Puttur: ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆ, ಭಕ್ತರಿಗೆ ಖಡಕ್ ವಸ್ತ್ರ ಸಂಹಿತೆ!

ಪುತ್ತೂರು ಜಾತ್ರೆ

ಪುತ್ತೂರು ಜಾತ್ರೆ

ಈ ಬಾರಿ ದೇವಸ್ಥಾನದ ಪುಷ್ಕರಣಿಯಲ್ಲಿ ವರುಣ ದೇವರ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಪುಷ್ಕರಣಿಗೆ ಇಳಿಯುವ ಭಕ್ತಾದಿಗಳಿಗೆ ಕಡ್ಡಾಯ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.

  • News18 Kannada
  • 5-MIN READ
  • Last Updated :
  • Puttur, India
  • Share this:

ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಹಸ್ರಾರು ಸಂಖ್ಯೆಯ ಭಕ್ತರ ಆಗಮನಕ್ಕೆ ಸಾಕ್ಷಿಯಾಗುವ ಜಾತ್ರಾ ಮಹೋತ್ಸವದಲ್ಲಿ (Puttur Jatra Festival) ಈ ಬಾರಿಯೂ ಅನ್ಯ ಧರ್ಮೀಯ ಸಂತೆ ವ್ಯಾಪಾರಕ್ಕೆ ನಿಷೇಧ ಹೇರಲಾಗಿದೆ. ಅಷ್ಟೇ ಅಲ್ಲದೇ ನೂತನ ವಸ್ತ್ರ ಸಂಹಿತೆಯನ್ನು (Dress Code) ಘೋಷಿಸಲಾಗಿದ್ದು, ಅದನ್ನ ಕಡ್ಡಾಯವಾಗಿ ಪಾಲಿಸುವಂತೆ ದೇವಸ್ಥಾನ (Shree Mahalingeshwara Temple Jatra) ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.


ಯಾವಾಗ ಜಾತ್ರೆ?
ಏಪ್ರಿಲ್ 10 ರಿಂದ 20 ರವರೆಗೆ ನಡೆಯಲಿರುವ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವವು ನಡೆಯಲಿದೆ. ಇದಕ್ಕೆ ಪೂರ್ವಭಾವಿ ಹಲವು ಕಾರ್ಯಕ್ರಮಗಳು ಈಗಾಗಲೇ ನಡೆದಿದ್ದು, ಏಪ್ರಿಲ್ 10 ರ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವವು ಆರಂಭಗೊಳ್ಳಲಿದೆ. ವಿದ್ಯುತ್ ದೀಪಗಳಿಂದ ಕಂಗೊಳಿಸಲಿರುವ ಪುತ್ತೂರು ದೇಗುಲವು, ಏಪ್ರಿಲ್ 17ರ ಜಾತ್ರಾ ಮಹೋತ್ಸವದಂದು ಸುಡುಮದ್ದು ಪ್ರದರ್ಶನಗಳ ʼಪುತ್ತೂರು ಬೆಡಿʼ ಕಾರ್ಯಕ್ರಮ ನಡೆಯಲಿದೆ.


ಇದನ್ನೂ ಓದಿ: Mangaluru: ಮುಂಬೈ ಪ್ರಯಾಣ ತುಂಬಾ ಸುಲಭ, ಶುರುವಾಯ್ತು ವಿಶೇಷ ರೈಲು


ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ
ಇತ್ತೀಚಿನ ವರ್ಷಗಳಲ್ಲಿ ಕರಾವಳಿಯ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಹಿಂದೂಯೇತರ ಧರ್ಮದವರಿಗೆ ವ್ಯಾಪಾರ ನಿರ್ಬಂಧ ವಿಧಿಸಲಾಗುತ್ತಿದೆ. ಅಂತೆಯೇ ಪುತ್ತೂರು ಜಾತ್ರೆಯಲ್ಲಿ ಈ ಬಾರಿಯೂ ಅನ್ಯಧರ್ಮೀಯರಿಗೆ ವಿಶೇಷವಾಗಿ ಮುಸ್ಲಿಮರಿಗೆ ಸಂತೆ ವ್ಯಾಪಾರಕ್ಕೆ ಧಾರ್ಮಿಕ ದತ್ತಿ ಕಾಯ್ದೆ ಅನ್ವಯ ನಿರ್ಬಂಧ ವಿಧಿಸಲಾಗಿದೆ.




ಭಕ್ತರಿಗೂ ವಸ್ತ್ರ ಸಂಹಿತೆ!
ಈ ಬಾರಿ ದೇವಸ್ಥಾನದ ಪುಷ್ಕರಣಿಯಲ್ಲಿ ವರುಣ ದೇವರ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಪುಷ್ಕರಣಿಗೆ ಇಳಿಯುವ ಭಕ್ತಾದಿಗಳಿಗೆ ಕಡ್ಡಾಯ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಪುರುಷರು ಲುಂಗಿ, ಧೋತಿ ಧರಿಸಿ ಬರಲು ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೇ ಮಹಿಳೆಯರು ಸೀರೆ ಧರಿಸುವಂತೆ ತಿಳಿಸಲಾಗಿದೆ.


ಇದನ್ನೂ ಓದಿ: Mangaluru News: ಮಂಗಳೂರು ಬಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ


ಇನ್ನು ದೇವರ ಬ್ರಹ್ಮರಥ ಸೇವೆ ಮಾಡುವವರಿಗೂ ಈ ಕಡ್ಡಾಯ ವಸ್ತ್ರಸಂಹಿತೆ ನಿಯಮ ಅನ್ವಯವಾಗಲಿದೆ. ಕ್ಷೇತ್ರದಲ್ಲಿ ನಡೆಯುವ 10 ದಿನದ ಜಾತ್ರಾ ಮಹೋತ್ಸವದಲ್ಲೂ ಭಕ್ತರು ಸಾಂಪ್ರದಾಯಿಕ ಉಡುಗೆ ತೊಟ್ಟು ಕ್ಷೇತ್ರಕ್ಕೆ ಬರಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿಕೊಂಡಿದೆ.

top videos
    First published: