Nyaya Basadi: ನ್ಯಾಯ ಬೇಕಂದ್ರೆ ಇಲ್ಲೇ ಬರ್ಬೇಕು! ಮೂಡುಬಿದಿರೆಯಲ್ಲೊಂದು ಅಚ್ಚರಿಯ ತಾಣ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕೊಡಂಗಲ್ಲಿನ ಈ ಕಲ್ಲಿನ ಮೇಲೆ ನ್ಯಾಯ ಕೇಳಿ ಬಂದ್ರೆ ಸಾಕು, ಅಲ್ಲೊಂದು ತೀರ್ಮಾನ ಆಗಿಯೇ ತೀರುತ್ತಿತ್ತು. ಅಂತಹ ನಂಬಿಕೆ, ಶ್ರದ್ಧೆಯೂ ಆ ಕಾಲದಲ್ಲಿತ್ತು.

  • News18 Kannada
  • 5-MIN READ
  • Last Updated :
  • Dakshina Kannada, India
  • Share this:

    ದಕ್ಷಿಣ ಕನ್ನಡ: ಹಚ್ಚ ಹಸುರಿನ ಮರಗಳ ಸಾಲು. ಕಣ್ಣು ಕೋರೈಸೋ ಕರಿ ಬಂಡೆಗಳ ಕಲ್ಲು. ಅಲ್ಲೇ ಇದೆ ಒಂದು ಕಿರಿದಾದ ಮಂಟಪ. ನೋಡೋದಕ್ಕೆ ಹಳೆಯ ದೇವರ ಗುಡಿಯಂತೆ ಕಂಡ್ರೂ ಇದರ ಹಿನ್ನೆಲೆ ಬಹುದೊಡ್ಡದು. ಇಡೀ ಊರಿಗೇ ನ್ಯಾಯ ನೀಡುತ್ತಿದ್ದ (Nyaya Mantapa) ಮಂಟಪವಿದು. ಹಾಗಾಗಿಯೇ ನೋಡಿ ಇದನ್ನ ನ್ಯಾಯ ಬಸದಿ (Nyaya Basadi) ಎಂದೇ ಕರೆಯಲಾಗ್ತದೆ. ಹಾಗಿದ್ರೆ ಈ ಕಟ್ಟಡ ಎಲ್ಲಿದೆ? ಏನಿದರ ವಿಶೇಷತೆ ಅಂತೀವಿ ನೋಡಿ.


    ಹೌದು, ಒಂದು ದೊಡ್ಡ ಬಂಡೆ ಕಲ್ಲು, ಕಲ್ಲಿನ ಮೇಲೊಂದು ಹಳೆಯ ಮಂಟಪ ಹೊಂದಿರುವ ಈ ಜಾಗವೇ ದಕ್ಷಿಣ ಕನ್ನಡದ ಮೂಡುಬಿದಿರೆಯ ಹೊರವಲಯದ ಕೊಡಂಗಲ್ಲು. ವಿಶೇಷ ಅಂದ್ರೆ ಇಲ್ಲಿ ಕಾಣ ಸಿಗುವ ಈ ಮಂಟಪ ಹಿಂದಿನ ಕಾಲದಲ್ಲಿ ನ್ಯಾಯ ತೀರ್ಮಾನ ಮಾಡೋದಕ್ಕೆ ಹೆಸರಾದ ಜಾಗವಾಗಿತ್ತು.


    ಇಲ್ಲಿ ನ್ಯಾಯ ಸಿಕ್ಕೇ ಸಿಗುತ್ತೆ!
    ಕೊಡಂಗಲ್ಲಿನ ಈ ಕಲ್ಲಿನ ಮೇಲೆ ನ್ಯಾಯ ಕೇಳಿ ಬಂದ್ರೆ ಸಾಕು, ಅಲ್ಲೊಂದು ತೀರ್ಮಾನ ಆಗಿಯೇ ತೀರುತ್ತಿತ್ತು. ಅಂತಹ ನಂಬಿಕೆ, ಶ್ರದ್ಧೆಯೂ ಆ ಕಾಲದಲ್ಲಿತ್ತು. ಅದ್ಭುತ ನ್ಯಾಯ ತೀರ್ಮಾನಗಳು ಇದೇ ಕೊಡಂಗಲ್ಲಿನಲ್ಲಿರುವ ಬಂಡೆಯ ಮೇಲಿನ ಈ ಮಂಟಪದ ಮುಂದಾಗಿತ್ತು ಅಂತಾರೆ ಇತಿಹಾಸಕಾರರು.


    ಆಕರ್ಷಕ ತಾಣವೂ ಹೌದು
    ಸುತ್ತಲೂ ಹಸಿರ ವನದಂತೆ ಕಂಗೊಳಿಸೋ ಈ ಬೃಹದಾಕಾರದ ಬಂಡೆಯು ಅಷ್ಟೇ ಆಕರ್ಷಕ ಜಾಗವೂ ಹೌದು. ಮೇಲಿರುವ ಈ ಜಾಗದಿಂದ ಕಣ್ಣು ಹಾಯಿಸಿದರೆ ಅರ್ಧ ಮೂಡುಬಿದಿರೆ ಕಾಣಸಿಗುತ್ತೆ. ಅದಲ್ಲದೇ, ಹಚ್ಚ ಹಸಿರಿನಿಂದ ಈ ಕಲ್ಲುಬಂಡೆ ಸುತ್ತುವರೆದಿದ್ದು ಮನಸ್ಸಿಗೆ ಮುದ ನೀಡುತ್ತೆ.


    ಇದನ್ನೂ ಓದಿ: Dakshina Kannada: ತೆಂಗಿನ ನೀರಿನಲ್ಲಿ ಉರಿದ ಆರತಿ! ಕರಾವಳಿಯ ಪ್ರಮುಖ ದೇಗುಲದಲ್ಲಿ ವಿಸ್ಮಯ



    ನ್ಯಾಯಕ್ಕೆ ಭಾರೀ ಮರ್ಯಾದೆ ಕೊಡ್ತಿದ್ದ ಕಾಲವದು!
    ಮಂಟಪದ ಎದುರು ಒಂದು ಸಣ್ಣ ಬಲಿಕಲ್ಲಿದ್ದು ಜನ ಹಿಂದಿನಿಂದಲೂ ಈ ಜಾಗಕ್ಕೆ ‘ನ್ಯಾಯ ಬಸದಿ‘ ಎಂದೇಕರೆದುಕೊಂಡು ಬಂದಿದ್ದಾರೆ. ನ್ಯಾಯ ತೀರ್ಮಾನದ ಮಂಟಪಕ್ಕೆ ‘‘ಬಸದಿ‘‘ ಎನ್ನುವ ಮೂಲಕ ನ್ಯಾಯಕ್ಕೆ ಹಿಂದೆ ಜನ ಕೊಡುತ್ತಿದ್ದ ಮರ್ಯಾದೆಯನ್ನ ಅರ್ಥ ಮಾಡಿಕೊಳ್ಳಬಹುದಾಗಿದೆ.


    ಇದನ್ನೂ ಓದಿ: Success Story: ಕೃಷಿ, ಹೈನುಗಾರಿಕೆ, ಪಶುಪಾಲನೆ ಎಲ್ಲದರಲ್ಲೂ ಈ ಮಹಿಳೆ ಇಟ್ಟಿದ್ದೇ ಹೆಜ್ಜೆ!


    Nyaya Basadi
    ನ್ಯಾಯ ಬಸದಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಈಗ ಯಾವುದೇ ನ್ಯಾಯ ತೀರ್ಮಾನ ಆಗದೇ ಹೋದರೂ ಇಲ್ಲಿಗೆ ಇತಿಹಾಸಾಕ್ತರು ಬರುತ್ತಲೇ ಇರ್ತಾರೆ. ಜೊತೆಗೆ ಹಲವರಿಗೆ ತಿಳಿದೇ ಇಲ್ಲದ ಈ ಸ್ಪಾಟ್ ಸನ್ ಸೆಟ್ ಪಾಯಿಂಟ್ ಕೂಡ ಹೌದು. ಒಟ್ಟಿನಲ್ಲಿ ಮೂಡುಬಿದಿರೆ ಈ ಹಳೆ ಕೋರ್ಟ್ ಕಣ್ತುಂಬಿಕೊಳ್ಳೋದು ಕೂಡಾ ಒಂದು ಸೌಭಾಗ್ಯವೇ ಸರಿ.

    Published by:ಗುರುಗಣೇಶ ಡಬ್ಗುಳಿ
    First published: