Mangaluru University: ಮಂಗಳೂರು ವಿವಿಯಲ್ಲಿ ಪಿಹೆಚ್ ಡಿ ಮಾಡಿ! ವಿವರ ಇಲ್ಲಿದೆ

ಮಂಗಳೂರು ವಿಶ್ವವಿದ್ಯಾಲಯದ ಪಿ.ಹೆಚ್.ಡಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತ ಎಲ್ಲ ವಿವರ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಂಗಳೂರು ವಿಶ್ವವಿದ್ಯಾನಿಲಯದ  (Mangaluru University) ಸ್ನಾತಕೋತ್ತರ ಮತ್ತು ಸಮೂಹ ಸಂವಹನ ವಿಷಯದ ಪಿಹೆಚ್.ಡಿ (Mangaluru University Ph.D.) ಕಾರ್ಯಕ್ರಮಕ್ಕೆ ಸಂಯೋಜನೆ ಪಡೆದಿರುವ ಕಾಲೇಜುಗಳಲ್ಲಿ ಪಿ.ಹೆಚ್.ಡಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ವಿವರವಾದ ಅರ್ಜಿಯೊಂದಿಗೆ, ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಪಟ್ಟವರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೆ  ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಹೆಚ್.ಡಿ ಮಾಡುವುದು ಹೇಗೆ? ಅರ್ಜಿ ಸಲ್ಲಿಸುವುದು ಹೇಗೆ?  ಪಿಹೆಚ್​.ಡಿ ಅರ್ಜಿ ಸಲ್ಲಿಕೆಗೆ ಫೀಸ್ ಇದೆಯೇ? ಯಾವ ವಿಳಾಸಕ್ಕೆ ಕಳಿಸಬೇಕು? ಈ ಎಲ್ಲ ವಿವರ ನಿಮಗಾಗಿಯೇ ಇಲ್ಲಿದೆ ನೋಡಿ.



















    ಅರ್ಜಿ ಕರೆದ ಸಂಸ್ಥೆಮಂಗಳೂರು ವಿಶ್ವವಿದ್ಯಾಲಯ
    ಫೀಸ್ ಎಷ್ಟು?ಸಾಮಾನ್ಯ ಅಭ್ಯರ್ತಿಗಳಿಗೆ ₹1,100, ಎಸ್​ಸಿ ಎಸ್​ಟಿ ಅಭ್ಯರ್ಥಿಗಳಿಗೆ ₹500
    ಹೇಗೆ ಅರ್ಜಿ ಸಲ್ಲಿಸುವುದು?ಡಿ.ಡಿ. ಮೂಲಕ
    ಹೇಗೆ ಅರ್ಜಿ ಸಲ್ಲಿಸುವುದು?ಇಲ್ಲಿ ಕ್ಲಿಕ್ ಮಾಡಿ

    ಅರ್ಜಿ ಸಲ್ಲಿಕೆ ವಿಧಾನ
    ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ‘‘ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ- 574199‘‘ ಇವರಿಗೆ ನಿಗದಿತ ಮೊತ್ತವನ್ನು ಡಿ.ಡಿ. ಮುಖಾಂತರ ಪಾವತಿ ಸಲ್ಲಿಸಬಹುದಾಗಿದೆ. ಬಳಿಕ ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗದ ಅಧ್ಯಕ್ಷರು/ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರದ ಮುಖ್ಯಸ್ಥರಿಗೆ ಸಲ್ಲಿಸುವುದಾಗಿದೆ.

    ಪಾವತಿ ಮೊತ್ತ
    ಅರ್ಜಿದಾರರು ಡಿ.ಡಿ. ಮೂಲಕ ಮಂಗಳೂರು ವಿಶ್ವವಿದ್ಯಾನಿಲಯ ನಿಗದಿಪಡಿಸಿದ ಮೊತ್ತವನ್ನು ಪಾವತಿಸಬೇಕು. ಅರ್ಜಿ ಶುಲ್ಕವು ₹1,100 ಆಗಿದೆ. ಆದರೆ, ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳು (ಜಾತಿ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ) ₹550 ಪಾವತಿಸಬೇಕಾಗುತ್ತದೆ.

    ಕೊನೆಯ ದಿನಾಂಕ
    ಅರ್ಹ ಅಭ್ಯರ್ಥಿಗಳು ಮುಖ್ಯಸ್ಥರಿಗೆ ದಿನಾಂಕ 30.08.2022 ಒಳಗೆ ಸಲ್ಲಿಸಬೇಕಿದೆ. ಈ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿದರೆ ಮಾತ್ರ ನಿಮ್ಮ ಅರ್ಜಿಗಳನ್ನು ಪರಿಗಣಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

    ಇದನ್ನೂ ಓದಿ: Mangaluru Viral News: 121 ಬಗೆಯ ಭಕ್ಷ್ಯ ನೈವೇದ್ಯ! ಮಂಗಳೂರಿನ ಭಕ್ತೆಗೆ ಕೃಷ್ಣ ಒಲಿಯದಿರಲು ಸಾಧ್ಯವೇ?

    ಹೆಚ್ಚಿನ ಮಾಹಿತಿಗಾಗಿ
    ಖಾಲಿ ಇರುವ ಸೀಟುಗಳು, ಮೀಸಲಾತಿ ವಿವರ ಮತ್ತು ಪಿ.ಹೆಚ್.ಡಿ ಕಾರ್ಯಕ್ರಮಗಳನ್ನು ನಿಯಂತ್ರಿಸುವ ನಿಯಮಾವಳಿ ಹಾಗೂ ಮಾರ್ಗಸೂಚಿಯ ವಿವರಗಳ ಮತ್ತು ಅರ್ಜಿ ನಮೂನೆಗಳಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವೆಬ್​ಸೈಟ್​ಗಳನ್ನು ಸಂಪರ್ಕಿಸಬಹುದು. ಅರ್ಜಿ ನಮೂನೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ಇದನ್ನೂ ಓದಿ: Dakshina Kannada: ತುಳುನಾಡಲ್ಲಿ ನಡೆಯುತ್ತೆ ಪ್ರೇತಾತ್ಮಗಳ ಮದುವೆ! ಅಚ್ಚರಿ ಆದರೂ ಸತ್ಯವಿದು!

    ಮಂಗಳೂರು ವಿಶ್ವವಿದ್ಯಾಲಯದ ಪಿ.ಹೆಚ್.ಡಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
    Published by:guruganesh bhat
    First published: