• Home
  • »
  • News
  • »
  • mangaluru
  • »
  • Arecanut Future: ಅಡಿಕೆಗೆ ಭವಿಷ್ಯವಿದೆಯೇ? ಪುತ್ತೂರಿನಲ್ಲಿ ಕೃಷಿಕರಿಂದ ಮಹತ್ವದ ತೀರ್ಮಾನ

Arecanut Future: ಅಡಿಕೆಗೆ ಭವಿಷ್ಯವಿದೆಯೇ? ಪುತ್ತೂರಿನಲ್ಲಿ ಕೃಷಿಕರಿಂದ ಮಹತ್ವದ ತೀರ್ಮಾನ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಡಿಕೆ ಸಾಬೂನು, ಅಡಿಕೆ ಹಲ್ಲಿನ ಹುಡಿ, ಅಡಿಕೆ ವೈನ್, ಅಡಿಕೆ ಸಿರಪ್, ಅಡಿಕೆ ಬಣ್ಣ ಹೇಗೆ ಹಲವು ರೀತಿಯ ಉತ್ಪನ್ನಗಳನ್ನು ಪರಿಚಯಿಸಲಾಗುತ್ತಿದೆ.

  • News18 Kannada
  • 5-MIN READ
  • Last Updated :
  • Puttur, India
  • Share this:

    ಕರಾವಳಿ ಭಾಗದ ಕೃಷಿಕರ ಪ್ರಮುಖ ಬೆಳೆಯಾದ ಅಡಿಕೆಗೆ (Arecanut Market) ಇದೀಗ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಮತ್ತು ಬೇಡಿಕೆಯೂ ಇದೆ. ಈ ಕಾರಣಕ್ಕಾಗಿ ಹೆಚ್ಚಿನ ಕೃಷಿಕರು ತಮ್ಮಲ್ಲಿರುವ ಗುಡ್ಡ, ಖಾಲಿ ಜಾಗ ಹೀಗೆ ಎಲ್ಲೆಂದ್ರಲ್ಲಿ ಅಡಿಕೆ ಗಿಡ ನೆಡಲು ಮುಂದಾಗುತ್ತಿದ್ದಾರೆ. ಕೇವಲ ಕರ್ನಾಟಕ (Karnataka Arecanut Farmers) ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಆಂದ್ರಪ್ರದೇಶ, ತೆಲಂಗಾಣ, ಮೇಘಾಲಯ ಹಾಗು ಉತ್ತರ ಭಾರತದಲ್ಲೂ (North India) ಕೃಷಿಕರು ಅಡಿಕೆ ಕೃಷಿಯತ್ತ ಮುಖ ಮಾಡಿದ್ದಾರೆ. ಈ ಬೆಳವಣಿಗೆ ಕರಾವಳಿ ಭಾಗದ ಅಡಿಕೆ ಬೆಳೆಗಾರರಲ್ಲಿ ಆತಂಕಕ್ಕೂ ಕಾರಣವಾಗಿದೆ.


    ದೇಶದಾದ್ಯಂತ ಅಡಿಕೆ ಬೆಳೆ ವಿಸ್ತರಿಸುತ್ತಾ ಹೋಗ್ತಿದೆ. ಇದ್ರಿಂದ ಅಡಿಕೆ ಬೆಲೆ ಕುಸಿತ ಕಾಣಲಿದೆ ಎಂಬ ಆತಂಕವೂ ಎದುರಾಗಿದೆ. ಹೀಗಾಗಿ ಬೆಳೆಗಾರರು ಅಡಿಕೆಯಿಂದ ವಿಭಿನ್ನ ಉತ್ಪನ್ನಗಳನ್ನು ಹೊರ ತೆಗೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.


    ಹಲವು ಬಗೆಯ ಸಮಸ್ಯೆ ಎದುರಿಸುತ್ತಿರುವ ಕೃಷಿಕರು
    ಅಡಿಕೆಯನ್ನೇ ತಮ್ಮ ಜೀವನಾಧಾರವಾಗಿ ಮಾಡಿಕೊಂಡಿರುವ ಕರಾವಳಿ ಮತ್ತು ಮಲೆನಾಡು ಭಾಗದ ಬೆಳೆಗಾರರಿಗೆ ಇದೀಗ ಹೊಸತೊಂದು ಸಮಸ್ಯೆ ಎದುರಾಗಿದೆ. ಅಡಿಕೆ ಕೊಳೆರೋಗ,ಹಳದಿ ಎಲೆರೋಗ ಹೀಗೆ ಹಲವು ರೋಗಗಳಿಂದ ಕಂಗೆಟ್ಟಿರುವ ಬೆಳೆಗಾರನಿಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿಯುವ ಭೀತಿ ಎದುರಾಗಿದೆ.


    ವಿವಿಧ ರಾಜ್ಯಗಳ ಚಿತ್ತ ಅಡಿಕೆಯತ್ತ
    ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿರುವ ಅಡಿಕೆ ಬೆಳೆ ಇತ್ತೀಚಿನ ದಿನಗಳಲ್ಲಿ ಇಡೀ ದೇಶದಾದ್ಯಂತ ಪಸರಿಸುತ್ತಿದೆ. ಅದರಲ್ಲೂ ಆಂಧ್ರ ಪ್ರದೇಶ, ತೆಲಂಗಾಣ, ಮೇಘಾಲಯ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಆ ಭಾಗದ ಕೃಷಿಕರು ಅಡಿಕೆ ಬೆಳೆಯತ್ತ ಮುಖಮಾಡ್ತಿದ್ದಾರೆ. ಇದ್ರಿಂದಾಗಿ ದೇಶದಾದ್ಯಂತ ಅಡಿಕೆ ಬೆಳೆ ಹೆಚ್ಚಾಗುತ್ತಿದೆ.


    ಬೆಳೆ ಹೆಚ್ಚಾದ್ರೆ ಬೆಲೆ ಕುಸಿತದ ಆತಂಕ
    ಉತ್ಪಾದನೆ ಹೆಚ್ಚಾಗಿ ಬೇಡಿಕೆ ಕಡಿಮೆಯಾಗುವ ಆತಂಕ ಎದುರಾಗಿದೆ‌. ಪ್ರಸ್ತುತ 400 ರೂಪಾಯಿ ಗಡಿ ದಾಟಿರುವ ಅಡಿಕೆಯನ್ನು ಸೀಮಿತ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಕಾರಣಕ್ಕಾಗಿ ಅಡಿಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಆದರೆ ಬೆಳೆ ಹೆಚ್ಚಾದಂತೆ ಬೆಲೆಯಲ್ಲೂ ಕುಸಿತವಾಗುವ ಲಕ್ಷಣ ಕಂಡು ಬರುತ್ತಿದೆ.


    ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ


    ಭವಿಷ್ಯಕ್ಕಾಗಿ ಹಲವು ಉತ್ಪನ್ನಗಳ ತಯಾರಿ
    ಇದೇ ಆತಂಕವನ್ನು ಮುಂದಿಟ್ಟುಕೊಂಡು ಅಡಿಕೆ ಬೆಳೆಯಲ್ಲಿ ಹೊಸ ಸಂಶೋಧನೆಗಳನ್ನು ನಡೆಸಲಾರಂಭಿಸಲಾಗಿದೆ. ಅಡಿಕೆ ಸಾಬೂನು, ಅಡಿಕೆ ಹಲ್ಲಿನ ಹುಡಿ, ಅಡಿಕೆ ವೈನ್, ಅಡಿಕೆ ಸಿರಪ್,ಅಡಿಕೆ ಬಣ್ಣ ಹೇಗೆ ಹಲವು ರೀತಿಯ ಉತ್ಪನ್ನಗಳನ್ನು ಪರಿಚಯಿಸಲಾಗುತ್ತಿದೆ. ಇದರಿಂದಾಗಿ ಅಡಿಕೆಗೆ ಮಾರುಕಟ್ಟೆಯಲ್ಲಿ ಸ್ಥಿರ ದರ ಇರುವಂತೆ‌ ನೋಡಿಕೊಳ್ಳಲು ಅಡಿಕೆ ಬೆಳೆಗಾರರು ತೀರ್ಮಾನಿಸಿದ್ದಾರೆ. ಇವುಗಳಲ್ಲಿ ಹಲವೆಡೆ ತಯಾರಿಸುವ ನೈಸರ್ಗಿಕ ಬಣ್ಣಕ್ಕೆ ಹೆಚ್ಚಿನ ಬೇಡಿಕೆಯೂ ಬರಲಾರಂಭಿಸಿದೆ.


    ಇದನ್ನೂ ಓದಿ: Positive Story: ಉತ್ತರ ಕನ್ನಡಕ್ಕೆ ಮಲ್ಟಿ ನ್ಯಾಷನಲ್ ಕಂಪನಿಗಳು! ಸರ್ಕಾರಕ್ಕೇ ಮಾದರಿಯಾಗ್ತಿದೆ ಮನುವಿಕಾಸ


    ಅಡಿಕೆಯ ಈ ರೀತಿಯ ಹೊಸ ಬಳಕೆಯಿಂದಾಗಿ ಅಡಿಕೆ ಬೆಳೆಗಾರ ಯಾವುದೇ ಆತಂಕವಿಲ್ಲದೆ ಬದುಕಬಹುದು ಎನ್ನುವ ಅಂಶವನ್ನೂ ಕಂಡುಕೊಳ್ಳಲಾಗಿದೆ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ವಿಚಾರದ ಚರ್ಚೆ ಸುಪ್ರೀಂಕೋರ್ಟ್ ಮುಂದೆ ಇರುವಾಗ ಒಂದು ವೇಳೆ ಸುಪ್ರೀಂಕೋರ್ಟ್ ತೀರ್ಪು ಅಡಿಕೆಗೆ ವಿರುದ್ಧವಾಗಿ ಬಂದಲ್ಲಿ ಅಡಿಕೆಯ ಮುಂದಿನ ಭವಿಷ್ಯದ ಬಗ್ಗೆಯೂ ಅಡಿಕೆ ಬೆಳೆಗಾರ ಗೊಂದಲದಲ್ಲಿದ್ದಾನೆ‌.


    ಮಾಹಿತಿ, ವಿಡಿಯೋ ವರದಿ: ಅಜಿತ್ ಪುತ್ತೂರು, ನ್ಯೂಸ್ 18 ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: