ಮಂಗಳೂರು: ಕಣ್ಣಿಗೆ ಬಟ್ಟೆ ಕಟ್ಟಿ, ಕಟ್ಟದೇ ಇರಿ, ಈಕೆಯ ಸಾಧನೆಗೆ ಅದ್ಯಾವುದೂ ಅಡ್ಡಿಯಾಗದು. ಇಂಗ್ಲೀಷ್ ಇರ್ಲಿ, ಕನ್ನಡ ಇರ್ಲಿ ಎರಡು ಕೈಯಲ್ಲಿ ಏಕಕಾಲಕ್ಕೆ (Writing In Two Hands) ಬರೆಯೋ ಮೂಲಕ ಅಚ್ಚರಿ ಮೂಡಿಸೋ ಬಾಲಕಿ ಈಕೆ ಇದ್ಯಾವುದೋ ಸಿನೆಮಾ ಕಥೆಯಲ್ಲ, ಕರಾವಳಿಯ (Coastal Karnataka Talent) ಕುವರಿಯ ವರ್ಡ್ ರೆಕಾರ್ಡ್ ಸ್ಟೋರಿ!
ಹೌದು, ಶಿವಾಜಿ ದಿ ಬಾಸ್‌ನಲ್ಲಿ ರಜನಿಕಾಂತ್ ಸಖತ್ ಆಗಿ ಎರಡೂ ಕೈಯಲ್ಲಿ ಸೈನ್ ಹಾಕೋದನ್ನ ನೋಡಿ ಖುಷಿಪಟ್ಟವರು ಈ ಹುಡುಗಿ ಸಾಧನೆ ನೋಡ್ಲೇಬೇಕು. ಅಂದಹಾಗೆ ಇದು ಯಾವುದೋ ರೀಲ್ ಅಲ್ಲದ ರಿಯಲ್ ಕಥೆ. ಅಂದಹಾಗೆ ಈಕೆ ಹೆಸರು ಆದಿ ಸ್ವರೂಪ ಅಂತ. ಮಂಗಳೂರು ಮೂಲದ ಈ ಹುಡುಗಿಯ ಸಾಧನೆ ಕಡಿಮೆಯದ್ದಲ್ಲ.
ಈ ಕಲೆಗೆ ಆಂಬಿಡೆಕ್ಸಿಯಸ್ ಅಂತಾರೆ!
ಎರಡೂ ಕೈಯಲ್ಲಿ ಏಕಕಾಲಕ್ಕೆ 10 ವಿಧದಲ್ಲಿ ಬರೆಯಬಲ್ಲಳು ಈ ಬಾಲಕಿ. ಮಿರರ್ ಶೈಲಿ ಹಾಗೂ ಕನ್ನಡ ಸೇರಿದಂತೆ ಇಂಗ್ಲಿಷ್ ಭಾಷೆಯಲ್ಲಿ ಸರಾಗವಾಗಿ ಬರೆಯಬಲ್ಲಳು. ಎರಡೂ ಕೈಗಳಲ್ಲಿ ಬರೆಯುವ ಈ ಕಲೆಗೆ ಆಂಬಿಡೆಕ್ಸಿಯಸ್ ಎಂಬ ಹೆಸರಿದ್ದು ಈ ಕಲೆ ಕಲಿಯೋದು ಅತಿ ಕಷ್ಟದ್ದು.
ಮಿಮಿಕ್ರಿಯಲ್ಲೂ ಪಂಟರ್!
ಅಷ್ಟೇ ಅಲ್ಲ,ಈಕೆ ಮಿಮಿಕ್ರಿಯನ್ನ ಕೂಡ ಸರಾಗವಾಗಿ ಮಾಡಬಲ್ಲಳು. ಬೆಕ್ಕು, ನಾಯಿ, ವಾದ್ಯ ಹೀಗೆ ಅನೇಕ ರೀತಿಯ ಸ್ವರವನ್ನ ಕೂಡ ಮಾಡಿ ಮನರಂಜಿಸಬಲ್ಲಳು. 36ರಿಂದ 40 ಪ್ರತಿ ನಿಮಿಷಕ್ಕೆ ಬರೆಯುವ ಈಕೆ ಸರಾಗವಾಗಿ ತನ್ನ ಎರಡು ಕೈಗಳಿಂದ ಹತ್ತು ವಿಧದ ಬರಹಗಳನ್ನ ಬರೆಯುತ್ತಾಳೆ.
ಇದನ್ನೂ ಓದಿ: Puttur: ಕಾರ್ ಬಂಪರ್ನಲ್ಲಿ 70 ಕಿಲೋ ಮೀಟರ್ ಸಂಚರಿಸಿದ ನಾಯಿಯ ಮಡಿಲು ಸೇರಿದ ಮರಿಗಳು!
ಇವರ ಈ ಸಾಧನೆಗೆ ಉತ್ತರ ಪ್ರದೇಶದ ಲತಾ ಪೌಂಡೇಶನ್ ಎಕ್ಸ್ ಕ್ಲೂಸಿವ್ ವರ್ಡ್ ರೆಕಾರ್ಡ್ ಎನ್ನುವ ಸರ್ಟಿಫಿಕೇಟ್ ಕೂಡ ನೀಡಿದೆ. ರುಬಿಕ್ಸ್ ಕ್ಯೂಬ್ ಮೊಸಾಯಿಕ್‌ನಲ್ಲೂ ತಾಯಿ ಸುಮಂಗಲ ಅವರ ಜೊತೆ ಸೇರಿ ಆದಿ ಸ್ವರೂಪ ವರ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ.
ಇದನ್ನೂ ಓದಿ: Mangaluru: ಒಣ ಮೀನು ತಯಾರಿಗೆ ಖಡಕ್ ನಿಯಮ! ಮಸಾಲೆ ಅರೆಯುವ ಮುನ್ನ ಹುಷಾರ್!
ಬೀಟ್ ಬಾಕ್ಸಿಂಗ್‌ನಲ್ಲೂ ರೆಕಾರ್ಡ್ ಮಾಡುವ ಆಸೆ!
ಬೀಟ್ ಬಾಕ್ಸಿಂಗ್ ಕೂಡ ಮಾಡುವ ಈಕೆ ಬೀಟ್ ಬಾಕ್ಸಿಂಗ್‌ನಲ್ಲೂ ರೆಕಾರ್ಡ್ ಸೆಟ್ ಮಾಡೋ ಆಸೆ ಹೊಂದಿದ್ದಾರೆ. ಪಂಡಿತ್ ರವಿಕಿರಣ್ ಅವರ ಬಳಿ ಹಿಂದೂಸ್ಥಾನಿ ಸಂಗೀತವನ್ನ ಕಲಿತಿರೋ ಆದಿ ಸ್ವರೂಪ ಅವರ ಸಾಧನೆಗಳಂತೂ ಅಪಾರ. ಒಟ್ಟಿನಲ್ಲಿ ಇವರ ವಿಶಿಷ್ಟ ಸಾಧನೆ ಅಚ್ಷರಿ ಮೂಡಿಸುವುದಂತೂ ನಿಜ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ