ಮಂಗಳೂರು: ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು (Karnataka Government) ಮುಸ್ಲಿಂ ದಂಪತಿಗಳಿಗೆ (Muslim Couples) ವಕ್ಫ್‌ನಿಂದಲೇ ವಿವಾಹ ಪ್ರಮಾಣ ಪತ್ರ ನೀಡುವುದಕ್ಕೆ ಅಧಿಕೃತ ಆದೇಶ ಹೊರಡಿಸಿತ್ತು. ಇದರಿಂದಾಗಿ ಪ್ರತೀ ಜಿಲ್ಲಾ ವಕ್ಫ್ ಕಚೇರಿಗಳಲ್ಲಿಯೂ ಮದುವೆ ಪ್ರಮಾಣ ಪತ್ರ ನೀಡುವುದಾಗಿಯೂ ಸರ್ಕಾರ ತಿಳಿಸಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ವಕ್ಫ್ ಇಲಾಖೆ (Waqf Board Of Dakshina Kannada) ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅಂಚೆ ಇಲಾಖೆಯ ಜೊತೆಗಿನ ಒಡಂಬಡಿಕೆ ಮೂಲಕ ಸುಲಭವಾಗಿ ಮನೆಗೆ ಮದುವೆ ಪ್ರಮಾಣ ಪತ್ರ ತಲುಪಿಸುವ ಸೇವೆಗೆ ಚಾಲನೆ ನೀಡಿದೆ.
ಈ ಹಿಂದೆ ಜನನ, ಮರಣ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಿದ್ದ ಮಂಗಳೂರು ಅಂಚೆ ಇಲಾಖೆಯು ಇದೀಗ ಮುಸ್ಲಿಂ ದಂಪತಿಗಳ ಮ್ಯಾರೇಜ್ ಸರ್ಟಿಫಿಕೇಟ್ ಅನ್ನು ಮನೆ ಮನೆಗೆ ತಲುಪಿಸಲಿದೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮಂಗಳೂರು ಅಂಚೆ ವಿಭಾಗದ ಮೂಲಕ ಈ ಸೇವೆಯನ್ನು ಪರಿಚಯಿಸಲಾಗುತ್ತಿದೆ.
ಸ್ಪೀಡ್ ಪೋಸ್ಟ್ ನಲ್ಲಿ ಮ್ಯಾರೇಜ್ ಸರ್ಟಿಫಿಕೇಟ್
ಸುಲಭವಾಗಿ ಮನೆಗೆ ಮದುವೆ ಪ್ರಮಾಣ ಪತ್ರ ತರಿಸಿಕೊಳ್ಳಲು ಇಷ್ಟಪಡುವ ಮುಸ್ಲಿಂ ದಂಪತಿಯು ಮೊದಲಿಗೆ ನಿಯಮ ಪ್ರಕಾರವಾಗಿ ಸೂಕ್ತ ದಾಖಲಾತಿಯೊಂದಿಗೆ ಜಿಲ್ಲಾ ವಕ್ಫ್ ಇಲಾಖೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು. ಸಾಮಾನ್ಯವಾಗಿ ಈ ಅರ್ಜಿ ಸಲ್ಲಿಸಿದ ಹದಿನೈದು ದಿನಗಳ ಒಳಗಾಗಿ ಮದುವೆ ಪ್ರಮಾಣ ಪತ್ರ ಕೈಗೆ ಸಿಗುತ್ತೆ.
ಸ್ಪೀಡ್ ಪೋಸ್ಟ್ನಲ್ಲಿ ಮದುವೆ ಪ್ರಮಾಣ ಪತ್ರ
ಇಂತಹ ಸಮಯದಲ್ಲಿ ಹದಿನೈದು ದಿನಗಳ ನಂತರ ಅರ್ಜಿದಾರರು ಮತ್ತೊಮ್ಮೆ ವಕ್ಫ್ ಕಚೇರಿಗೆ ತೆರಳಬೇಕಾಗುತ್ತಿತ್ತು. ಆದರೆ, ಅಂಚೆ ಇಲಾಖೆ ಹಾಗೂ ವಕ್ಫ್ ಒಡಂಬಡಿಕೆಯಿಂದ ಅಂಚೆ ಸೇವೆ ಮೂಲಕ ಸ್ಪೀಡ್ ಪೋಸ್ಟ್ನಲ್ಲಿ ಮದುವೆ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಹೀಗಾಗಿ ಅರ್ಜಿದಾರರು ಒಂದೇ ಬಾರಿ ವಕ್ಫ್ ಕಚೇರಿಗೆ ತೆರಳಿದರೆ ಸಾಕು ಆ ನಂತರ ಮನೆ ಬಾಗಿಲಿಗೆ ಮದುವೆ ಪ್ರಮಾಣ ಪತ್ರವನ್ನು ತರಿಸಿಕೊಳ್ಳಬಹುದಾಗಿದೆ.
ಅರ್ಜಿದಾರರು ಏನು ಮಾಡಬೇಕು?
ಅರ್ಜಿದಾರರು ಅರ್ಜಿ ಸಲ್ಲಿಸುವ ವೇಳೆ ಹೆಚ್ಚುವರಿ ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ. ಇದೊಂದು ಐಚ್ಛಿಕ ಆಯ್ಕೆಯಾಗಿದ್ದು, ಈ ಆಯ್ಕೆ ಮೂಲಕ ಒಂದೊಮ್ಮೆ ಅರ್ಜಿ ಸಲ್ಲಿಸಲು ಹೋದವರು ತಾನು ಸ್ಪೀಡ್ ಪೋಸ್ಟ್ ಮೂಲಕ ಮದುವೆ ಪ್ರಮಾಣ ಪತ್ರವನ್ನು ಸ್ವೀಕರಿಸಲು ಇಷ್ಟಪಡುವುದಾಗಿ ಅರ್ಜಿ ತುಂಬಿದ್ದಲ್ಲಿ ಮತ್ತು ಪೋಸ್ಟ್ ಬಟವಾಡೆ ಮಾಡುವ ಸಮಯದಲ್ಲಿ 80 ರೂ. ನೀಡಲು ಒಪ್ಪಿರುವುದಾಗಿ ಅರ್ಜಿ ತುಂಬಬೇಕಾಗುತ್ತದೆ. ಹೀಗೆ ಮಾಡಿದ್ದಲ್ಲಿ ಮತ್ತೊಂದು ಬಾರಿ ಸರ್ಟಿಫಿಕೇಟ್ ಪಡೆಯಲು ಅರ್ಜಿದಾರರು ಮಂಗಳೂರು ನಗರದಲ್ಲಿರುವ ವಕ್ಫ್ ಕಚೇರಿಗೆ ತೆರಳುವ ಸನ್ನಿವೇಶವಿರದು.
ಈ ಸೇವೆಯ ವಿಶೇಷತೆಗಳು
1. ಈ ಸೇವೆಯು ಸಂಪೂರ್ಣವಾಗಿ ಐಚ್ಛಿಕವಾಗಿದೆ.
2. ಈ ಪ್ರಮಾಣ ಪತ್ರವನ್ನು ಭಾರತದ ಯಾವುದೇ ಊರಿಗೂ ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ತಲುಪಿಸಬಹುದು.
3. ಅರ್ಜಿದಾರರು ಪ್ರಮಾಣ ಪತ್ರವನ್ನು ಮನೆಯ ವಿಳಾಸದಲ್ಲಿ ಅಥವಾ ಕಛೇರಿಯ ವಿಳಾಸದಲ್ಲೂ ಪಡೆಯಬಹುದು.
ಇದನ್ನೂ ಓದಿ: Dakshina Kannada Voters: ಮನೆಯಲ್ಲೇ ಮತದಾನ; ದಕ್ಷಿಣ ಕನ್ನಡ ಜಿಲ್ಲೆಯೇ ಟಾಪ್
4. ಅರ್ಜಿದಾರರ ಅನುಪಸ್ಥಿತಿಯಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರು ಬಟವಾಡೆ ಪಡೆದುಕೊಳ್ಳಬಹುದು.
5. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಕಛೇರಿಗೆ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಪ್ರಮಾಣ ಪತ್ರವು ಮುದ್ರಣ ಗೊಂಡು ನಂತರ ಅದನ್ನು 2 ರಿಂದ 5 ದಿನಗಳ ಒಳಗಾಗಿ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸಲಾಗುವುದು.
ಇದನ್ನೂ ಓದಿ: Dakshina Kannada: ಫಸ್ಟ್ ಕ್ಲಾಸ್ನಲ್ಲಿ ಪಿಯುಸಿ ಪಾಸ್ ಆದ ಗ್ರಾಮ ಪಂಚಾಯತ್ ಅಧ್ಯಕ್ಷೆ!
6. ರವಾನೆಯಿಂದ ಬಟವಾಡೆವರೆಗೆ ವಿವಿಧ ಹಂತಗಳಲ್ಲಿ ಅರ್ಜಿದಾರರಿಗೆ SMS ಮೂಲಕ ಮಾಹಿತಿ ನೀಡಲಾಗುವುದು.
7. ಈ ಸೇವೆಯನ್ನು ಪಡೆಯಲು ದ. ಕ ಜಿಲ್ಲಾ ವಕ್ಫ್ ಕಛೇರಿ ಕೌಂಟರ್ ನಲ್ಲಿ ಯಾವುದೇ ಶುಲ್ಕ ಭರಿಸಬೇಕಾಗಿಲ್ಲ. ಸ್ಪೀಡ್ ಪೋಸ್ಟ್ ವಿತರಣೆಯ ಸಂದರ್ಭದಲ್ಲಿ ಪೋಸ್ಟ್ ಮ್ಯಾನ್ ಮೂಲಕ ರೂ.80/- ನಿಗದಿತ ಶುಲ್ಕವನ್ನು ಅಂಚೆ ಕಚೇರಿಗೆ ಪಾವತಿಸಬೇಕು.
ಅರ್ಜಿದಾರರಿಗೆ ಡಬಲ್ ಲಾಭ!
1. ಪ್ರಮಾಣ ಪತ್ರವನ್ನು ಪಡೆಯಲು ಮತ್ತೊಂದು ಬಾರಿ ದ.ಕ. ಜಿಲ್ಲಾ ವಕ್ಫ್ ಕಛೇರಿಗೆ ಭೇಟಿ ನೀಡಬೇಕಾಗಿಲ್ಲ.
2. ಅರ್ಜಿದಾರರ ಅಮೂಲ್ಯವಾದ ಸಮಯ ಹಾಗೂ ಹಣದ ಉಳಿತಾಯ.
3. ನೌಕರಿಯಲ್ಲಿರುವವರು ಇದಕ್ಕಾಗಿ ಪುನಃ ರಜೆ ಹಾಕಿ ಪ್ರಮಾಣ ಪತ್ರವನ್ನು ಪಡೆಯಲು ಮಂಗಳೂರು ದ. ಕ ಜಿಲ್ಲಾ ವಕ್ಫ್ ಕಛೇರಿಗೆ ಹೋಗಬೇಕಾಗಿಲ್ಲ.
4. ಈ ಸೇವೆಯು ಕೈಗೆಟಕುವ ದರದಲ್ಲಿ ಲಭ್ಯವಿರಲಿದೆ.
5. ಪ್ರಮಾಣ ಪತ್ರವನ್ನು ಒಳಗೊಂಡ ಸ್ಪೀಡ್ ಪೋಸ್ಟ್ ಬಟವಾಡೆಯ ಯಾವ ಹಂತದಲ್ಲಿದೆ ಎಂದು www.indiapost.gov.in ನಲ್ಲಿ ಟ್ರ್ಯಾಕ್ ಮಾಡಿ ತೆಗೆದುಕೊಳ್ಳಬಹುದು.
6. ಈ ಸೇವೆಯಿಂದಾಗಿ ದ. ಕ ಜಿಲ್ಲಾ ವಕ್ಫ್ ಕಛೇರಿ, ಮಂಗಳೂರು ನಲ್ಲಿ ಗುಂಪುಗೂಡುವುದು ಕಡಿಮೆಯಾಗಲಿದೆ. ಜೊತೆಗೆ ಸೇವೆಯನ್ನು ತ್ವರಿತವಾಗಿ ನೀಡಲು ಸಹಕಾರಿಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ