Mangaluru To Mumbai: ಇನ್ಮುಂದೆ ಪ್ರತಿದಿನವೂ ಮಂಗಳೂರಿನಿಂದ ಮುಂಬೈಗೆ ಹಾರಿರಿ! ಹೊಸ ವಿಮಾನ ಆರಂಭ

ಕೇವಲ ಒಂದೂವರೆ ಗಂಟೆಯಲ್ಲಿ ಕಡಲನಗರಿಯಿಂದ ವಾಣಿಜ್ಯ ನಗರಿ ತಲುಪಬಹುದಾಗಿದೆ. ಮೊದಲ ಹಾರಾಟದಲ್ಲಿಯೇ ಉತ್ತಮ ರೆಸ್ಪಾನ್ಸ್ ಕೂಡಾ ವ್ಯಕ್ತವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಂಗಳೂರು: ಕರಾವಳಿಗರ ಪಾಲಿಗೆ ಸಿಹಿ ಸುದ್ದಿ. ಇನ್ಮುಂದೆ ಕಡಲ ನಗರಿ ಮಂಗಳೂರಿನಿಂದ ಪ್ರತಿದಿನವೂ ಒಂದೇ ವಿಮಾನದಲ್ಲಿ ನೇರವಾಗಿ ವಾಣಿಜ್ಯ ನಗರಿ ಮುಂಬೈ ತಲುಪಬಹುದಾಗಿದೆ. ಇಂತಹ ಅವಕಾಶವನ್ನು ಇಂಡಿಗೋ ವಾಯು ಯಾನ ಸಂಸ್ಥೆಯು ಕಲ್ಪಿಸುತ್ತಿದೆ. ದೇಶೀಯ ವಾಯು ಯಾನಕ್ಕೆ ಹೆಸರಾದ ಇಂಡಿಗೋ ವಿಮಾನ ಯಾನ ಸಂಸ್ಥೆಯು (IndiGo) ಇದೀಗ ಮಂಗಳೂರಿನಿಂದ ಮುಂಬೈಗೆ (Mangaluru To Mumbai Flights) ನೇರ ವಿಮಾನ ಹಾರಾಟವನ್ನು ದಿನಂಪ್ರತಿ ಆರಂಭಿಸಿದೆ. ಕೇವಲ ಒಂದೂವರೆ ಗಂಟೆಯಲ್ಲಿ ಕಡಲನಗರಿಯಿಂದ ವಾಣಿಜ್ಯ ನಗರಿ ತಲುಪಬಹುದಾಗಿದೆ. ಮೊದಲ ಹಾರಾಟದಲ್ಲಿಯೇ ಉತ್ತಮ ರೆಸ್ಪಾನ್ಸ್ ಕೂಡಾ ವ್ಯಕ್ತವಾಗಿದೆ. ಮಂಗಳೂರು ಟು ಮುಂಬೈ ಇಂಡಿಗೊ ವಿಮಾನಯಾನದ ದರ, ಸಮಯ ಎಲ್ಲ ವಿವರ ಇಲ್ಲಿದೆ. 

  ಮಂಗಳೂರು-ಮುಂಬೈ ನಡುವೆ ಹಾರಾಟ ಮಾಡಲೆಂದೇ ಇಂಡಿಗೋ ಸಂಸ್ಥೆಯು ತನ್ನ ನೂತನ ವಿಮಾನವನ್ನು ಪರಿಚಯಿಸುತ್ತಿದೆ. ಜೂನ್ 17ರ ಶುಕ್ರವಾರದಂದು ಹೊಸ ವಿಮಾನವು ಮುಂಬೈಯಿಂದ ಮಂಗಳೂರು ಹಾಗೂ ಮಂಗಳೂರಿನಿಂದ ಮುಂಬೈಗೆ ಪ್ರಾಯೋಗಿಕ ಹಾರಾಟ ನಡೆಸಿತು. ಪ್ರಾಯೋಗಿಕ ಹಾರಾಟ ಸಮಯ ಎರಡು ಮಗು ಸೇರಿದಂತೆ 88 ಪ್ರಯಾಣಿಕರು ಮುಂಬೈಯಿಂದ ಮಂಗಳೂರಿಗೆ ಬಂದಿಳಿದರು. ವಾಪಾಸ್ ತೆರಳಬೇಕಾದರೆ 99 ಮಂದಿ ಪ್ರಯಾಣಿಕರು ಅದೇ ವಿಮಾನದಲ್ಲಿ ಮುಂಬೈಗೆ ಪ್ರಯಾಣಿಸಿದರು.

  ಪ್ರತಿದಿನದ ಸಮಯ ನೋಟ್ ಮಾಡ್ಕೊಳ್ಳಿ
  ಮುಂಬೈ-ಮಂಗಳೂರು-ಮುಂಬೈ ನಡುವಿನ ನೂತನ ವಿಮಾನದ ಹಾರಾಟವು ಪ್ರತಿದಿನ ಈ ಸಮಯಕ್ಕೆ ಹಾರಾಟ ನಡೆಸಲಿದೆ.
  ಮುಂಬೈ – ಮಂಗಳೂರು ಬೆಳಗ್ಗೆ 8.50 ಗಂಟೆಗೆ ಹೊರಟು 10.20ಕ್ಕೆ ಮಂಗಳೂರು
  ಮಂಗಳೂರು – ಮುಂಬೈ ಬೆಳಗ್ಗೆ 11ಗಂಟೆ ಹೊರಟು 12.40ಕ್ಕೆ ಮುಂಬೈ

  ನೇರ ಹಾರಾಟದಿಂದ ತಪ್ಪುತ್ತೆ ಸುತ್ತಾಟ
  ಇಂಡಿಗೋ ವಿಮಾನ ಸಂಸ್ಥೆಯ ದಿನಂಪ್ರತಿ ಹಾರಾಟದಿಂದ ಇಂಡಿಗೋ ಪ್ರಿಯರು ಇನ್ಮುಂದೆ ಸುಲಭವಾಗಿ ವಾಣಿಜ್ಯ ನಗರಿಯಿಂದ ಕಡಲ ನಗರಿ ಹಾಗೂ ಕಡಲ ನಗರಿಯಿಂದ ವಾಣಿಜ್ಯ ನಗರಿಗೆ ತಲುಪಬಹುದಾಗಿದೆ. ಈ ದಿನಂಪ್ರತಿ ಹಾರಾಟದಿಂದಾಗಿ ಕೇವಲ ಒಂದೂವರೆ ಗಂಟೆಯಲ್ಲಿ ಮುಂಬೈ ತಲುಪಬಹುದಾಗಿದೆ.

  ನೇರವಾಗಿ ಮುಂಬೈಗೆ ಹೋಗುವ ವಿಮಾನವನ್ನು ತಪ್ಪಿಸಿಕೊಂಡರೆ ಬೆಂಗಳೂರು ಅಥವಾ ಹೈದರಾಬಾದ್ ವಯಾ ಮಾರ್ಗವಾಗಿ ಮುಂಬೈಗೆ ತೆರಳಬೇಕಾಗುತ್ತದೆ. ಆದರೆ ಹೀಗೆ ತೆರಳಬೇಕಾದರೆ ಒಂದೊಮ್ಮೆ ಬರೋಬ್ಬರಿ 7 ಗಂಟೆಗಳ ಪ್ರಯಾಣವನ್ನು ಎದುರಿಸಬೇಕಾಗುತ್ತದೆ. ಅಲ್ಲದೇ, ₹12ಸಾವಿರಕ್ಕೂ ಅಧಿಕ ಟಿಕೆಟ್ ದರವನ್ನು ವ್ಯಯಿಸಬೇಕಾಗುತ್ತದೆ.

  ಟಿಕೆಟ್ ದರ ಹೀಗಿರಲಿದೆ
  ಸದ್ಯ ಮುಂಬೈ-ಮಂಗಳೂರು-ಮುಂಬೈ ಪ್ರಯಾಣಿಕರು ಅತೀ ಕಡಿಮೆ ದರದಲ್ಲಿ ಪ್ರಯಾಣ ಬೆಳೆಸಬಹುದಾಗಿದೆ. ₹5281ರಿಂದ ಟಿಕೆಟ್ ದರಗಳು ಆರಂಭವಾಗಲಿದೆ.

  ಮೊದಲ ಹಾರಾಟಕ್ಕೆ ಉತ್ತಮ ರೆಸ್ಪಾನ್ಸ್
  ನೂತನ ವಿಮಾನವು ತನ್ನ ಮೊದಲ ಹಾರಾಟವನ್ನು ಭಾನುವಾರ (ಜೂನ್ 19)ದಂದು ನಡೆಸಿತು. ಮುಂಬೈನಿಂದ ಬೆಳಿಗ್ಗೆ 8.50 ಹೊರಟು ಬಂದ ವಿಮಾನವು 10.20ಕ್ಕೆ ತಲುಪಿತು. ಹಾಗೂ ಮಂಗಳೂರಿನಿಂದ ಇಂಡಿಗೋದ 6E 5237 ವಿಮಾನವು ಮುಂಬೈಗೆ 11 ಗಂಟೆಗೆ ಹೊರಟು 12.40ರ ವೇಳೆಗೆ ತಲುಪಿತು. ಈ ವೇಳೆ 55 ಮಂದಿ ಮಂಗಳೂರಿಗೆ ಬಂದಿಳಿದರೆ, ಒಂದು ಮಗು ಸೇರಿದಂತೆ 143 ಮಂದಿ ಮುಂಬೈಗೆ ಪ್ರಯಾಣಿಸಿದ್ದಾರೆ.

  ವಿಮಾನದ ವಿಶೇಷತೆ
  ನೂತನ ವಿಮಾನ ಅತ್ಯಂತ ಸುಸಜ್ಜಿತ ಸೌಕರ್ಯಗಳನ್ನು ಹೊಂದಿದ್ದು Airbus A320 ಮಾದರಿಯನ್ನು ಹೊಂದಿದೆ.

  ವಿಮಾನಗಳ ಸ್ವದೇಶಿ ದರ್ಬಾರ್
  ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಖಾಸಗೀಕರಣಗೊಂಡ ಬಳಿಕ ಅತೀ ಹೆಚ್ಚು ಸ್ವದೇಶಿ ಹಾರಾಟಗಳಿಗೆ ಅವಕಾಶವನ್ನು ಒದಗಿಸುತ್ತಿದೆ. ಅದಕ್ಕೆ ಪೂರಕವಾಗಿ ಇಂಡಿಗೋ ವಾಯು ಯಾನ ಸಂಸ್ಥೆಯು ಸ್ವದೇಶಿ ಹಾರಾಟಗಳಿಗೆ ತನ್ನ ಸಂಸ್ಥೆಯ ವಿಮಾನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿರುವುದು ಗಮನಾರ್ಹ.
  ಪ್ರಸ್ತುತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 108 ಡೊಮೆಸ್ಟಿಕ್ ವಿಮಾನಗಳು ಹಾರಾಟ ನಡೆಸುತ್ತಿದ್ದು, ಈ ಪೈಕಿ 85 ವಿಮಾನಗಳು ಇಂಡಿಗೋ ಸಂಸ್ಥೆಗೆ ಸೇರಿದ್ದವಾಗಿವೆ.

  ಇದನ್ನೂ ಓದಿ: Dakshina Kannada News: ದಕ್ಷಿಣ ಕನ್ನಡ ಜಿಲ್ಲೆಯ ಜನರೇ, ಈ ನಂಬರ್​ಗಳನ್ನು ಸೇವ್ ಮಾಡಿ ಇಟ್ಕೊಂಡಿರಿ

  ಇದರಲ್ಲಿ ಬೆಂಗಳೂರಿಗೆ 28, ದೆಹಲಿ ಮೂಲಕ ಪುಣೆಗೆ 4, ಚೆನ್ನೈಗೆ 7, ಮುಂಬೈಗೆ 21, ಹೈದರಾಬಾದ್​ಗೆ 14, ಕೊಲ್ಕತ್ತಾ ಮಾರ್ಗವಾಗಿ ಬೆಂಗಳೂರಿಗೆ 7 ಹಾಗೂ ಹುಬ್ಬಳ್ಳಿಗೆ 4 ವಿಮಾನಗಳು ಹಾರಾಟ ನಡೆಸುತ್ತಿವೆ. ಇದಲ್ಲದೆ ಏರ್ ಇಂಡಿಯಾದ 7 (ಮುಂಬೈ), ಸ್ಪೈಸ್​ಜೆಟ್ 6 (ಬೆಂಗಳೂರು); ಗೋಫಾಸ್ಟ್​ 7 (ಮುಂಬೈ) ಹಾಗೂ ಏರ್ ಇಂಡಿಯಾ ಎಕ್ಸ್​ಪ್ರೆಸ್ 3 (ಮುಂಬೈ) ವಿಮಾನಗಳು ಹಾರಾಟ ನಡೆಸುತ್ತಿವೆ.

  ಇದನ್ನೂ ಓದಿ: Udupi Helpline: ಉಡುಪಿ ಜಿಲ್ಲೆಯ ಜನರೇ ಅಲರ್ಟ್! ನಿಮ್ಮ ಜೀವ ಉಳಿಸುತ್ತೆ ಈ ನಂಬರ್

  ಹುಬ್ಬಳ್ಳಿ-ಮಂಗಳೂರು ಹಾರಾಟದಲ್ಲಿ ಬದಲಾವಣೆ
  ಈ ಮಧ್ಯೆ ಹುಬ್ಬಳ್ಳಿ-ಮಂಗಳೂರು ನಡುವೆ ಭಾನುವಾರ, ಸೋಮವಾರ, ಮಂಗಳವಾರ ಮತ್ತು ಶುಕ್ರವಾರದಂದು ಇದ್ದ ಇಂಡಿಗೋ ವಿಮಾನಗಳ ಹಾರಾಟದ ಸಮಯವೂ ಬದಲಾಗಿದೆ. ಈ ಮೊದಲು 6E7189 ಇಂಡಿಗೋ ವಿಮಾನವು ಮಂಗಳೂರಿಗೆ ಸಂಜೆ 6.05ಕ್ಕೆ ಆಗಮಿಸಿ 6.35ಕ್ಕೆ ಹೊರಡುತ್ತಿತ್ತು. ಬದಲಾದ ಸಮಯದಲ್ಲಿ ಈ ವಿಮಾನವು ಹುಬ್ಬಳ್ಳಿಯಿಂದ ಸಂಜೆ 7ಕ್ಕೆ ಹೊರಟು ಮಂಗಳೂರಿಗೆ ರಾತ್ರಿ 8 ಗಂಟೆಗೆ ಆಗಮಿಸಲಿದೆ. ಬಳಿಕ ರಾತ್ರಿ 8.20ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 9.35ಕ್ಕೆ ಹುಬ್ಬಳ್ಳಿ ತಲುಪಲಿದೆ.
  Published by:guruganesh bhat
  First published: