ಮಂಚ ಐನೂರು ವರ್ಷ ಹಳೆಯದಾಗಿದ್ದು, ಕಬ್ಬಿಣದ ಸಲಾಕೆಗಳಿಗೆ ಇಂದಿಗೂ ತುಕ್ಕು ಹಿಡಿದಿಲ್ಲ ಅನ್ನೋದು ವಿಶೇಷ. ರತ್ನಾಕರವರ್ಣಿ ಅವರು ಇಲ್ಲೇ ಕೂತು ಭರತೇಶ ವೈಭವ ಬರೆದಿರುವರು ಅನ್ನೋ ಐತಿಹ್ಯವಿದೆ.
ಇದನ್ನೂ ಓದಿ: Dakshina Kannada: ಬೀದಿನಾಯಿಗಳ ಊಟಕ್ಕೆ ಸೀಮೆಎಣ್ಣೆ, ಇದು ಮಹಾತಾಯಿಯ ಸಂಕಷ್ಟ
ನೀವೂ ಕಣ್ತುಂಬಿಸಿಕೊಳ್ಳಿ
ಈ ಮನೆ ಹೊಕ್ಕರೆ ಸಾಕು ಎಂತವನಿಗೂ ವಿಶಿಷ್ಟ ಅನುಭವ ನೀಡೋದರಲ್ಲಿ ಸಂಶಯವಿಲ್ಲ. ಮೂಡುಬಿದಿರೆಗೆ ಬಂದ್ರೆ ರತ್ನಾಕರ ವರ್ಣಿಯ ಈ ಮನೆಯನ್ನೂ ಕಣ್ತುಂಬಿಕೊಳ್ಳಿ. ಜೊತೆಗೆ ಕನ್ನಡದ ಶ್ರೇಷ್ಠ ಕಾವ್ಯ ಭರತೇಶ ವೈಭವವನ್ನೂ ಮೆಲುಕು ಹಾಕಿಕೊಳ್ಳುವುದನ್ನು ಮರೆಯಬೇಡಿ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ