ಮಂಗಳೂರು: ಕರಾವಳಿ ಭಾಗದ ಹಲವು ವರ್ಷಗಳ ಬೇಡಿಕೆ ಇದೀಗ ನನಸಾಗಿದೆ. ಕರಾವಳಿಯಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ನೇರ ವಿಮಾನ ಯಾನ ಹಾರಾಟ ಅಂತೂ ಈಡೇರಿದೆ. ಇತ್ತೀಚೆಗಷ್ಟೇ ಮಂಗಳೂರಿನಿಂದ ಮುಂಬೈಗೆ ಪ್ರತಿದಿನ ವಿಮಾನ ಸೇವೆ ಆರಂಭಿಸಿದ್ದ ಇಂಡಿಗೋ ವಾಯುಯಾನ ಸಂಸ್ಥೆ (IndiGo) ಇದೀಗ ನವದೆಹಲಿಗೂ ತನ್ನ ಸೇವೆಯನ್ನು ಚಾಚಿದೆ. ಜುಲೈ 1 ರಿಂದ ಮಂಗಳೂರಿನಿಂದ ದೆಹಲಿಗೆ ವಿಮಾನ ಯಾನ (Mangaluru To Delhi Flight) ಆರಂಭಿಸಿದೆ. ಮೊದಲ ದಿನವೇ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ. ಹಾಗಿದ್ರೆ ಮಂಗಳೂರಿನಿಂದ (Mangaluru News) ದೆಹಲಿಗೆ ಹೊರಡುವ ವಿಮಾನದ ಸಮಯವೆಷ್ಟು? ಟಿಕೆಟ್ ದರ ಹೇಗಿರಲಿದೆ? ಇದೆಲ್ಲದರ ಕುರಿತಾದ ಮಾಹಿತಿ ಇಲ್ಲಿದೆ..
ಮೊದಲ ಯಾನ, ಗುಡ್ ರೆಸ್ಪಾನ್ಸ್
ಜುಲೈ 1ರಿಂ ರಾಷ್ಟ್ರ ರಾಜಧಾನಿ ದೆಹಲಿಗೆ ವಿಮಾನ ಯಾನವನ್ನು ಇಂಡಿಗೋ ಸಂಸ್ಥೆಯು ಆರಂಭಿಸಿದೆ. ಮೊದಲ ಯಾನಕ್ಕೆ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ. A320 ಮಾದರಿಯ ಇಂಡಿಗೋ ವಿಮಾನವು ಇಂದು ದೆಹಲಿಯಿಂದ ಮಂಗಳೂರಿಗೆ ಬಂದಿಳಿಯಿತು. ರಾಜಧಾನಿ – ಕರಾವಳಿ ನಡುವಿನ ಮೊದಲ ವಿಮಾನ ಯಾನಕ್ಕೆ 77 ಪ್ರಯಾಣಿಕರು ಸಾಕ್ಷಿಯಾದರು. ಇನ್ನು ಮಂಗಳೂರಿನಿಂದ ದೆಹಲಿ ಹೊರಟ 6E 2165 ವಿಮಾನದಲ್ಲಿ 140 ಮಂದಿ ಪ್ರಯಾಣಿಸಿದರು.
ಈ ದಿನಗಳಲ್ಲಿ ನೇರ ಯಾನ ದೆಹಲಿಗೆ
ನೇರ ವಿಮಾನ ಯಾನದ ಮೂಲಕ ಪಯಣಿಸಲು ಬಯಸುವವರು ಕಡ್ಡಾಯವಾಗಿ ಈ ದಿನಗಳಿಗೆ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ವಾರದ ಈ 4 ದಿನಗಳಲ್ಲಿ ಇಂಡಿಗೋ ವಿಮಾನವು ದೆಹಲಿಯಿಂದ ಮಂಗಳೂರು, ಹಾಗೆಯೇ ಮಂಗಳೂರಿನಿಂದ ದೆಹಲಿಗೆ ಹಾರಾಟ ನಡೆಸಲಿದೆ.
ಸಮಯ ನೋಟ್ ಮಾಡಿಕೊಳ್ಳಿ
ದೆಹಲಿಯಿಂದ ಮಂಗಳೂರಿಗೆ : ಬೆಳಿಗ್ಗೆ 7.40ಕ್ಕೆ ಹೊರಟು 10.15ಕ್ಕೆ ತಲುಪಲಿರುವುದು.ಮಂಗಳೂರಿನಿಂದ ದೆಹಲಿಗೆ : ಬೆಳಿಗ್ಗೆ 10.45ಕ್ಕೆ ಹೊರಟು ಮಧ್ಯಾಹ್ನ 1.20ಕ್ಕೆ ದೆಹಲಿ ತಲುಪುವುದು. ಇದೇ ದಿನಗಳಲ್ಲಿ ಇಂಡಿಗೋ Transit flight 6E 671/6E 6431 ದೆಹಲಿಯಿಂದ ಮಂಗಳೂರಿಗೆ ವಯಾ ಪುಣೆ ಆಗಿ ಆಗಮಿಸಲಿದೆ.
ಟ್ರಾನ್ಸಿಟ್ ವಿಮಾನ ಹಾರಾಟ ಹೀಗಿರಲಿದೆ
ನೇರ ವಿಮಾನ ಯಾನದ ದಿವಸಗಳಲ್ಲಿ ಟ್ರಾನ್ಸಿಟ್ ವಿಮಾನಗಳ ಹಾರಾಟವೂ ನಡೆಯಲಿದೆ. ಆ ವಿಮಾನಗಳು ವಯಾ ಪುಣೆ ಆಗಿ ಹಾರಾಟ ನಡೆಸಲಿದೆ. ಅದರ ಸಮಯವು ಹೀಗಿರಲಿದೆ..
ದೆಹಲಿ ಪುಣೆ ಮಂಗಳೂರು 9.05 PM 11.45 PM 1.05 AM
ಮಂಗಳೂರು ಪುಣೆ ದೆಹಲಿ 2.45 AM 4.20 AM 6.55 AM
ಟಿಕೆಟ್ ದರ ಹೀಗಿರಲಿದೆ
ಮಂಗಳೂರಿನಿಂದ ದೆಹಲಿಗೆ ನೇರವಾಗಿ ತೆರಳುವ ವಿಮಾನಗಳಿಗೆ ಮುಂಗಡವಾಗಿ ಟಿಕೆಟ್ ಮಾಡುವುದಿದ್ದಲ್ಲಿ ಮೂಲ ಬೆಲೆ ₹5,300 (ತೆರಿಗೆ ಸಹಿತ ₹6,147) ನಿಂದಲೇ ಬುಕ್ಕಿಂಗ್ ಮಾಡಬಹುದಾಗಿದೆ.
ನೇರ ಯಾನದಿಂದ ಟೈಮ್ ಸೇವ್
ಮಂಗಳೂರಿನಿಂದ ದೆಹಲಿಗೆ ಹಾಗೂ ದೆಹಲಿಯಿಂದ ಮಂಗಳೂರಿಗೆ ನೇರ ವಿಮಾನ ಯಾನ ಆರಂಭವಾದ್ದರಿಂದ ಸುತ್ತಿ ಬಳಸಿ ಪಯಣಿಸುವ ಸಂಕಷ್ಟ ತಪ್ಪಲಿದೆ. ಈ ಹಿಂದೆ ಪ್ರಯಾಣಿಕರು ರಾಷ್ಟ್ರ ರಾಜಧಾನಿ ತಲುಪಬೇಕಾದರೆ ಚೆನ್ನೈ, ಮುಂಬೈ, ಹೈದರಾಬಾದ್, ಪುಣೆ ವಯಾ ಗಳಾಗಿ ಹಾರಾಟ ನಡೆಸಬೇಕಾಗುತ್ತದೆ.
ಇದನ್ನೂ ಓದಿ: Vijayapura: ಬದುಕು ಬದಲಿಸಿದ ಕೊರೊನಾ! ಲಕ್ಷ ಲಕ್ಷ ಸಂಪಾದಿಸುತ್ತಿರುವ ವಿಜಯಪುರ ಯುವಕ
ಹೀಗಾಗಿ ಅದೆಷ್ಟೋ ಸಮಯವೂ ವ್ಯರ್ಥವಾಗುತ್ತಿತ್ತು. ಕೆಲವೊಂದು ವಿಮಾನ ಯಾನವು 5ರಿಂದ 10 ಗಂಟೆಗಳವರೆಗೂ ಸಮಯ ವ್ಯಯಿಸಬೇಕಾಗುತ್ತಿತ್ತು. ಆದರೆ ನೇರ ವಿಮಾನ ಯಾನದಿಂದ 2.45 ಗಂಟೆಗಳಲ್ಲಿ ದೆಹಲಿಯಿಂದ ಮಂಗಳೂರು, ಹಾಗೆಯೇ ಮಂಗಳೂರಿನಿಂದ ದೆಹಲಿಗೆ ತಲುಪಬಹುದಾಗಿದೆ.
ದೇಶ, ವಿದೇಶಗಳಿಗೂ ಇಂಡಿ‘ಗೋ‘
ಇಂಡಿಗೋ ವಿಮಾನ ಯಾನ ಸಂಸ್ಥೆಯು ದೇಶೀಯ ಮಾತ್ರವಲ್ಲದೇ ವಿದೇಶಗಳಿಗೂ ವಿಮಾನ ಯಾನ ಆರಂಭಿಸಿರುವ ಮೂಲಕ ಜಗತ್ತನ್ನು ಇನ್ನಷ್ಟು ಹತ್ತಿರವನ್ನಾಗಿಸುವ ಉದ್ದೇಶದೊಂದಿಗೆ ಮುನ್ನುಗ್ಗುತ್ತಿದೆ.
ಇದನ್ನೂ ಓದಿ: Belagavi: ಈ ಸರ್ಕಾರಿ ಶಾಲೇಲಿ ಕಲಿಯಲು ಪುಣ್ಯ ಮಾಡಿರಬೇಕು! ಬೆಳಗಾವಿ ಶಾಲೆಯ ವಿಡಿಯೋ ನೋಡಿ
ಈಗಾಗಲೇ ಚಂಡೀಘಡ, ಡೆಹರಾಡೂನ್, ರಾಂಚಿ, ಪಾಟ್ನಾ, ಭೋಪಾಲ್, ಸೌದಿ ಅರೇಬಿಯಾದ ದಮ್ಮಾಮ್, ಜೆದ್ದಾ ಹಾಗೂ ರಿಯಾದ್ ಮುಂತಾದೆಡೆ ವಿಮಾನ ಯಾನವನ್ನು ಆರಂಭಿಸಿದೆ. ಹೀಗಾಗಿ ಕರಾವಳಿಯ ಮಂದಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸುಲಭವಾಗಿ ತಮ್ಮಿಷ್ಟದ ಪ್ರದೇಶಗಳಿಗೆ ತಲುಪುವಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ