ಮಂಗಳೂರು: ತೊಡೆ ಮೇಲೆ ನಾಯಿ ಮಲಗಿಸಿಕೊಂಡು ಕುಳಿತಿರೋ ಮಹಿಳೆ, ಆಕೆ ಸುತ್ತಲೂ ಹತ್ತಾರು ನಾಯಿಗಳು, ಈ ಮಹಿಳೆ ಎಲ್ಲೇ ಹೋದ್ರೂ ಸುತ್ತುವರಿಯುವ ಬೀದಿನಾಯಿಗಳು. ಈಕೆ ಮಂಗಳೂರಿನ ಬೀದಿನಾಯಿಗಳ ಪಾಲಿನ ಮಹಾತಾಯಿ. ಆದ್ರೆ ಈ ಉದಾರ ಮನಸ್ಸಿನ ಮಹಿಳೆಗೆ ಮನುಷ್ಯರಿಂದಲೇ ಎದುರಾಗಿದೆ ಸಂಕಷ್ಟ! ಈ ಮಹಿಳೆ ಹೆಸರು ರಜನಿ ಶೆಟ್ಟಿ ಅಂತ. ಕಳೆದ ಇಪ್ಪತ್ತೆರಡು ವರ್ಷದಿಂದ ನಾಯಿಗಳಿಗೆ ಆಹಾರ ಹಾಕುತ್ತಿರುವ ರಜನಿ ಶೆಟ್ಟಿ (Mangaluru Rajani Shetty)ಪ್ರತಿದಿನ 800 ನಾಯಿಗಳ ಹೊಟ್ಟೆ ಪೊರೆಯುತ್ತಾರೆ. 60 ಕೆಜಿ ಅಕ್ಕಿ,ಚಿಕನ್ ವೇಸ್ಟ್ನ್ನು ಬೇಯಿಸಿ ಆಹಾರ ತಯಾರಿಸಿ ಬೀದಿನಾಯಿಗಳಿಗೆ ಉಣಬಡಿಸ್ತಾರೆ.
ಮನೆಯಲ್ಲಿಯೇ 38 ಬೀದಿನಾಯಿ, ಗಿಡುಗ, ಕಾಗೆಗಳನ್ನು ಸಾಕುತ್ತಿದ್ದಾರೆ. ಗಾಯಗೊಂಡಿರುವ,ಅನಾರೋಗ್ಯ ಪೀಡಿತ ಪ್ರಾಣಿ ಪಕ್ಷಿಗಳ ಆರೈಕೆಯನ್ನೂ ಮಾಡ್ತಾರೆ. ಆದರೆ ಈ ಮಹಾತಾಯಿಗೆ ಇದೀಗ ಸ್ಥಳೀಯರಿಂದಲೇ ಸಮಸ್ಯೆ ಎದುರಾಗಿದೆ.
ಬೀದಿನಾಯಿಗಳ ಅನ್ನಕ್ಕೆ ಸೀಮೆಎಣ್ಣೆ
ರಜನಿ ಶೆಟ್ಟಿಯವ್ರು ಬೀದಿನಾಯಿಗಳಿಗೆ ಉಣಬಡಿಸೋಕೆ ತಯಾರಿಸಿದ ಬೇಯಿಸಿದ ಅನ್ನಕ್ಕೆ ಸ್ಥಳೀಯರೇ ಸೀಮೆಎಣ್ಣೆ ಸುರಿಯುತ್ತಿದ್ದಾರಂತೆ. ಆಹಾರವನ್ನು ನಾಯಿಗಳು ತಿನ್ನೋಕೆ ಬಿಡ್ತಿಲ್ವಂತೆ. ಇದ್ರಿಂದ ತಯಾರಿಸಿದ ಅಷ್ಟೂ ಆಹಾರ ವೇಸ್ಟ್ ಆಗ್ತಿದೆ ಎಂದು ರಜನಿ ಶೆಟ್ಟಿ ಅಳಲು ತೋಡಿಕೊಳ್ತಿದ್ದಾರೆ.
ಇದನ್ನೂ ಓದಿ: Hanuman Temple: ಎಳನೀರು ಪ್ರಿಯ ಈ ಹನುಮ! ಸೀಯಾಳ ಅಭಿಷೇಕ ಮಾಡಿಸಿದ್ರೆ ಇಷ್ಟಾರ್ಥ ಪ್ರಾಪ್ತಿ
ಮನೆ ಸುತ್ತ ಸಿಸಿಟಿವಿ!
ಈ ಸಮಸ್ಯೆ ಬಗೆಹರಿಸೋಕೆ ರಜನಿ ಶೆಟ್ಟಿ ಸಿಸಿಟಿವಿ ಅಳವಡಿಸಿದ್ದಾರೆ. ನಾಯಿಗಳಿಗೆ ತಯಾರಿಸಿದ ಆಹಾರಕ್ಕೆ ಸೀಮೆಎಣ್ಣೆ ಸುರಿಯುತ್ತಿರೋರು ಯಾರೆಂದು ಕಂಡುಹಿಡಿಯೋಕೆ ಮನೆಯ ಸುತ್ತ ಕ್ಯಾಮರಾ ಕಣ್ಗಾವಲಿಟ್ಟಿದ್ದಾರೆ. ಆದ್ರೂ ನಾಯಿ ಆಹಾರಕ್ಕೆ ಕಲ್ಲು ಬೀಳ್ತಿದೆಯಂತೆ.
ಇದನ್ನೂ ಓದಿ: Success Story: ದಕ್ಷಿಣ ಕನ್ನಡದಲ್ಲಿ ಜೇನು ಕ್ರಾಂತಿ! ಯುವಕನಿಂದ ಇಡೀ ಊರಿಗೇ ಸಿಹಿ
ಒಟ್ಟಾರೆ ರಜನಿ ಶೆಟ್ಟಿಯವರ ಈ ಸಮಸ್ಯೆ ಬೇಗ ಬಗೆಹರಿಯಬೇಕು ಅಂತಿದ್ದಾರೆ ಕರಾವಳಿಯ ಪ್ರಾಣಿಪ್ರೇಮಿಗಳು.
ಮಾಹಿತಿ, ವಿಡಿಯೋ: ಕಿಶನ್, ನ್ಯೂಸ್ 18 ಕನ್ನಡ ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ