ಮಂಗಳೂರು: ಪುತ್ತೂರಿನ ವಿದ್ಯಾರ್ಥಿನಿಯೊಬ್ಬಳು ತಮ್ಮ ಹುಟ್ಟುಹಬ್ಬವನ್ನೇ (Puttur Girl Birthday) ಆಚರಿಸಿಕೊಳ್ಳದ ಸುದ್ದಿಯೊಂದು ಸಂಚಲನ ಮೂಡಿಸುತ್ತಿದೆ. ದಕ್ಷಿಣ ಕನ್ನಡದ (Dakshina Kannada News) ಪುತ್ತೂರಿನ ಸಿಬಿಎಸ್‌ಇ ಶಾಲೆಯೊಂದರಲ್ಲಿ ಓದುತ್ತಿರುವ 9ನೇ ತರಗತಿ ವಿದ್ಯಾರ್ಥಿನಿ ತನ್ವಿ ತನ್ನ ಬರ್ತ್ಡೇ ಆಚರಿಸಿಕೊಳ್ಳದ ವಿದ್ಯಾರ್ಥಿನಿ. ಈಕೆ ಯಾಕೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಎಂಬ ಕುತೂಹಲ ನಿಮಗೂ ಮೂಡಿದ್ರೆ ಉತ್ತರ ನಾವು ಹೇಳ್ತಿವಿ ಓದಿ.
ತನ್ವಿ ಎಂಬ 9ನೇ ತರಗತಿಯ ಬಾಲಕಿ ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಓದುತ್ತಿದ್ದಾಳೆ. ಫೆಬ್ರವರಿ 14ರಂದು ಈಕೆಯ ಹುಟ್ಟುಹಬ್ಬ. ಆದರೆ ಪುಲ್ವಾಮಾ ದಾಳಿ ಅದೇ ದಿನ ನಡೆದ ಕಾರಣ ತನ್ನ ಹುಟ್ಟುಹಬ್ಬವನ್ನು ತನ್ವಿ ಆಚರಿಸಿಕೊಂಡಿಲ್ಲ. 40 ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಪುಲ್ವಾಮಾ ದಾಳಿಯ ಸ್ಮರಣಾರ್ಥ 14 ವರ್ಷದ ಈ ಬಾಲಕಿ ವಿದ್ಯಾರ್ಥಿನಿ ತನ್ವಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.
ಪ್ರತಿ ವಿದ್ಯಾರ್ಥಿಯ ಹುಟ್ಟುಹಬ್ಬವೂ ಇಲ್ಲಿ ವಿಭಿನ್ನ
ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಪ್ರತಿ ವಿದ್ಯಾರ್ಥಿಯ ಹುಟ್ಟುಹಬ್ಬವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುತ್ತೆ. ಆದರೂ ಈ ವಿದ್ಯಾರ್ಥಿನಿ ತನ್ನ ಹುಟ್ಟುಹಬ್ಬ ಆಚರಿಸದಂತೆ ಮನವಿ ಮಾಡಿದ್ದಾಳೆ.
40 ಕುಟುಂಬಗಳು ದುಃಖದಲ್ಲಿರುವಾಗ ನಾನು ಹೇಗೆ ಖುಷಿ ಪಡಲಿ?
2019ರಲ್ಲಿ ನನ್ನ ಬರ್ತ್ಡೇ ದಿನವೇ ಪುಲ್ವಾಮಾ ದಾಳಿ ನಡೆದಿತ್ತು. ಆ ಘಟನೆಯಿಂದ ನಾನು ತುಂಬಾ ದುಃಖಪಟ್ಟೆ. ಗೆಳೆಯರು, ಕುಟುಂಬದ ಜೊತೆ ನಾನು ಖುಷಿಯಿಂದ ಇರುವಾಗ ನಮ್ಮನ್ನು ಕಾಪಾಡುವ ಯೋಧರ 40 ಕುಟುಂಬಗಳು ಸಾವಿನ ದುಃಖದಲ್ಲಿದ್ದವು. ಹೀಗಾಗಿ ನಾನು ಹುಟ್ಟುಹಬ್ಬ ಆಚರಣೆ ಮಾಡದಿರಲು ನಿರ್ಧರಿಸಿದೆ ಎಂದು ತನ್ವಿ ಹೇಳುತ್ತಾರೆ. ತನ್ವಿಯ ದಿಟ್ಟ ನಿರ್ಧಾರ ಅವರ ಅಪ್ಪ ಅಮ್ಮನಿಗೂ ಖುಷಿ ಕೊಟ್ಟಿದೆಯಂತೆ.
ಇದನ್ನೂ ಓದಿ: Dakshina Kannada: 164 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಅರಳಿದ ತ್ರಿವರ್ಣ ಧ್ವಜ!
ಬರ್ತ್ಡೇ ಆಚರಿಸದೇ ಉಳಿದ ಹಣದಿಂದ ಮಾದರಿ ಕಾರ್ಯ
ತನ್ವಿ ಅವರ ತಾಯಿ ಲವೀನಾ ಕೆ.ಬಿ ಮಂಗಳೂರು ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನ ವಿಭಾಗದಲ್ಲಿ ಉಪನ್ಯಾಸಕಿ. ತಂದೆ ವೆಂಕಟೇಶ್ ನಾಯಕ್ ಕೃಷಿಕರು. ''ನನ್ನ ಪೋಷಕರು ಕೇಕ್ ಕತ್ತರಿಸಿ, ವಿಶೇಷ ಅಡುಗೆ ಮಾಡುವ ಮೂಲಕ ನನ್ನ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ ಈ ಆಚರಣೆ ಮಾಡದೇ ಉಳಿಸಿದ ಹಣದಿಂದ ಸರ್ಕಾರಿ ಶಾಲೆಗೆ ಕ್ರೀಡಾ ಸಾಮಾಗ್ರಿ ನೀಡಲು ಅವರು ಯೋಜನೆ ರೂಪಿಸಿದ್ದಾರೆ ಎನ್ನುತ್ತಾರೆ ತನ್ವಿ.
ಇದನ್ನೂ ಓದಿ: Koti Raj: 1,700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿರಾಜ್!
ಈ ವಿದ್ಯಾರ್ಥಿನಿಯ ನಿರ್ಧಾರ ಹೆಮ್ಮೆ ಮೂಡಿಸಿದೆ ಎಂದ ಸಂಸ್ಥೆ
ಅಂಬಿಕಾ ವಿದ್ಯಾಲಯದ ಸಂಸ್ಥಾಪಕ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಶಾಲೆಯಲ್ಲಿ ಸುಮಾರು 750 ವಿದ್ಯಾರ್ಥಿಗಳಿದ್ದಾರೆ. ಎಲ್ಲ ವಿದ್ಯಾರ್ಥಿಗಳ ಹುಟ್ಟುಹಬ್ಬವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಅವರ ಜನ್ಮದಿನವನ್ನು ಆಚರಿಸುವ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಬೇಕಂತಿಲ್ಲ. ಆ ದಿನ ತಮ್ಮ ಇಷ್ಟದ ಬಣ್ಣದ ಬಟ್ಟೆ ಧರಿಸಬಹುದು. ಹುಟ್ಟುಹಬ್ಬ ಇರುವ ವಿದ್ಯಾರ್ಥಿಗೆ ಆರತಿ ಮಾಡಿ ಹಣೆಯ ಮೇಲೆ ತಿಲಕ ಇಡಲಾಗುತ್ತದೆ. ಆದರೆ ತನ್ವಿ ಕೈಗೊಂಡ ಈ ದಿಟ್ಟ ನಿರ್ಧಾರ ನಮಗೂ ಹೆಮ್ಮೆ ಮೂಡಿಸಿದೆ” ಎನ್ನುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ