ದಕ್ಷಿಣ ಕನ್ನಡ: ಸುರಂಗದಲ್ಲಿ ನೀರು ಹರಿಸಿ ಕೃಷಿಯಲ್ಲಿ ಸಕ್ಸಸ್ ಕಂಡು ಪದ್ಮಶ್ರೀಗೆ ಭಾಜನರಾದ ಅಮೈ ಮಹಾಲಿಂಗ ನಾಯ್ಕರ ಕಥೆನ ನೀವ್ ಕೇಳಿರ್ತೀರಿ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಕೃಷಿಕನೋರ್ವ ತನ್ನಿಡೀ ಕೃಷಿ ಚಟುವಟಿಕೆ ಮಳೆ ನೀರನ್ನೇ (Rain Water Harvesting) ಆಶ್ರಯಿಸಿರುವ ಕಥೆ ಹೇಳ್ತೀವಿ ನೋಡಿ. ಇವ್ರೂ ಅಷ್ಟೇ, ಯಾವುದೇ ಬೋರ್ ವೆಲ್, ಬಾವಿ ನೀರು ಆಶ್ರಯಿಸದೇ ಮೂರ್ನಾಲ್ಕು ತಿಂಗಳ ಕಾಲ ಜೋರಾಗಿ ಬರೋ ಮಳೆಯನ್ನೇ ಅವಲಂಬಿಸಿದ್ದಾರೆ. ಈ ಮೂಲಕ ವರ್ಷವಿಡೀ ಕೃಷಿಯಲ್ಲಿ ಉತ್ತಮ ಫಸಲು ಪಡೆಯುತ್ತಿದ್ದಾರೆ.
ಹೌದು, ಕೃಷಿ ತೋಟದ ಮಧ್ಯೆ ಐವತ್ತು ಸೆಂಟ್ಸ್ ಜಾಗದಲ್ಲಿ ನಿರ್ಮಾಣವಾಗಿರೋ ಈ ಕೃತಕ ಕೆರೆಯೇ ಪುತ್ತೂರಿನ ಮೊಂಡೂರು ನಿವಾಸಿ ಮರಳಿ ಭಟ್ ಅವರ ಕೃಷಿ ನೀರಿನ ಮೂಲ. ಈ ಕೆರೆಯಂತಹ ಬೃಹತ್ ನೀರು ಸಂಗ್ರಹ ಟ್ಯಾಂಕೇ ವರ್ಷವಿಡೀ ಇವ್ರ ಕೃಷಿ ನೀರಾವರಿಗೆ ಸಾಕಾಗುತ್ತವೆ.
ಅಗತ್ಯ ಬಿದ್ದಾಗ ಪಂಪಿಂಗ್
ಬೇಸಿಗೆಯಲ್ಲಿ ಎಲ್ಲರೂ ನೀರಿಗೆ ಕಷ್ಟಪಟ್ರೆ ಮುರಳಿ ಭಟ್ ಅವ್ರ ಕೃಷಿ ತೋಟ ಮಾತ್ರ ನಳನಳಿಸುತ್ತದೆ. ಡ್ಯಾಂ ಮಾದರಿಯಲ್ಲಿ ಈ ಕೆರೆಯನ್ನ ನಿರ್ಮಿಸಿದ್ದು, ಮಳೆಗಾಲದ ಇಡೀ ನೀರನ್ನು ಇದನ್ನು ಸಂಗ್ರಹಿಸಿಡುತ್ತವೆ. ಅಗತ್ಯ ಬಿದ್ದಾಗ ಇದನ್ನ ಪಂಪಿಂಗ್ ಮಾಡುವ ಮೂಲಕ ಕೃಷಿ ಬೆಳೆಗಳಿಗೆ ಹಾಯಿಸುತ್ತಾರೆ.
50 ಲಕ್ಷ ನೀರು ಸಂಗ್ರಹ!
ಇತ್ತೀಚೆಗೆ ಕರಾವಳಿಯಲ್ಲೂ ಬೋರ್ವೆಲ್ಗಳ ಹಾವಳಿ ಅಧಿಕವಾಗಿದೆ. ಆದ್ರೆ ನೀರು ಯಾವಾಗ ಕೈಕೊಡುತ್ತೆ ಅನ್ನೋ ಆತಂಕದಿಂದ ಕೃಷಿಕರನ್ನ ಕಾಡ್ತಾನೇ ಇದೆ. ಇದೆಲ್ಲವನ್ನೂ ಅರಿತುಕೊಂಡ ಮುರಳಿ ಭಟ್ ಅವರು ತಮ್ಮದೇ ಜಾಗದಲ್ಲಿ ಐವತ್ತು ಲಕ್ಷ ನೀರು ಸಂಗ್ರಹಿಸೋ ಈ ಬೃಹತ್ ಟ್ಯಾಂಕ್ ನೆಲದಲ್ಲಿ ನಿರ್ಮಿಸಿದ್ದಾರೆ.
ಈ ಎಲ್ಲಾ ಬೆಳೆಗಳಿಗೂ ಅನುಕೂಲ
ಮಳೆಗಾಲದಲ್ಲಿ ನೇರವಾಗಿ ಬೀಳುವ ನೀರನ್ನ ಮಾತ್ರ ಸಂಗ್ರಹಿಸೋ ಈ ಟ್ಯಾಂಕ್ ಐದು ತಿಂಗಳುಗಳ ಕಾಲ ಮುರಳಿ ಭಟ್ಟರ ಅಡಿಕೆ ಕೃಷಿಗೆ ನೆರವಾಗುತ್ತೆ. ಇವ್ರ ತೋಟದಲ್ಲಿರುವ ಜಾಯಿಕಾಯಿ, ತೆಂಗು, ಕಾಳುಮೆಣಸು ಬೆಳೆಗೂ ಈ ನೀರು ಸಹಕಾರಿಯಾಗಿದೆ.
ಇದನ್ನೂ ಓದಿ: Kalkuda Kallurti Daiva: ಕಲ್ಕುಡ-ಕಲ್ಲುರ್ಟಿ ದೈವವೇ ತನ್ನ ರೋಚಕ ಕಥೆ ಹೇಳಿದೆ ನೋಡಿ
ಈ ಟ್ಯಾಂಕಿನಿಂದಾಗಿ ಮುರಳಿ ಭಟ್ ಅವರಿಗೆ ಯಾವುದೇ ಬೋರ್ವೆಲ್ ಅವಶ್ಯಕತೆ ಇಲ್ಲ. ಎಕರೆಗೆ ಲಕ್ಷ ಲೀಟರ್ ನೀರು ಬಳಸಿದರೂ ನೀರು ಸುಲಭವಾಗಿ ಕಡಿಮೆಯಾಗಲ್ಲ. ರೈತರಿಗೆ ಬಹು ಉಪಕಾರಿಯಾಗಿರುವ ಈ ವಿಧಾನ ಅತಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಫಲಕಾರಿಯೂ ಹೌದು.
ಇದನ್ನೂ ಓದಿ: Dakshina Kannada: ಅಡಿಕೆ, ತೆಂಗು ಕೊಯ್ಯೋದು ಇನ್ಮೇಲೆ ಸುಲಭ, ಕೃಷಿ ಕಾರ್ಮಿಕರ ಕೊರತೆಗೆ ರೈತರಿಂದಲೇ ಪರಿಹಾರ!
ಒಟ್ಟಿನಲ್ಲಿ ಮುರಳಿ ಭಟ್ ಅವರ ಈ ಸೂಪರ್ ಐಡಿಯಾ ಅಧಿಕ ಭೂಮಿಯಿದ್ದವರೆಲ್ಲರೂ ಮಾಡಿಕೊಂಡಲ್ಲಿ ವರ್ಷಪೂರ್ತಿ ನೀರು ಹಿಡಿದಿಟ್ಟುಕೊಳ್ಳಲು ಮೋಸವಿಲ್ಲ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ