• Home
  • »
  • News
  • »
  • mangaluru
  • »
  • Dakshina Kannada: ಬಿಯರ್ ಬಾಟಲಿಯೂ ವೇಸ್ಟ್ ಅಲ್ಲ! ಕಸದಿಂದ ರಸ ಅರಳಿಸಿ

Dakshina Kannada: ಬಿಯರ್ ಬಾಟಲಿಯೂ ವೇಸ್ಟ್ ಅಲ್ಲ! ಕಸದಿಂದ ರಸ ಅರಳಿಸಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇಷ್ಟೇ ಅಲ್ಲ ಕಣ್ರೀ, ಈ ಅದ್ಭುತ ವಸ್ತುಗಳನ್ನ ತಯಾರಿಸೋದು ವಿಶೇಷ ಚೇತನ ಮಕ್ಕಳು! ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಮಕ್ಕಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಪುರಸಭೆಯೊಂದಿಗೆ ಕೈ ಜೋಡಿಸಿದ್ದಾರೆ.

  • News18 Kannada
  • 3-MIN READ
  • Last Updated :
  • Dakshina Kannada, India
  • Share this:

    ಗರಟೆಯ ಲೋಟಗಳು, ಪೇಪರ್ ಸೀಡ್ ಪೆನ್, ಬಟ್ಟೆಯಿಂದ ಹೊಲೆದ ಚೀಲಗಳು, ಅಡಿಕೆ ಹಾಳೆಯ ತಟ್ಟೆ ಹೀಗೆ ವಿವಿದ ಕರಕುಶಲ ವಸ್ತುಗಳು. ಕಸ (Waste) ಎಂದು ಯಾವ  ವಸ್ತುಗಳನ್ನೂ (Plastic) ಎಸೆಯೋ ಚಾನ್ಸೇ ಇಲ್ಲ! ಪ್ಲಾಸ್ಟಿಕ್ ವಸ್ತುಗಳಿಗೆ ಬೈ ಬೈ ಅನ್ನೋಕೆ ಇಲ್ಲಿದೆ ನೋಡಿ ಒಳ್ಳೇ ಐಡಿಯಾ.  ಹೌದು, ಸರ್ಕಾರವೇ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಿ (Single Use Plastic Ban) ಆದೇಶಿಸಿದೆ. ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಿದೆ.


    ಅದ್ರಲ್ಲೂ ಮೂಡುಬಿದಿರೆ ಪುರಸಭೆಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ಲಾಸ್ಟಿಕ್​ಗೆ ಪರ್ಯಾಯವಾಗಿ ಕರಕುಶಲ ವಸ್ತುಗಳ ಮಾರ್ಕೆಟಿಂಗ್ ಶುರು ಮಾಡಿದೆ. ಇಲ್ಲಿ ತಯಾರಿಸೋ ಸೀಡ್ ಪೆನ್ ಹಿಂದೆ ಬರೆದು ಎಸೆಯುವ ಪೆನ್​ನಿಂದ ಕೂಡ ಗಿಡವೊಂದು ಹುಟ್ಟಲಿ ಎಂಬ ಯೋಚನೆ ಕೆಲಸ ಮಾಡಿದೆ. ಇವುಗಳಲ್ಲಿ ಮೆಣಸು, ಕೊತ್ತಂಬರಿ ಹೀಗೆ ವಿವಿಧ ಬೀಜಗಳನ್ನು ಬಳಸಲಾಗುತ್ತೆ.


    ಇದನ್ನೂ ಓದಿ: Hassan: ಖಾಲಿ ಗಾಜಿನ ಬಾಟಲಿ ಬ್ಯುಸಿನೆಸ್! ತಿಂಗಳಿಗೆ 50 ಸಾವಿರ ಆದಾಯ ಗಳಿಸುತ್ತಿರುವ ಹಾಸನದ ಯುವಕ


    ಕುಡಿದು ಎಸೆಯುವ ಬಿಯರ್ ಬಾಟಲಿಗಳಿಂದಲೂ ಕರಕುಶಲ ಕಲೆ
    ಇಷ್ಟೇ ಅಲ್ಲ ಕಣ್ರೀ, ಈ ಅದ್ಭುತ ವಸ್ತುಗಳನ್ನ ತಯಾರಿಸೋದು ವಿಶೇಷ ಚೇತನ ಮಕ್ಕಳು! ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಮಕ್ಕಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಪುರಸಭೆಯೊಂದಿಗೆ ಕೈ ಜೋಡಿಸಿದ್ದಾರೆ. ಜನ ಕುಡಿದು ಎಸೆಯುವ ಬಿಯರ್ ಬಾಟಲ್, ಸ್ಟ್ರಾಗಳಿಂದ ವಿವಿಧ ಕಲಾಕೃತಿಗಳನ್ನ ಇವ್ರು ಸಖತ್ತಾಗಿ ತಯಾರಿಸ್ತಾರೆ.


    ಇದನ್ನೂ ಓದಿ: Dakshina Kannada: ಟೆರೇಸ್ ಮೇಲೆ ಮಲ್ಲಿಗೆ ಬೆಳೆ, ತಿಂಗಳಿಗೆ 60 ಸಾವಿರ ಆದಾಯ!


    ಮೂಡುಬಿದಿರೆ ಪಾಲಿಕೆಯ ಮಾದರಿ ಪ್ರಯತ್ನ
    ಸಖತ್ ವೆರೈಟಿಯ ಗರಟೆಯ ಗೊಂಬೆಗಳನ್ನೂ ಸಹ ಇಲ್ಲಿ ಸೃಷ್ಟಿಸ್ತಾರೆ. ಈ ಮೂಲಕ ಪುರಸಭೆಗೆ ಸಹಾಯ ಮಾಡ್ತಿದ್ದಾರೆ ವಿಶೇಷ ಚೇತನ ವಿದ್ಯಾರ್ಥಿಗಳು. ಒಟ್ಟಾರೆ ಮೂಡುಬಿದಿರೆ ಪಾಲಿಕೆಯ ಈ ಪ್ರಯತ್ನ ನಿಜಕ್ಕೂ ಮಾದರಿ ಎನಿಸಿಕೊಳ್ಳುತ್ತಿದೆ.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: