• Home
  • »
  • News
  • »
  • mangaluru
  • »
  • Guliga: ಬೆಂಕಿಯಲ್ಲಿ ಬೀಳೋ ಮೂಕಾಂಬಿಕಾ ಗುಳಿಗ! ರೋಚಕ ಕಥೆ ಕೇಳಿದ್ರೆ ಮೈ ಜುಂ ಅನ್ನುತ್ತೆ

Guliga: ಬೆಂಕಿಯಲ್ಲಿ ಬೀಳೋ ಮೂಕಾಂಬಿಕಾ ಗುಳಿಗ! ರೋಚಕ ಕಥೆ ಕೇಳಿದ್ರೆ ಮೈ ಜುಂ ಅನ್ನುತ್ತೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

Guliga | Dakshina Kannada: ಅನಾಚಾರಿಗಳನ್ನು ಕೊಂದ ಬಳಿಕ ಬೆಂಕಿಯಲ್ಲಿ ಸ್ನಾನ ಮಾಡಿ ಪರಿಶುದ್ಧವಾಗುವ ಈ ದೈವಗಳ ಈ ಬೆಂಕಿಯಾಟ ರೋಚಕ ಅನುಭವ ನೀಡೋದಂತೂ ಸತ್ಯ.

  • News18 Kannada
  • 3-MIN READ
  • Last Updated :
  • Dakshina Kannada, India
  • Share this:

    ದಕ್ಷಿಣ ಕನ್ನಡ: ಬೆಂಕಿಯಲ್ಲಿ ಬೀಳೋ ದೈವದ ಪಾತ್ರಧಾರಿ! ನೋಡುಗರನ್ನು ವಿಸ್ಮಯಗೊಳಿಸೋ ಬೆಂಕಿಯ ಕೆನ್ನಾಲಿಯಲ್ಲಿ ಹೊರಳಾಟ! ದೈವಾರಾಧನೆ ಹೆಸ್ರು ಕೇಳಿದ್ರೇನೆ ಮೈ-ಮನಸ್ಸು ಪುಳಕಗೊಳ್ಳುತ್ತೆ, ಭಕ್ತಿ ಭಾವ ಮೂಡುತ್ತೆ. ಸುಮಾರು 400 ಕ್ಕೂ ಹೆಚ್ಚು ವಿವಿಧ ಪ್ರಕಾರದ ದೈವಗಳ ಆರಾಧನೆಯಿರೋ ಕರಾವಳಿಯೇ (Coastal Karnataka) ಈಗ ಎಲ್ಲರ ಗಮನ ಸೆಳೆದಿರೋ ಕುತೂಹಲದ ಕೇಂದ್ರಬಿಂದು. ಒಂದು ದೈವದ ಆಚರಣೆ, ಇನ್ನೊಂದು ದೈವದ ಆಚರಣೆಗಿಂತ ವಿಭಿನ್ನ, ವಿಶಿಷ್ಟ. ಇಂಥದ್ದೇ ವಿಶಿಷ್ಟ ದೈವ ಮೂಕಾಂಬಿಕ ಗುಳಿಗದ (Mookambika Guliga) ಬಗ್ಗೆ ನಾವ್ ನಿಮಗೆ ತಿಳಿಸಿಕೊಡ್ತೀವಿ ನೋಡಿ.


    ಕರಾವಳಿ ಭಾಗದಲ್ಲಿ ಸುಮಾರು 400 ಕ್ಕೂ ಹೆಚ್ಚು ವಿವಿಧ ಪ್ರಕಾರದ ದೈವಗಳನ್ನು ಆರಾಧಿಸಲಾಗುತ್ತಿದ್ದು, ವರ್ಷಕ್ಕೆ ಒಂದು ದಿನ ಈ ದೈವಗಳಿಗೆ ಕೋಲ ನೆರವೇರಿಸಲಾಗುತ್ತೆ. ಹೀಗೆ ಆರಾಧಿಸುವ ಅತ್ಯಂತ ವಿಶೇಷವಾಗಿರುವ ದೈವಗಳಲ್ಲಿ ಮೂಕಾಂಬಿಕಾ ಗುಳಿಗ ದೈವವೂ ಒಂದು. ಕೇರಳದ ಕೆಲವು ಭಾಗದಲ್ಲಿ ಹಾಗೂ ಕರಾವಳಿಯ ಕೆಲವು ಭಾಗದಲ್ಲಿ ಮಾತ್ರ ಈ ಮೂಕಾಂಬಿಕಾ ಗುಳಿಗ ದೈವಕ್ಕೆ ಕೋಲ ನಡೆಸಲಾಗುತ್ತದೆ.


    ಹೀಗಿದೆ ನೋಡಿ ಕಥೆ
    ಕೊಲ್ಲೂರಿನಲ್ಲಿ ದೇವಿಯು ಅವತಾರವೆತ್ತಿ, ಮೂಕಾಸುರನೆಂಬ ರಾಕ್ಷಸನ ವಧೆ ಮಾಡುವ ಸಂದರ್ಭದಲ್ಲಿ ಮೂಕಾಸುರನ ವಧೆ ಮಾಡಿದ ಮಾರಣಕಟ್ಟೆಯಲ್ಲಿ ಶಿವಧೂತನಾದ ಗುಳಿಗ ಅದೇ ಸ್ಥಳದಲ್ಲಿ ನೆಲೆಸಿದ್ದರು. ಶಿವನ ಹಾಗೂ ದೇವಿಯ ಪ್ರೀತಿ ಪಾತ್ರನಾದ ಗುಳಿಗರಿಗೆ ದೇವಿಯ ಅನುಗ್ರಹದಿಂದ ಬ್ರಹ್ಮಲಿಂಗೇಶ್ವರನಾಗಿ ಆರಾಧನೆಗೆ ಪಾತ್ರವಾದ ಮೂಕಾಸುರನ ಬಲಭಾಗದಲ್ಲಿ ಗುಳಿಗನಿಗೂ ಆರಾಧನೆ ಮಾಡುವಂತೆ ದೇವಿ ಆಜ್ಞೆಯನ್ನೂ ನೀಡಿದ್ದಳಂತೆ.


    ಅತ್ಯಾಚಾರ ನಡೆಸಲು ಯತ್ನ
    ಈ ನಡುವೆ ಕೊಲ್ಲೂರಿನ ತಂತ್ರಿಯೋರ್ವರು ಕೇರಳಕ್ಕೆ ಶಾಂತಿಪೂಜೆ ನೆರವೇರಿಸಲು ತಮ್ಮ ಪತ್ನಿಯೊಂದಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಗುಳಿಗ ದೈವವೂ ತಂತ್ರಿಯವರ ರಕ್ಷಣೆಗಾಗಿ ಕೇರಳಕ್ಕೆ ಹೊರಟಿತ್ತು. ಕೇರಳ ಬರುವ ಮಾರ್ಗ ಮಧ್ಯೆ ತಂತ್ರಿಯವರ ಪತ್ನಿ ಮೂಕಾಂಬಿಕೆಯನ್ನು ವ್ಯಕ್ತಿಯೋರ್ವ ಅತ್ಯಾಚಾರ ನಡೆಸಲು ಯತ್ನಿಸುತ್ತಾನೆ.




    ಇದನ್ನೂ ಓದಿ: Kalkuda Kallurti Daiva: ಕಲ್ಕುಡ-ಕಲ್ಲುರ್ಟಿ ದೈವವೇ ತನ್ನ ರೋಚಕ ಕಥೆ ಹೇಳಿದೆ ನೋಡಿ


    ಇದರಿಂದ ನೊಂದ ಮೂಕಾಂಬಿಕೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿದ ಸಂದರ್ಭದಲ್ಲಿ ಆಕೆಯ ಆತ್ಮ ಗುಳಿಗ ದೈವದೊಂದಿಗೆ ಸೇರಿಕೊಳ್ಳುತ್ತದೆ. ಗುಳಿಗನೊಂದಿಗೆ ಸೇರಿಕೊಂಡ ಮೂಕಾಂಬಿಕೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಇಡೀ ಕುಟುಂಬವನ್ನೇ ನಾಶ ಮಾಡುತ್ತಾಳೆ. ಬಳಿಕ ಆಕೆ ಮೂಕಾಂಬಿಕಾ ಗುಳಿಗನಾಗಿ ಆರಾಧಿಸಲ್ಪಡುವ ಮೂಲಕ ಕರಾವಳಿಯ ಅತ್ಯಂತ ಪ್ರಭಾವಿ ದೈವವಾಗಿ ಗುರುತಿಸುತ್ತಾಳೆ.


    ಇದನ್ನೂ ಓದಿ: Dakshina Kannada: ಮುಚ್ಚಿ ಹೋಗ್ತಿದ್ದ ಸರ್ಕಾರಿ ಕನ್ನಡ ಶಾಲೆಗೆ ಮರುಜೀವ, ಈಗ ವಿದ್ಯಾರ್ಥಿಗಳ ಸಂಖ್ಯೆ ಡಬಲ್!


    ಈ ಘಟನೆಯ ಚಿತ್ರಣವನ್ನೇ ಮೂಕಾಂಬಿಕಾ ಗುಳಿಗ ದೈವದ ಉತ್ಸವದಂದು ದೈವಗಳು ತೋರಿಸಿಕೊಡುತ್ತವೆ. ಅಡಿಕೆ ಮರಗಳನ್ನು ಕಡಿದು, ಮರದ ನೂರಾರು ತೊಲೆಗಳನ್ನು ಸೇರಿಸಿ, ಅವುಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಆ ಬೆಂಕಿಯಲ್ಲಿ ದೈವದ ಪಾತ್ರಧಾರಿ ಬೀಳುವ, ಮಲಗುವ, ಕುಳಿತುಕೊಳ್ಳುವ ಹೀಗೆ ಹಲವು ರೀತಿಯಲ್ಲಿ ಬೆಂಕಿಯ ಕೆನ್ನಾಲಿಯಲ್ಲಿ ಹೊರಳುವುದು ಈ ದೈವದ ಕೋಲದ ವಿಶೇಷ. ಅನಾಚಾರಿಗಳನ್ನು ಕೊಂದ ಬಳಿಕ ಬೆಂಕಿಯಲ್ಲಿ ಸ್ನಾನ ಮಾಡಿ ಪರಿಶುದ್ಧವಾಗುವ ಈ ದೈವಗಳ ಈ ಬೆಂಕಿಯಾಟ ರೋಚಕ ಅನುಭವ ನೀಡೋದಂತೂ ಸತ್ಯ.

    Published by:ಗುರುಗಣೇಶ ಡಬ್ಗುಳಿ
    First published: