ದಕ್ಷಿಣ ಕನ್ನಡ: ಅದೆಲ್ಲೋ ಪಠ್ಯ ಪುಸ್ತಕದಲ್ಲಿ ಓದಿದ, ನೋಡಿದ ನೆನಪು. ಅದೆಲ್ಲವೂ ಇಲ್ಲಿ ಕಣ್ಣ ಮುಂದೆಯೇ ಇದೆ. ಪೈಥಾಗೋರಸ್ ಪ್ರಮೇಯ, ಉಪಗ್ರಹ, ಸೋಲಾರ್ ಕಾರು, ಸ್ವಿಚ್ ಒತ್ತಿದರೆ ಗಿರ್ರನೆ ತಿರುಗುವ ಸೈರನ್, ಇಲ್ಯೂಶನ್ ಕ್ರಿಯೇಟ್ ಮಾಡೋ ಕನ್ನಡಿಗಳು ಹೀಗೆ ನಾನಾ ತರಹದ ಮಾಡೆಲ್ಗಳು ಇಲ್ಲಿ ಕಣ್ಣಿಗೆ ಕಾಣಸಿಗುತ್ತವೆ. ಅದರ ಮೂಲಕ ಅನುಭವ ಪಡೆಯಬಹುದಾದ ಅವಕಾಶ. ಹಾಗಿದ್ರೆ ಈ ವಿಜ್ಞಾನ ಲೋಕ (Science Centre)ಎಲ್ಲಿದೆ ಅಂತೀರಾ? ಅದೆಲ್ಲದರ ಮಾಹಿತಿ ಕೊಡ್ತೀವಿ ಬನ್ನಿ.
ಹೌದು, ಹೀಗೆ ನೂರಾರು ಮಾಡೆಲ್ಗಳನ್ನು ಹೊಂದಿರೋ ಈ ವಿಜ್ಞಾನ ಕೇಂದ್ರ ಇರುವುದು ಮಂಗಳೂರಿನ ವಾಮಂಜೂರಿನ ಪಿಲಿಕುಳದಲ್ಲಿ. ಇಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಲವು ವಿಜ್ಞಾನ ಪ್ರಾತ್ಯಕ್ಷಿಕೆ ಇದೆ. ಇಲ್ಲೇ ಇರುವ ಜೈವಿಕ ಉದ್ಯಾನವನದ ಮೃಗಾಲಯ, ವಾಟರ್ ಪಾರ್ಕ್ಗಳಿಗೆ ಬಂದವರಿಗೆ ಈ ವಿಜ್ಞಾನ ಕೇಂದ್ರವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಟೆಕ್ಸ್ಟ್ ಬುಕ್ ಬಿಡಿ, ಇಲ್ಲಿ ನೋಡಿ!
ಅದರಲ್ಲೂ ವಿದ್ಯಾರ್ಥಿಗಳಿಗಾಗಿಯೇ ನಿರ್ಮಿತವಾದ ವಿಜ್ಞಾನ ಕೇಂದ್ರವು ಪಠ್ಯ ಪುಸ್ತಕದಲ್ಲಿ ಕಾಣುವ ವಿಜ್ಞಾನ ಮಾದರಿಗಳನ್ನೇ ಇಲ್ಲಿ ಇಡಲಾಗಿದೆ. ಹಾಗಾಗಿ ಕೇವಲ ಟೆಕ್ಸ್ಟ್ ಬುಕ್ನಲ್ಲಿ ಅಕ್ಷರ ರೂಪ, ಚಿತ್ರ ರೂಪದಲ್ಲಿ ಕಂಡದ್ದನ್ನ ಇಲ್ಲಿ ನೇರವಾಗಿ ಪ್ರಾತ್ಯಕ್ಷಿಕೆ ಮೂಲಕ ವೀಕ್ಷಿಸುವ ಅವಕಾಶವಿದೆ.
ಇದನ್ನೂ ಓದಿ: Success Story: ಪುತ್ತೂರಿನಲ್ಲಿ ಹುಟ್ಟಿತು ಸ್ವದೇಶಿ TV ಬ್ರಾಂಡ್! ಟಿವಿ ರಿಪೇರಿ ಮಾಡ್ತಿದ್ದವರು ಕಂಪನಿ ಕಟ್ಟಿದ ಕಥೆ
ಬರೋದು ಹೇಗೆ?
ಮಂಗಳೂರು ನಗರದಿಂದ ಹದಿನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಈ ಪಿಲಿಕುಳ ವಿಜ್ಞಾನ ಕೇಂದ್ರಕ್ಕೆ ತಲುಪಲು ಬಸ್, ಆಟೋ ಗಳ ಸೇವೆ ಇದೆ. ಕೇವಲ 40 ರೂಪಾಯಿ ಟಿಕೆಟ್ ಪಡೆದುಕೊಂಡರೆ ಸಾಕು ಪ್ರತಿಯೊಬ್ಬನು ಈ ವಿಜ್ಞಾನ ಕೇಂದ್ರದಿಂದ ಒಳಹೊಕ್ಕು ವಿಜ್ಞಾನ ಪ್ರಪಂಚವನ್ನು ಕಾಣಬಹುದಾಗಿದೆ.
ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಇದನ್ನೂ ಓದಿ: Birthday: ಗೋಶಾಲೆಯಲ್ಲಿ ಮಗುವಿನ ಮೊದಲ ಬರ್ತ್ ಡೇ ಆಚರಿಸಿಕೊಂಡ ದಂಪತಿ
ಅದ್ರಿಂದ ಹೊರಬರುತ್ತಲೇ ಎಂಜಾಯ್ ಮಾಡಲು ವಾಟರ್ ಪಾರ್ಕ್, ಮೃಗಾಲಯಗಳೂ ಇವೆ. ಹೀಗೆ ಪಿಲಿಕುಳ ನಿಸರ್ಗಧಾಮದ ನಡುವೆ ದಿನವಿಡೀ ಎಂಜಾಯ್ ಮಾಡಬಹುದಾದಷ್ಟು ವಿಷಯಗಳಿವೆ. ಅದ್ರಲ್ಲಿ ಈ ವಿಜ್ಞಾನ ಕೇಂದ್ರವೂ ಒಂದು ಎಂದರೆ ತಪ್ಪಾಗದು.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ