• Home
  • »
  • News
  • »
  • mangaluru
  • »
  • Mangaluru Viral Video: ಒಂದೇ ಬಲೆಗೆ ಕ್ವಿಂಟಾಲ್‌ಗಟ್ಟಲೆ ಮೀನು ಸಿಕ್ತು!

Mangaluru Viral Video: ಒಂದೇ ಬಲೆಗೆ ಕ್ವಿಂಟಾಲ್‌ಗಟ್ಟಲೆ ಮೀನು ಸಿಕ್ತು!

ಆಹಾ! ಈ ಮೀನಿನ ವಿಡಿಯೋ ನೋಡಿ

"ಆಹಾ! ಈ ಮೀನಿನ ವಿಡಿಯೋ ನೋಡಿ"

ಮೀನು ಸುಗ್ಗಿ ಬೆಸ್ತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅದ್ರಲ್ಲೂ ಒಂದೇ ಬಲೆಗೆ ಕ್ವಿಂಟಾಲ್‌ಗಟ್ಟಲೆ ಮೀನು ಸಿಗುತ್ತಿದ್ದು, ಕರಾವಳಿಯ ಮೀನುಪ್ರಿಯರು ಕಡಿಮೆ ದರಕ್ಕೆ ಖರೀದಿಸಿ ಸಂಭ್ರಮಿಸುತ್ತಿದ್ದಾರೆ.

  • Share this:

    ಮಂಗಳೂರು: "ಏಲೇ‌ ಐಚೋರ.. ಮೀನು ಬಂತು ಐಚೋರ... ತುಂಬಾ ಮೀನು ಬಂತು ಐಚೋರ.." ಹೀಗಂತ ಕ್ವಿಂಟಾಲ್ ಗಟ್ಟಲೆ ಮೀನುಗಳನ್ನ ದಡ ಸೇರಿಸ್ತಿರೋ ಮೀನುಗಾರರು. ಬಂಗುಡೆ, ಕೊಡ್ಡಾಯಿ, ಕಲ್ಲೂರು, ಮಾಂಜಿ, ಸಿಗಡಿ ಹೀಗೆ ರಾಶಿ ರಾಶಿ ಮೀನುಗಳು. ಇದನ್ನ ಕಾಣ್ತಿದ್ದಂತೆ ಮೀನುಗಾರರು ಖುಷಿ‌ಪಟ್ರೆ, ಗ್ರಾಹಕರು ಖರೀದಿಸಲು ಮುಗಿಬಿದ್ದಿದ್ದಾರೆ. ಮಂಗಳೂರಿನ (Mangaluru News) ಸುರತ್ಕಲ್‌ನಲ್ಲಿ ಮುಂಜಾನೆ ಬಲೆ ಬೀಸಿದ್ದ ಮಂಗಳೂರಿನ ಮೀನುಗಾರ (Mangaluru Fishermen) ಜೀವನ್ ಪಿರೇರಾ ಪಾಲಿಗೆ ಅದೃಷ್ಟ ಕ್ಷಣವಿದು.


    ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!


    ಹತ್ತಾರು ಬಗೆಯ ಸಾವಿರಾರು ಮೀನುಗಳು ಒಂದೇ ಬಲೆಗೆ ಬಿದ್ದಿದ್ದು ಮೀನುಗಾರನೇ ಹೌಹಾರಿದ್ದಾರೆ. ಖುಷಿಯಿಂದ ಕಡಲ ಮಕ್ಕಳೆಲ್ಲ ಸೇರಿ ಮೀನನ್ನ ದಡ ಸೇರಿಸಿ ಬಿಕರಿ ನಡೆಸಿದ್ದಾರೆ.


    ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


    ಇತ್ತೀಚಿನ ದಿನಗಳಲ್ಲಿ ಮೀನು ಸುಗ್ಗಿ ಬೆಸ್ತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅದ್ರಲ್ಲೂ ಒಂದೇ ಬಲೆಗೆ ಕ್ವಿಂಟಾಲ್‌ಗಟ್ಟಲೆ ಮೀನು ಸಿಗುತ್ತಿದ್ದು, ಕರಾವಳಿಯ ಮೀನುಪ್ರಿಯರು ಕಡಿಮೆ ದರಕ್ಕೆ ಖರೀದಿಸಿ ಸಂಭ್ರಮಿಸುತ್ತಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: