• Home
  • »
  • News
  • »
  • mangaluru
  • »
  • Gandhadagudi: ಮೈಮೇಲೆ ಮೂಡಿದ ಗಂಧದಗುಡಿ! ಇದು ಅಪ್ಪು ಅಭಿಮಾನ

Gandhadagudi: ಮೈಮೇಲೆ ಮೂಡಿದ ಗಂಧದಗುಡಿ! ಇದು ಅಪ್ಪು ಅಭಿಮಾನ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಮಂಗಳೂರಿನ ಚೇತನಾಸ್ ಬ್ಯೂಟಿ ಪಾರ್ಲರ್‌ನ ಚೇತನಾ ಅನ್ನೋರೇ ಆ ಅಭಿಮಾನಿ. ತಮ್ಮ ಕೈಚಳಕದಿಂದ ಗಂಧದ ಗುಡಿಯ ಯುವಕನೊಬ್ಬನ ಮುಖ ಹಾಗೂ ದೇಹದ ಮೇಲೆ ಮೂಡಿಸಿದ್ದಾರೆ. ಅಪ್ಪು ಅಭಿಮಾನ, ಪರಿಸರ ಪ್ರೇಮವನ್ನೂ ಮೆರೆದಿದ್ದಾರೆ‌‌.

  • News18 Kannada
  • Last Updated :
  • Mangalore, India
  • Share this:

    ಅಪ್ಪು ಮೇಲಿನ ಅಭಿಮಾನ. ಮುಖದ ಮೇಲೆ ಗಂಧದ ಗುಡಿಯ ಅನಾವರಣ..‌ ಪುನೀತ್ ರಾಜ್ ಕುಮಾರ್ (Puneeth Rajkumar) ಅಗಲಿ ಒಂದು ವರ್ಷವಾಗುತ್ತಲೇ ಗಂಧದಗುಡಿ (Gandhadagudi) ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಅಪ್ಪುಗೆ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ನೀಡಿದೆ. ಈ ಖುಷಿಯನ್ನ ದೇಶಾದ್ಯಂತ ಅಭಿಮಾನಿಗಳು ಸಂಭ್ರಮಿಸ್ತಿದ್ದಾರೆ. ಇವ್ರಲ್ಲಿ ಮಂಗಳೂರಿನ (Mangaluru News) ಅಭಿಮಾನಿಯೊಬ್ರು ಭಾರೀ ಸಂಚಲನ ಮೂಡಿಸ್ತಿದ್ದಾರೆ.


    ಮಂಗಳೂರಿನ ಚೇತನಾಸ್ ಬ್ಯೂಟಿ ಪಾರ್ಲರ್‌ನ ಚೇತನಾ ಅನ್ನೋರೇ ಆ ಅಭಿಮಾನಿ. ತಮ್ಮ ಕೈಚಳಕದಿಂದ ಗಂಧದ ಗುಡಿಯ ಯುವಕನೊಬ್ಬನ ಮುಖ ಹಾಗೂ ದೇಹದ ಮೇಲೆ ಮೂಡಿಸಿದ್ದಾರೆ. ಅಪ್ಪು ಅಭಿಮಾನ, ಪರಿಸರ ಪ್ರೇಮವನ್ನೂ ಮೆರೆದಿದ್ದಾರೆ‌‌.


    ಇದನ್ನೂ ಓದಿ: Jobs In Mangaluru ಭಾರತ್ ಸಿನೆಮಾಸ್​ನಲ್ಲಿ ಇದೆ ಉದ್ಯೋಗ; ಬೇಗ ಅಪ್ಲೈ ಮಾಡಿ


    ಮಂಗಳೂರು ನಗರದ ಬೆಂದೂರ್‌ವೆಲ್ ನಲ್ಲಿರುವ ಚೇತನಾ ಅವರು ಹೆಸರಾಂತ ಬ್ಯೂಟಿಶಿಯನ್. ಅದಕ್ಕೂ ಜಾಸ್ತಿ ಇಂತಹ ವಿಭಿನ್ನ ಶೈಲಿ ಮೇಕಪ್‌ ಮಾಡೋಕೂ ಇವ್ರು ಹೆಸರುವಾಸಿ. ಜೊತೆಗೆ ಅಪ್ಪು ಅಭಿಮಾನಿ ಕೂಡಾ. ಹಾಗಾಗಿ ಪವರ್ ಸ್ಟಾರ್ ಅವರ ಕೊನೆಯ ಡಾಕ್ಯುಮೆಂಟರಿ ಚಿತ್ರ ಗಂಧದ ಗುಡಿ ಥೀಮ್‌ಅನ್ನ ಯುವಕನೊಬ್ಬನ ಮುಖ ಹಾಗೂ ದೇಹದ ಸೇಮ್ ಟೂ ಸೇಮ್ ಚಿತ್ರಿಸಿದ್ದಾರೆ.


    ಇದನ್ನೂ ಓದಿ: Dharmasthala: ರಾಷ್ಟ್ರೀಯ ಹೆದ್ದಾರಿಯಾಗಲಿವೆ ಧರ್ಮಸ್ಥಳವನ್ನು ಸಂಪರ್ಕಿಸುವ ಈ ರಸ್ತೆಗಳು


    ಸದ್ಯ ಅಪ್ಪು ಅವರ ಗಂಧದ ಗುಡಿಯನ್ನು ಬ್ಯೂಟಿಶಿಯನ್ ಚೇತನಾ ತಮ್ಮ ವೃತ್ತಿಯ ಮೂಲಕವೇ ವಿಭಿನ್ನ ಸ್ಪರ್ಶ ನೀಡಿರೋದು ವೈರಲ್ ಆಗ್ತಿದೆ.


    ವರದಿ: ಇರ್ಷದ್ ಕಿನ್ನಿಗೋಳಿ

    Published by:ಗುರುಗಣೇಶ ಡಬ್ಗುಳಿ
    First published: