• Home
  • »
  • News
  • »
  • mangaluru
  • »
  • Dakshina Kannada: ಆಗಸದಾಚೆಗಿನ ವಿಸ್ಮಯ ತೋರಿಸುವ ಅತಿ ಹಳೆಯ ಟೆಲಿಸ್ಕೋಪ್ ಇದು!

Dakshina Kannada: ಆಗಸದಾಚೆಗಿನ ವಿಸ್ಮಯ ತೋರಿಸುವ ಅತಿ ಹಳೆಯ ಟೆಲಿಸ್ಕೋಪ್ ಇದು!

ಆಗಸದಾಚೆಗಿನ ವಿಸ್ಮಯ ತೋರಿಸುವ ಅತಿ ಹಳೆಯ ಟೆಲಿಸ್ಕೋಪ್ ಇದು!

ಆಗಸದಾಚೆಗಿನ ವಿಸ್ಮಯ ತೋರಿಸುವ ಅತಿ ಹಳೆಯ ಟೆಲಿಸ್ಕೋಪ್ ಇದು!

ಆಗಸದಂಗಳದಲ್ಲಿನ ವಿಸ್ಮಯಗಳ ವೀಕ್ಷಣೆಗೆ ಹಳೆಯ ಟೆಲಿಸ್ಕೋಪ್ ವೊಂದು ಮಹತ್ವ ಕೊಡುಗೆ ನೀಡುತ್ತಿದೆ. ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಈ ಟೆಲಿಸ್ಕೋಪ್ ಕಾಣಬಹುದಾಗಿದೆ.

  • Share this:

    ಮಂಗಳೂರು: ಆಗಸದಾಚೆಗೆ ಏನೆಲ್ಲ ನಡೆಯುತ್ತೆ? ನಕ್ಷತ್ರಗಳು ಹೇಗಿರುತ್ತೆ? ರಾತ್ರಿ ಹೊತ್ತಲ್ಲಿ ಆಕಾಶ ಇರೋದಾದರೂ ಹೇಗೆ? ಹೀಗೆ ಬಾನಂಗಳದಲ್ಲಿ ಆಗುವ ವಿಸ್ಮಯಗಳ ಬಗ್ಗೆ ಪ್ರತಿಯೊಬ್ಬನಿಗೂ ಅಚ್ಚರಿ ಇದ್ದೇ ಇರುತ್ತದೆ. ಅದಕ್ಕೆ ಯಾವುದೋ ವಿಜ್ಞಾನ, ತತ್ವಜ್ಞಾನವನ್ನೇ ಓದಬೇಕಿಲ್ಲ. ಇಂತಹ ಸಹಜ ಕುತೂಹಲ ಸಾಮಾನ್ಯ ಮನುಷ್ಯನಲ್ಲೂ ಇರುತ್ತದೆ. ಇದೆಲ್ಲಕ್ಕೂ ಉತ್ತರ ಎನ್ನುವಂತೆ ದಕ್ಷಿಣ ಕನ್ನಡದ ಮೂಡುಬಿದಿರೆಯ ಮಹಾವೀರ ಕಾಲೇಜಿನ ಟೆಲಿಸ್ಕೋಪ್​ವೊಂದಿದೆ.


    ಸೆಲೆಸ್ಟ್ರಾನ್ ಟೆಲಿಸ್ಕೋಪ್


    ಹೌದು, ಮಹಾವೀರ ಕಾಲೇಜಿನಲ್ಲಿರುವ ಸೆಲೆಸ್ಟ್ರಾನ್ ಟೆಲಿಸ್ಕೋಪ್ ಖಗೋಳಶಾಸ್ತ್ರ ಓದುವವರಿಗಾಗೇ ಇರುವಂತದ್ದು, ಬರಿಗಣ್ಣಿನಿಂದ ಕಾಣದ ನಕ್ಷತ್ರಗಳನ್ನ ಇದರಲ್ಲಿ ಸುಲಭವಾಗಿ ನೋಡಬಹುದು. ಹದಿನಾಲ್ಕು ಇಂಚಿನ ಈ ಟೆಲಿಸ್ಕೋಪ್ ಸ್ಥಳೀಯ ಯಾವುದೇ ಕಾಲೇಜಿನಲ್ಲೂ ಕಾಣಸಿಗೋದಿಲ್ಲ. ಈ ಟೆಲಿಸ್ಕೋಪ್ ಅತ್ಯಂತ ಉತ್ತಮ ಗುಣಮಟ್ಟದ್ದಾಗಿದ್ದು ಆಗಸದಿಂದಾಚೆಗೆ ಆಗುವಂತಹ ವಿದ್ಯಮಾನಗಳ ನೋಡೋದಕ್ಕೆ ಬಳಸಲಾಗುತ್ತೆ.


    ಇದನ್ನೂ ಓದಿ: High-Tech Bus Stand: ದಕ್ಷಿಣ ಕನ್ನಡದಲ್ಲಿ ರಾಜ್ಯದ ಮೊದಲ ಹೈಟೆಕ್ ಬಸ್ ಸ್ಟಾಂಡ್! ಎಷ್ಟೇ ರಾತ್ರಿಯಾದ್ರೂ​ ಸೇಫ್!


    ಅತ್ಯಂತ ಹಳೆಯ ಟೆಲಿಸ್ಕೋಪ್


    ಮಹಾವೀರ ಕಾಲೇಜಿನಲ್ಲಿ ಅತಿ ಹಳೆಯ ಟೆಲೆಸ್ಕೋಪ್ ಕೂಡ ಇದ್ದು, ವಿಶೇಷ ಅಂದರೆ ಈ ಟೆಲಿಸ್ಕೋಪ್ ಗಳು ಇಂದಿಗೂ ಕಾರ್ಯ ನಿರ್ಬಹಿಸುತ್ತಿದೆ. ವೆಸ್ಟ್ ಜರ್ಮನಿ ಮೂಲದ ಕಾರ್ಲ್ ಜೈಸಿಸ್ನ ಅತಿ ಹಳೆಯ ಟೆಲೆಸ್ಕೋಪ್ ಇಂದಿಗೂ ಇಲ್ಲಿ ಬಳಕೆಯಲ್ಲಿದೆ. 1973ರಲ್ಲಿ ಮಹಾವೀರ ಕಾಲೇಜಿಗೆ ದೊರಕಿದ್ದ ಈ ಟೆಲೆಸ್ಕೋಪ್ ಅತಿ ಹಳೆಯ ಟೆಲಿಸ್ಕೋಪ್ ಆಗಿದೆ.


    ‘ಹ್ಯಾಲಿ‘ ಸೆರೆ ಹಿಡಿದ ನೆನಪು!


    ಹೌದು, ಸಾಮಾನ್ಯ ಕ್ಯಾಮರಾದ ಮೂಲಕ ಪ್ರಕೃತಿಯಲ್ಲಿ ನಡೆದ ವಿಸ್ಮಯವನ್ನು ಸೆರೆ ಹಿಡಿಯಲಾಗಿತ್ತು. ಅದು 1986ರಲ್ಲಿ ಹಾದು ಹೋದ ಹ್ಯಾಲಿ ಧೂಮಕೇತುವನ್ನ ಚಿತ್ರಿಸಿದ ಕೀರ್ತಿ ಈ ಕಾಲೇಜಿಗೆ ಸಲ್ಲುತ್ತದೆ. 1986ರ ಹ್ಯಾಲಿ ಧೂಮಕೇತು ನೋಡಲು ಮಧ್ಯರಾತ್ರಿಯೂ ನೂರಾರು ಜನ ಸೇರಿದ್ದನ್ನು ಇಂದಿಗೂ ಇಲ್ಲಿನ ಪ್ರಾಂಶುಪಾಲರಾಗಿರುವ ನೆನಪಿಸಿಕೊಳ್ಳುತ್ತಾರೆ ಪ್ರಾಂಶುಪಾಲ ರಮೇಶ್ ಭಟ್.


    ಇದನ್ನೂ ಓದಿ: Mangaluru To Bengaluru: ವಿಮಾನದ ಮೂಲಕ ಪಾರ್ಸೆಲ್, ಮಂಗಳೂರು-ಬೆಂಗಳೂರು ರೂಟ್​ಗೆ ಭಾರೀ ಬೇಡಿಕೆ


    ವಿದ್ಯಾರ್ಥಿಗಳಲ್ಲೂ ಖಗೋಳ ಆಸಕ್ತಿ


    ಖಗೋಳ ಶಾಸ್ತ್ರ ಆಸಕ್ತರಿಗಾಗಿಯೇ ಪದೇ ಪದೇ ವಿಶೇಷ ಕಾರ್ಯಕ್ರಮ ರಚಿಸಿ ಸಾರ್ವಜನಿಕರಿಗೂ ಖಗೋಳಶಾಸ್ತ್ರದ ಬಗ್ಗೆ ಆಸಕ್ತಿ ತರಿಸುವಲ್ಲಿ ಮೂಡುಬಿದಿರೆಯ ಮಹಾವೀರ ಕಾಲೇಜು ಪಾತ್ರ ದೊಡ್ಡದು. ಸುಮಾರು ನಲವತ್ತೆರಡು ವರ್ಷಗಳಿಂದ ಸತತವಾಗಿ ಖಗೋಳದಲ್ಲಾಗುವ ವಿದ್ಯಮಾನಗಳ ಬಗೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆಸಕ್ತಿ ಮೂಡಿಸುವ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಆಗಸದಾಚೆಗಿನ ವಿದ್ಯಮಾನಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಇಲ್ಲಿದೆ.

    Published by:Precilla Olivia Dias
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು