• ಹೋಂ
  • »
  • ನ್ಯೂಸ್
  • »
  • ದಕ್ಷಿಣ ಕನ್ನಡ
  • »
  • Mangaluru: ಬೀದಿಯಲ್ಲಿ ನಾಯಿ, ಬೆಕ್ಕು ಬಿಟ್ಟವರ ಹೆಂಡತಿ ಮಕ್ಕಳನ್ನ ನಾವು ಸಾಕ್ತೇವೆ! ಮಂಗಳೂರಿನಲ್ಲಿ ಎಚ್ಚರಿಕೆಯ ಬ್ಯಾನರ್

Mangaluru: ಬೀದಿಯಲ್ಲಿ ನಾಯಿ, ಬೆಕ್ಕು ಬಿಟ್ಟವರ ಹೆಂಡತಿ ಮಕ್ಕಳನ್ನ ನಾವು ಸಾಕ್ತೇವೆ! ಮಂಗಳೂರಿನಲ್ಲಿ ಎಚ್ಚರಿಕೆಯ ಬ್ಯಾನರ್

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

"ಇಲ್ಲಿ ಯಾರು ನಾಯಿಮರಿ ಮತ್ತು ಬೆಕ್ಕಿನ ಮರಿಗಳನ್ನು ತಂದು ಬಿಡುತ್ತಾರೋ ಅವರು ತಮ್ಮ ಹೆಂಡತಿ ಮಕ್ಕಳನ್ನು ತಂದು ಬಿಡಿ ನಾವು ಸಾಕುತ್ತೇವೆ" ಎಂದು ರಸ್ತೆ ಪಕ್ಕ ಹಾಕಿದ ಬ್ಯಾನರ್ ವೈರಲ್ ಆಗ್ತಿದೆ.

  • Share this:

    ಮಂಗಳೂರು: ಬೀದಿನಾಯಿಗಳ ಕಾಟ ತಡೆಯೋಕೆ ಏನ್ ಮಾಡಿದ್ರೂ ಕಡಿಮೆನೆ! ಬೀದಿನಾಯಿಗಳು ದೂರದಲ್ಲಿ ನಿಂತು ಬೊಗಳಿದ್ರೂ ಎದೆ ಝಲ್ ಅನ್ನುತ್ತೆ, ಹೆದರಿಕೆಯಾಗುತ್ತೆ. ಇನ್ನು ಚಿಕ್ಕಮಕ್ಕಳ ಕಥೆ ಹೇಗಾಗ್ಬೇಡ? ನಡೆದು ಶಾಲೆಗೆ ಹೋಗೋ ಚಿಕ್ಕಮಕ್ಕಳಿಗೆ ಸಮಸ್ಯೆ ಉಂಟುಮಾಡ್ತಿದ್ದ ಬೀದಿನಾಯಿಗಳನ್ನ (Stree Dog Problem) ತಡೆಯೋಕೆ ಮಂಗಳೂರಿನಲ್ಲಿ (Mangaluru News)  ಹೊಸ ಪ್ಲಾನ್ ಮಾಡಲಾಗಿದೆ.


    ಮಂಗಳೂರಿನ ಪಚ್ಚನಾಡಿಯ ಮಂಗಳಜ್ಯೋತಿ ಪ್ರದೇಶದಲ್ಲಿ ನಾಯಿಗಳ ಕಾಟ ವಿಪರೀತವಾಗಿತ್ತು. ಶಾಲೆಗೆ ಹೋಗೋ ಮಕ್ಕಳನ್ನು ನಾಯಿಗಳು ಅಟ್ಟಿಸಿಕೊಂಡು ಬರ್ತಿದ್ವು. ಹೀಗಾಗಿ ನಾಯಿಮರಿಗಳನ್ನು ರಸ್ತೆಯಲ್ಲಿ ಬಿಡುವವರಿಗೆ ಗ್ರಾಮಸ್ಥರು ನೇರ ಎಚ್ಚರಿಕೆ ನೀಡಿದ್ದಾರೆ. "ಇಲ್ಲಿ ಯಾರು ನಾಯಿಮರಿ ಮತ್ತು ಬೆಕ್ಕಿನ ಮರಿಗಳನ್ನು ತಂದು ಬಿಡುತ್ತಾರೋ ಅವರು ತಮ್ಮ ಹೆಂಡತಿ ಮಕ್ಕಳನ್ನು ತಂದು ಬಿಡಿ ನಾವು ಸಾಕುತ್ತೇವೆ" ಎಂದು ರಸ್ತೆ ಪಕ್ಕ ಬ್ಯಾನರ್ ಹಾಕಿದ್ದಾರೆ.


    ಇದನ್ನೂ ಓದಿ: Mangaluru: ಒಣ ಮೀನು ತಯಾರಿಗೆ ಖಡಕ್ ನಿಯಮ! ಮಸಾಲೆ ಅರೆಯುವ ಮುನ್ನ ಹುಷಾರ್!


    ಸಾರ್ವಜನಿಕರಿಂದ ಖಡಕ್ ಎಚ್ಚರಿಕೆ
    ಈಗಾಗಲೇ ಮಂಗಳ ಜ್ಯೋತಿ ಪ್ರದೇಶದಲ್ಲಿರುವ ಮಂಗಳಜ್ಯೋತಿ ಶಾಲೆಗೆ ಹೋಗುವ
    ನಮ್ಮನ್ನು ನಾಯಿಗಳು ಕಚ್ಚಿವೆ. ಚಿಕ್ಕ ಮಕ್ಕಳು ನಾಯಿಗಳನ್ನು ಕಂಡು ಭಯಗೊಳ್ಳುತ್ತಾರೆ. ದಯವಿಟ್ಟು ನಾಯಿಮರಿಗಳನ್ನು ಮಂಗಳಜ್ಯೋತಿ ಭಾಗದಲ್ಲಿ ಬಿಡಬೇಡಿ. ಬಿಟ್ಟರೆ ನಾವೂ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಸಾರ್ವಜನಿಕರಿಗೆ ಮಂಗಳಜ್ಯೋತಿ ಶಾಲೆಯ ಮಕ್ಕಳು ಸಹ ಮನವಿ ಮಾಡಿದ್ದಾರೆ.




    ಇದನ್ನೂ ಓದಿ: Puttur: ಐಸ್ ಕ್ಯಾಂಡಿ ಮಾರಿ 15 ಲಕ್ಷ ಆದಾಯ! ಸೂಜಿಮೆಣಸಿಂದಲೂ ಐಸ್​ಕ್ರೀಮ್ ತಯಾರಿ


    ಮಕ್ಕಳ ಮನವಿಗೆ ಸಮಸ್ಯೆ ಪರಿಹಾರವಾಗುತ್ತಾ?
    ಶಾಲೆಯ ದಾರಿಯಲ್ಲೇ ನಾಯಿಗಳು ಮಲಗಿಕೊಂಡಿರುತ್ತವೆ. ಶಾಲೆಗೆ ಹೋಗುವಾಗ, ಶಾಲೆಯಿಂದ ಬರುವಾಗ ನಾಯಿಗಳು ಓಡಿಸಿಕೊಂಡು ಬರುತ್ತವೆ. ನಮ್ಮನ್ನು ಖುಷಿಯಿಂದ ಶಾಲೆಗೆ ಹೋಗಲು ಅನುವು ಮಾಡಿಕೊಂಡು ಎಂದು ಮಕ್ಕಳು ನ್ಯೂಸ್ 18 ಕನ್ನಡದ ಮೂಲಕ ಮನವಿ ಮಾಡಿದ್ದಾರೆ.


    ವರದಿ: ಕಿಶನ್ ಶೆಟ್ಟಿ, ನ್ಯೂಸ್ 18 ಕನ್ನಡ ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: