• Home
  • »
  • News
  • »
  • mangaluru
  • »
  • Moodabidri: ಮೂಡುಬಿದಿರೆ ಹೆಸರ ಹಿಂದಿನ ರಹಸ್ಯವಿದು!

Moodabidri: ಮೂಡುಬಿದಿರೆ ಹೆಸರ ಹಿಂದಿನ ರಹಸ್ಯವಿದು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮೂಡುಬಿದಿರೆ ಅನ್ನೋ ಹೆಸರು ಬರಲು ಕಾರಣವಾದ ಬಿದಿರಿನ ಸಂಕುಲವನ್ನ ಮತ್ತೆ ಬೆಳೆಸಲು ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

  • News18 Kannada
  • Last Updated :
  • Dakshina Kannada, India
  • Share this:

    ಬಿದಿರಿನ ಸಾಲುಗಳು. ಕೆರೆಯ ಸೌಂದರ್ಯ. ಬೋಟಿಂಗ್ ಮಜಾ. ಉದ್ಯಾನವನದ ನಡುವೆಯೇ ಇದೆ ಬಿದಿರಿನ ಊರಿನ ಅಸ್ತಿತ್ವ. ಅದುವೇ ಮೂಡುಬಿದಿರೆಯ ಕಡಲಕೆರೆ (Kadalakere) ನಿಸರ್ಗಧಾಮ. ಹೌದು, ಮೂಡುಬಿದಿರೆ ಅನ್ನೋ ಹೆಸರೇ ಬಿದಿರುಗಳಿಂದ ಬಂದಿತ್ತು ಅನ್ನುತ್ತೆ ಇತಿಹಾಸ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಎಲ್ಲ ನಗರಗಳಂತೆ ಮೂಡುಬಿದಿರೆಯೂ (Moodabidri) ಆಧುನೀಕರಣಕ್ಕೆ ಒಗ್ಗಿಕೊಳ್ಳುತ್ತಿದ್ದಂತೆ ತನ್ನ ಹೆಸರಲ್ಲಿದ್ದ ಸಸ್ಯ ಸಂಕುಲವನ್ನೇ ಕಳೆದುಕೊಂಡಿತ್ತು. ಹಾಗಾಗಿ ಮೂಡುಬಿದಿರೆ ಅನ್ನೋ ಹೆಸರು ಬರಲು ಕಾರಣವಾದ ಬಿದಿರಿನ ಸಂಕುಲವನ್ನ (Bamboo) ಮತ್ತೆ ಬೆಳೆಸಲು ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.


    ಅದಕ್ಕಾಗಿ ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದಲ್ಲಿ ವಿವಿಧ ತಳಿಯ ಬಿದಿರಿನ ಗಿಡಗಳನ್ನ ನೆಡಲಾಗಿದೆ. ಜಗತ್ತಿನಾದ್ಯಂತವಿರುವ ಬಹುತೇಕ ತಳಿಯ ಸುಮಾರು 50 ಬಗೆಯ ಬಿದಿರ ಗಿಡಗಳು ಇಲ್ಲಿ ಅರಳಿ ನಗುತ್ತಿವೆ.


    ಬಿದಿರೊಂದೇ ಅಲ್ಲ, ನಗುತ್ತಿವೆ ಇನ್ನೂ ಹಲವು ಗಿಡಗಳು
    ಮೂಡುಬಿದಿರೆಗೆ ತಾಗಿಕೊಂಡಿರುವ ಮಾರ್ಪಾಡಿ ಗ್ರಾಮದಲ್ಲಿರುವ ಕಡಲಕೆರೆ ನಿಸರ್ಗಧಾಮ ಹಾಗೂ ಸಾಲುಮರದ ತಿಮ್ಮಕ್ಕ ಉದ್ಯಾನವನ ಪ್ರವಾಸಿಗರ ನೆಚ್ಚಿನ ತಾಣವೂ ಹೌದು. ಸುಮಾರು ಒಂದು ಕಿಲೋಮೀಟರ್ ವಾಕಿಂಗ್ ಪಾಥ್ ಹೊಂದಿರುವ ಈ ನಿಸರ್ಗಧಾಮವು ಬಿದಿರಿನ ಜೊತೆ ಜೊತೆಗೆ ಹಲಸು ಸೇರಿದಂತೆ ಅನೇಕ ಜಾತಿಯ ಮರಗಳನ್ನ ಹೊಂದಿದೆ.


    ಇದನ್ನೂ ಓದಿ: Arecanut Future: ಅಡಿಕೆಗೆ ಭವಿಷ್ಯವಿದೆಯೇ? ಪುತ್ತೂರಿನಲ್ಲಿ ಕೃಷಿಕರಿಂದ ಮಹತ್ವದ ತೀರ್ಮಾನ


    11 ಎಕರೆಯಲ್ಲಿದೆ ನಿಸರ್ಗಧಾಮ
    ಪಶ್ಚಿಮ ಘಟ್ಟಗಳ ಸಾಲಿನುದ್ದಕ್ಕೂ ಕಾಣಬಹುದಾದ ಅನೇಕ ಸಸ್ಯ ಸಂಕುಲಗಳನ್ನ ಇಲ್ಲಿ ಕಣ್ತುಂಬಿಸಿಕೊಳ್ಳಬಹುದಾಗಿದೆ. ವಿಸ್ತಾರವಾಗಿ ಹರಡಿಕೊಂಡಿರುವ ಕೆರೆಯಲ್ಲಿ ದೋಣಿವಿಹಾರಕ್ಕೂ ಅವಕಾಶವಿದೆ. ಸುಮಾರು ಹನ್ನೊಂದು ಎಕರೆ ವಿಸ್ತೀರ್ಣವಿರುವ ಕಡಲಕೆರೆ ನಿಸರ್ಗಧಾಮ ಐವತ್ತು ಹೆಚ್ಚುಬಗೆಯ ವಿಶೇಷ ಸಸ್ಯಗಳನ್ನು ಹೊಂದಿದೆ. ಮಕ್ಕಳಿಗಾಗಿ ನಿಸರ್ಗಧಾಮವೂ ಇಲ್ಲಿವೆ . ಜೊತೆ ಜೊತೆಗೆ ಅರಣ್ಯ ಇಲಾಖೆಯ ನರ್ಸರಿ ಕೂಡ ಇದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.


    ಇದನ್ನೂ ಓದಿ: Dakshina Kannada: ಮೈಸೂರು ಮಹಾರಾಜರ ಕಾಲದ ಬಂಗಾರದ ಚಿತ್ರಗಳು! ವಿಡಿಯೋ ನೋಡಿ


    ಒಟ್ಟಿನಲ್ಲಿ ಮೂಡುಬಿದಿರೆ ತನ್ನ ಅಸ್ತಿತ್ವವನ್ನ ಉಳಿಸಿಕೊಳ್ಳುವುದರ ಜೊತೆಗೆ ಕಡಲಕೆರೆ ಅನ್ನೋ ನಿಸರ್ಗಧಾಮಕ್ಕೆ ಇನ್ನಷ್ಟು ಜೀವ ತುಂಬುತ್ತಿದೆ. ನೀವೂ ಮೂಡಬಿದಿರೆಗೆ ಬಂದ್ರೆ ಒಮ್ಮೆ ಕಡಲಕೆರೆ ನಿಸರ್ಗಧಾಮಕ್ಕೆ ವಿಸಿಟ್ ಹಾಕೋದನ್ನ ಮರೆಯಬೇಡಿ.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: