Ramadan 2023: ಕರಾವಳಿಯಾದ್ಯಂತ ರಂಜಾನ್ ಉಪವಾಸ ಆರಂಭ, ಅಧಿಕೃತ ಘೋಷಣೆ

ರಂಜಾನ್

ರಂಜಾನ್

Ramadan 2023 Date and Time: ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಧಿಕೃತ ಘೋಷಣೆ ಮಾಡಿದ್ದಾರೆ.

  • News18 Kannada
  • 3-MIN READ
  • Last Updated :
  • Mangalore, India
  • Share this:

ಮಂಗಳೂರು: ಕರಾವಳಿಯಾದ್ಯಂತ ರಂಜಾನ್ ಉಪವಾಸ (Ramadan 2023) ಇಂದಿನಿಂದಲೇ (ಮಾರ್ಚ್ 23) ರಿಂದಲೇ ಆರಂಭಗೊಂಡಿದೆ. ರಂಜಾನ್ ತಿಂಗಳ ಚಂದ್ರ ದರ್ಶನ ಹಿನ್ನೆಲೆಯಲ್ಲಿ ಗುರುವಾರದಿಂದ ಕರಾವಳಿಯಾದ್ಯಂತ (Ramadan In Mangaluru) ಉಪವಾಸ ವೃತಾರಂಭವಾಗಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಧಿಕೃತ ಘೋಷಣೆ ಮಾಡಿದ್ದಾರೆ. ಚಂದ್ರದರ್ಶನ ಹಿನ್ನೆಲೆ ಒಂದು ತಿಂಗಳ ಕಾಲ ಉಪವಾಸ ವೃತವನ್ನು ಮುಸ್ಲಿಂ ಬಾಂಧವರು ಆರಂಭಿಸಲಿದ್ದಾರೆ. 


ರಂಜಾನ್ನ ಮುಂಜಾನೆಯ ಪೂರ್ವದ ಭೋಜನವನ್ನು ಸುಹೂರ್ ಎಂದು ಕರೆಯಲಾಗುತ್ತದೆ. ಉಪವಾಸವನ್ನು ಮುರಿಯುವ ರಾತ್ರಿಯ ಹಬ್ಬವನ್ನು ಇಫ್ತಾರ್ ಎಂದು ಉಲ್ಲೇಖಿಸಲಾಗುತ್ತದೆ. ಇಫ್ತಾರ್ ಸಂಪ್ರದಾಯವನ್ನು ಒಗ್ಗಟ್ಟಿನ ಪ್ರತೀಕ ಎಂದು ಕರೆಯಲಾಗುತ್ತದೆ. ಇಫ್ತಾರ್ ಊಟ ರುಚಿಕರವಾದ ಖಾದ್ಯಗಳನ್ನು ಒಳಗೊಂಡಿರುತ್ತದೆ.


ಇದನ್ನೂ ಓದಿ: Vehicle New Rules: ನಂಬರ್ ಪ್ಲೇಟ್ ಇಲ್ಲದೇ ಹೊಸ ವಾಹನ ಮನೆಗೆ ತರುವಂತಿಲ್ಲ, ರಸ್ತೆಗಿಳಿಸುವಂತಿಲ್ಲ!




ಇದನ್ನೂ ಓದಿ: Viral Photos: ಬಾಯಿಯಿಂದ ಅಮ್ಮನ ಕಾಲು ಕಚ್ಚಿ ಹಾವಿನ ವಿಷ ತೆಗೆದ ಬಾಲಕಿ!


ಭಾರತೀಯ ಮುಸ್ಲಿಮರು ಮಸೀದಿಗಳಿಂದ ಆಯೋಜಿಸಲಾದ ಉಚಿತ ಇಫ್ತಾರ್ ಭೋಜನದೊಂದಿಗೆ ತಮ್ಮ ಉಪವಾಸವನ್ನು ಮುರಿಯುತ್ತಾರೆ. ಖರ್ಜೂರ ಮತ್ತು ನೀರು ಸೇವನೆಯ ಮೂಲಕ ಇಫ್ತಾರ್ ಭೋಜನ ಶುರುವಾಗುತ್ತದೆ.

top videos


    ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳ ರುಚಿಕರ ಆಹಾರವನ್ನು ಇಫ್ತಾರ್ ಭೋಜನ ಒಳಗೊಂಡಿರುತ್ತದೆ. ಹೈದರಾಬಾದ್​ನಲ್ಲಿ ಜನರು ಹಲೀಮ್​ನೊಂದಿಗೆ ಉಪವಾಸ ಮುರಿಯುತ್ತಾರೆ. ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ, ಇಫ್ತಾರ್ ಅನ್ನು ಖರ್ಜೂರ, ಹೊಸದಾಗಿ ಕತ್ತರಿಸಿದ ಹಣ್ಣುಗಳು ಮತ್ತು ಹಣ್ಣಿನ ರಸದಿಂದ ಪ್ರಾರಂಭಿಸಲಾಗುತ್ತದೆ, ನಂತರ ಪಕೋಡಗಳು ಮತ್ತು ಸಮೋಸಾಗಳಂತಹ ಕರಿದ ಆಹಾರ ಪದಾರ್ಥಗಳನ್ನು ಸೇವಿಸಲಾಗುತ್ತದೆ.

    First published: