ಮಂಗಳೂರು: ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಬೇಸಿಗೆ ಸುಡುತ್ತಿದೆ. ಮಳೆ ಇನ್ನೂ ಸರಿಯಾಗಿ ಆರಂಭವಾಗದೇ ಇರುವುದರಿಂದ ನೀರಿಗೆ ಹಾಹಾಕಾರ ಆರಂಭವಾಗಿದೆ. ಆದರೆ, ಮಳೆ ಇನ್ನೂ ಸರಿಯಾಗಿ ಸುರಿಯದೇ ಇರುವುದರಿಂದ ಜೇನು ಸಂಗ್ರಹಿಸುವವರು ಮಾತ್ರ ಖುಷಿಯಾಗಿದ್ದಾರೆ. ಕರಾವಳಿ ಭಾಗಗಳಲ್ಲಿ (Coastal Karnataka) ಅದ್ರಲ್ಲೂ ಪಶ್ಚಿಮ ಘಟ್ಟದ ತಪ್ಪಲುಗಳಲ್ಲಿ, ಕೃಷಿ ತೋಟ ಹೊಂದಿರುವಲ್ಲಿ ಜೇನು ಸಂಗ್ರಹ ಜಾಸ್ತಿಯಾಗುತ್ತಿದೆ. ಹೀಗಾಗಿ ದಕ್ಷಿಣ ಕನ್ನಡ ಭಾಗದಲ್ಲಿ(Dakshina Kannada News) ಈಗ ಜೇನುತುಪ್ಪ ಕೊಯ್ಲು ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ನೈಸರ್ಗಿಕ ಗೂಡು ಕಟ್ಟಿದ ಜೇನಿನಿಂದ (Pure Honey) ತುಪ್ಪವನ್ನು ಭಾರೀ ಚಾಕಚಕ್ಯತೆಯಿಂದ ಸಂಗ್ರಹಿಸುವ ಕಲೆ ಹಳ್ಳಿಯ ಜನರಲ್ಲಿದೆ.
ಜೇನುತುಪ್ಪ ಸಂಗ್ರಹ ಹೇಗೆ?
ಸಾಮಾನ್ಯವಾಗಿ ಮರಗಳಲ್ಲಿ ಕಟ್ಟಿರುವ ಜೇನುಗೂಡಿನಿಂದ ತುಪ್ಪ ಸಂಗ್ರಹಿಸುವುದು ಸವಾಲಿನ ವಿಚಾರವೇ ಸರಿ. ಸ್ವಲ್ಪ ಯಾಮಾರಿದರೂ ಜೇನು ದಾಳಿಗೆ ತುತ್ತಾಗಬೇಕಾಗುತ್ತೆ. ಆದರೆ, ಸಾಮಾನ್ಯವಾಗಿ ಜೇನುಗೂಡಿಗೆ ಬೆಂಕಿ ಹಾಕುವ ಮೂಲಕ ಕರಾವಳಿಗರು ಮರದಲ್ಲಿದ್ದ ಜೇನು ನೊಣಗಳನ್ನು ದೂರ ಮಾಡುತ್ತಾರೆ. ಬಳಿಕ ಅದರಲ್ಲಿ ಸಂಗ್ರಹವಾದ ಜೇನುತುಪ್ಪವನ್ನು ಸಂಗ್ರಹಿಸಿ ತರುತ್ತಾರೆ.
ಜೇನು ಹನಿಗಳ ಸಂಗ್ರಹ
ಅದನ್ನು ಹಿಂಡಿ ಪ್ರತ್ಯೇಕಿಸುವ ಮೂಲಕ ಜೇನುತುಪ್ಪವನ್ನು ಸಂಗ್ರಹಿಸುತ್ತಾರೆ. ಇನ್ನು ಕೆಲವರು ಬೇರೆ ಬೇರೆ ವಿಧಾನಗಳನ್ನು ಬಳಸಿ ಜೇನು ಹನಿ ಸಂಗ್ರಹಿಸುತ್ತಾರೆ. ಇತ್ತೀಚೆಗೆ ಜೇನು ಸಾಕಾಣಿಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದ್ದು, ಹೆಚ್ಚಿನ ಫಸಲಿಗಾಗಿ ಅವರು ಜೇನುಗಳನ್ನು ಗೂಡಿನಲ್ಲಿರಿಸಿ ಸಾಕುತ್ತಾರೆ. ಬಳಿಕ ಅದ್ರಿಂದ ಜೇನುತುಪ್ಪವನ್ನು ಸಂಗ್ರಹಿಸುತ್ತಾರೆ.
ಇದನ್ನೂ ಓದಿ: Karnataka SSLC Results 2023: ಬುದ್ಧಿವಂತ ಜಿಲ್ಲೆಗಳು ಟಾಪರ್ ಆಗಿಲ್ಲವೇಕೆ? ಇಲ್ಲಿದೆ ಕಾರಣ!
ಮಳೆ ಬರದಿದ್ದರೆ ಭರ್ಜರಿ ಅವಕಾಶ
ನಿಜ, ಮಳೆ ಆರಂಭವಾದ ಮೇಲೆ ಜೇನು ನೊಣಗಳು ಉತ್ಪತ್ತಿಯಾದ ತುಪ್ಪವನ್ನೇ ತಾವೇ ತಿನ್ನುತ್ತವೆ. ಮತ್ತು ಅವುಗಳು ತಮ್ಮ ಆವಾಸ ಸ್ಥಾನವನ್ನು ಬದಲಿಸುತ್ತವೆ. ಹೀಗಾಗಿ ವರ್ಷದಲ್ಲಿ ಒಂದೂವರೆ ತಿಂಗಳಷ್ಟೇ ಈ ಜೇನುತುಪ್ಪದ ಫಸಲು ಪಡೆಯಲು ಸಾಧ್ಯ. ಹಾಗಾಗಿ ಮಳೆ ಮುಂದೂಡಿಕೆ ಆದಷ್ಟು ಮೇ ತಿಂಗಳಿನಲ್ಲಿ ಜೇನು ಸಂಗ್ರಾಹಕರು ಜೇನುಗೂಡು ಹುಡುಕಿ ಹೊರಡುತ್ತಾರೆ. ಇಲ್ಲವೇ ಮೊದಲೇ ಗುರುತಿಸಿಟ್ಟ ಜೇನುಗೂಡುಗಳಿಂದ ಜೇನುತುಪ್ಪ ಸಂಗ್ರಹಿಸುತ್ತಾರೆ.
ರೇಟು ಎಷ್ಟಿರುತ್ತೆ?
ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಸಂಗ್ರಹವಾಗುವ ನೈಸರ್ಗಿಕ ಜೇನುತುಪ್ಪಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಿಂದೆಲ್ಲ ದಕ್ಷಿಣ ಕನ್ನಡ ಭಾಗದಲ್ಲಿ “ಕುಡ್ತೆ” ಅನ್ನೋ ಸ್ಥಳೀಯ ಅಳತೆ ಮಾನದಂಡದಲ್ಲಿ ನೀಡುತ್ತಿದ್ದ ಜೇನುತುಪ್ಪಗಳು ಇಂದು ಕಿಲೋಗ್ರಾಂ ಮೇಲೆಯೇ ಮಾರಾಟವಾಗುವುದು ಕಾಮನ್.
ಇದನ್ನೂ ಓದಿ: Matsyagandha Express: ಕರಾವಳಿಯ ಕಣ್ಮಣಿ ಮತ್ಸ್ಯಗಂಧ ಎಕ್ಸ್ಪ್ರೆಸ್ಗೆ 25 ವರ್ಷ, ಇದು ಕೇವಲ ರೈಲಲ್ಲ, ಬದುಕು!
ಬಾಟಲಿಗಳಲ್ಲಿ ಜೇನು ಹನಿ ತುಂಬಿ ಮಾರಾಟ ಮಾಡುವವರು ಅರ್ಧ ಕೆಜಿ ಗೆ 350 ರಿಂದ 500 ರವರೆಗೆ ಹಾಗೂ ಒಂದು ಕೆಜಿಗೆ 700 ರಿಂದ 1000 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ