• Home
  • »
  • News
  • »
  • mangaluru
  • »
  • Dakshina Kannada: ಮೂಡುಬಿದಿರೆ ಬಾಲಕನ ಜೊತೆ ಪಿಎಂ ಮೋದಿ ಚರ್ಚೆ!

Dakshina Kannada: ಮೂಡುಬಿದಿರೆ ಬಾಲಕನ ಜೊತೆ ಪಿಎಂ ಮೋದಿ ಚರ್ಚೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಜನವರಿ 26 ರ ಗಣರಾಜ್ಯೋತ್ಸವ ದೆಹಲಿ ಪರೇಡ್ ವೀಕ್ಷಣೆ ಮಾಡುವ ಅವಕಾಶವನ್ನು ಮೂಡುಬಿದಿರೆಯ ಸೋಲೋ ಡ್ರಾಮಾ ಆರ್ಟಿಸ್ಟ್ ಪ್ರಹ್ಲಾದ್ ಮೂರ್ತಿ ಪಡೆದುಕೊಂಡಿದ್ದಾರೆ.

  • News18 Kannada
  • 2-MIN READ
  • Last Updated :
  • Mangalore, India
  • Share this:

    ಮಂಗಳೂರು: ನಾಟಕ, ಹಾಡು, ಡ್ಯಾನ್ಸು, ಯಕ್ಷಗಾನ ಹೀಗೆ ಏನೇ ಇರಲಿ ವೇದಿಕೆಯನ್ನು ಚಿಂದಿ ಉಡಾಯಿಸುವ ಬಾಲಕನೀತ! ಈತನ ಟ್ಯಾಲೆಂಟ್ ನೋಡ್ತಿದ್ರೆ ಅರೆ ಕ್ಷಣ ಶಾಕ್ ಆಗೋದು ಗ್ಯಾರಂಟಿ. ಈ ಪೋರ ಏನೇ ಮಾಡಿದ್ರೂ ಅದ್ರಲ್ಲಿ ಪರ್ಫೆಕ್ಷನಿಸ್ಟ್. ಮಂಗಳೂರಿನ (Mangaluru News) ಇಂತಹ ಅದ್ಭುತ ಪ್ರತಿಭೆಯೇ (Talent) ಇದೀಗ ಈ ಬಾಲಕನಿಗೆ  ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಭೇಟಿ ಮಾಡಲು (Pariksha Pe Charcha 2023) ಅವಕಾಶ ನೀಡಿದೆ. 


    ‘ಮೂರ್ತಿ‘ ಚಿಕ್ಕದಾದರೂ ಕೀರ್ತಿ ದೊಡ್ಡದು!
    ಈ ಬಹುಮುಖ ಪ್ರತಿಭೆಯ ಹೆಸರು ಪ್ರಹ್ಲಾದ್ ಮೂರ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಡಂದಲೆಯ ನಿವಾಸಿ. ಪ್ರಸ್ತುತ ಮೂಡುಬಿದಿರೆಯ ರೋಟರಿ ಆಂಗ್ಲಮಾದ್ಯಮದಲ್ಲಿ ಕಲಿಯುತ್ತಿರುವ ಪ್ರಹ್ಲಾದ ಮೂರ್ತಿಯದ್ದು ಬಹುಮುಖ ಪ್ರತಿಭೆ. ಯಕ್ಷಗಾನ, ಹಾಡು, ಡ್ಯಾನ್ಸು, ಡ್ರಾಮಾ, ಹೀಗೆ ವಿವಿಧ ಕಲೆಗಳಲ್ಲಿ ತನ್ನನ್ನ ತಾನು ತೊಡಗಿಸಿಕೊಂಡಿರುವ ಪ್ರಹ್ಲಾದ ಮೂರ್ತಿ ಶಾಲಾ ನಾಯಕನೂ ಹೌದು.




    ಸೋಲೋ ಡ್ರಾಮದಲ್ಲಿ ಫೇಮಸ್!
    ಪ್ರಹ್ಲಾದ್ ವಿಶೇಷವಾಗಿ ಏಕಪಾತ್ರಾಭಿನಯದ ‘ಸೋಲೋ ಡ್ರಾಮಾ'ದ ಮೂಲಕ ಸಾಕಷ್ಟು ಜನರ ಮನಗೆದ್ದಿದ್ದಾರೆ. ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿದ್ದಾರೆ. ಹಲವು ಸ್ಪರ್ಧೆಗಳಲ್ಲೂ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದಾರೆ. ಅದುವೇ ಈಗ ಆ ಬಾಲಕನಿಗೆ ಪ್ರಧಾನಿಯವರನ್ನು ಭೇಟಿ ಮಾಡಲು ಅವಕಾಶ ನೀಡಿದೆ.




    ಇದನ್ನೂ ಓದಿ: Kumble Gopalakrishna Temple: ಸಿಡಿಮದ್ದು ಸಿಡಿಯೋದು ನೋಡೋಕೆ ದೇವರೇ ಬರ್ತಾರೆ! ಇದು ಗೋಪಾಲಕೃಷ್ಣ ದೇಗುಲದ 'ಕುಂಬ್ಳೆ ಬೆಡಿ'


    ಒಡಿಶಾದಲ್ಲಿ ಉಡೀಸ್!
    ಜನವರಿ 2 ರಂದು ಒಡಿಶಾದಲ್ಲಿ ನಡೆದ ಕಲೋತ್ಸವಕ್ಕೆ ತೆರಳಿದ್ದ ಪ್ರಹ್ಲಾದ್ ಮೂರ್ತಿ ಅಲ್ಲಿ ಭರ್ಜರಿ ಪರ್ಫಾಮೆನ್ಸ್ ನೀಡಿದ್ದರು. ಮಾತ್ರವಲ್ಲದೇ, ಕರ್ನಾಟಕವನ್ನ ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದು ಕೀರ್ತಿ ಬೆಳಗಿಸಿದರು.


    ನಮೋ ಭೇಟಿ
    ಜನವರಿ 26 ರ ಗಣರಾಜ್ಯೋತ್ಸವ ದೆಹಲಿ ಪರೇಡ್ ವೀಕ್ಷಣೆ ಮಾಡುವ ಅವಕಾಶವನ್ನು ಮೂಡುಬಿದಿರೆಯ ಸೋಲೋ ಡ್ರಾಮಾ ಆರ್ಟಿಸ್ಟ್ ಪ್ರಹ್ಲಾದ್ ಮೂರ್ತಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಮರುದಿನ 27 ರಂದು ಪ್ರಧಾನಿಯವರ ಪರೀಕ್ಷಾ ಪೆ ಚರ್ಚಾದಲ್ಲಿಯೂ ಭಾಗವಹಿಸಲಿದ್ದಾರೆ.


    ಇದನ್ನೂ ಓದಿ: Parshurama Theme Park: ತುಳುನಾಡ ಸೃಷ್ಟಿಕರ್ತನ ಕಂಚಿನ ಪ್ರತಿಮೆ! ಪರಶುರಾಮ ಥೀಮ್ ಪಾರ್ಕ್ ಹೇಗಿದೆ ಗೊತ್ತಾ?


    ಒಟ್ಟಿನಲ್ಲಿ ನಾಟಕ, ಗೀಟಕ, ಹಾಡು ಗೀಡಿನಿಂದ ಏನೂ ಮಾಡೋಕಾಗಲ್ಲ ಅನ್ನೋರಿಗೆ ತನ್ನ ಕೆಲಸದಿಂದಲೇ ತಕ್ಕ ಇತ್ತರ ಕೊಟ್ಟು ಕಲೆಯಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಪ್ರಹ್ಲಾದ ಮೂರ್ತಿ.

    Published by:ಗುರುಗಣೇಶ ಡಬ್ಗುಳಿ
    First published: