Mangaluru Heavy Rain: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಣೆ

ರಸ್ತೆಗಳಲ್ಲಿ ತುಂಬಿ ಹರಿಯುತ್ತಿದ್ದ ನೀರಿನ ನಡುವೆಯೇ ಶಾಲಾ, ಕಾಲೇಜುಗಳ ಮಕ್ಕಳು ಭಾರೀ ಪ್ರಯಾಸದಿಂದ ನಡೆದಾಡುತ್ತಿರುವ ದೃಶ್ಯಗಳು ಕಂಡು ಬಂತು. ತಗ್ಗು ಪ್ರದೇಶದಲ್ಲಿರುವ ಮನೆಗಳು ಸಂಪೂರ್ಣವಾಗಿ ನೆರೆ ನೀರಿನಿಂದ ಆವೃತವಾಗಿದೆ.

ಮಂಗಳೂರು ಮಳೆ

ಮಂಗಳೂರು ಮಳೆ

  • Share this:
    ಮಂಗಳೂರು: ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada Rains) ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆ ಸಂಚಾರಕ್ಕೂ ಭಾರೀ ತೊಂದರೆ ಉಂಟಾಗಿದೆ. ಬುಧವಾರ ತಡರಾತ್ರಿಯಿಂದಲೇ ಶುರುವಾದ ಮಳೆ ಮಂಗಳೂರು ನಗರವನ್ನು (Mangaluru Rain Updates) ಸಂಪೂರ್ಣ ನಲುಗಿ ಹೋಗುವಂತೆ ಮಾಡಿದೆ. ಇನ್ನೊಂದೆಡೆ ರಸ್ತೆಗಳಲ್ಲಿ ತುಂಬಿ ಹರಿಯುತ್ತಿದ್ದ ನೀರಿನ ನಡುವೆಯೇ ಶಾಲಾ, ಕಾಲೇಜುಗಳ ಮಕ್ಕಳು ಭಾರೀ ಪ್ರಯಾಸದಿಂದ ನಡೆದಾಡುತ್ತಿರುವ ದೃಶ್ಯಗಳು ಕಂಡು ಬಂತು. ತಗ್ಗು ಪ್ರದೇಶದಲ್ಲಿರುವ ಮನೆಗಳು ಸಂಪೂರ್ಣವಾಗಿ ನೆರೆ ನೀರಿನಿಂದ ಆವೃತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 1ರ ಶುಕ್ರವಾರದಂದು ಅಂಗನವಾಡಿ ಸಹಿತ ಶಾಲೆ, ಪಿಯುಸಿ ಹಾಗೂ ಪದವಿ ತರಗತಿಗಳಿಗೆ ರಜೆ ನೀಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಆದೇಶಿಸಿದ್ದಾರೆ.

    ನೆರೆ ನಡುವೆ ಸಂಕಷ್ಟಪಟ್ಟ ಸ್ಟೂಡೆಂಟ್ಸ್
    ಬುಧವಾರ ತಡರಾತ್ರಿಯಿಂದ ಶುರುವಾದ ಮಳೆ ಗುರುವಾರ ಇಡೀ ದಿನ ಎಡೆಬಿಡೆದೇ ಸುರಿದಿದೆ. ಈ ಮಧ್ಯೆ ಅದೆಷ್ಟೋ ವಿದ್ಯಾರ್ಥಿಗಳು ಕಷ್ಟಪಟ್ಟು ಶಾಲಾ, ಕಾಲೇಜುಗಳಿಗೆ ತೆರಳಿದ್ದರು. ಆದರೆ, ಶಾಲೆಗೆ ತೆರಳಲು ಸಾಧ್ಯವಾಗದ ಮಕ್ಕಳು ಮನೆಯಲ್ಲಿಯೇ ಇರಬಹುದು ಅನ್ನೋದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಈ ಮಧ್ಯೆ ಪಿಯು ಹಾಗೂ ಡಿಗ್ರಿ ಕಾಲೇಜುಗಳಿಗೆ ಬಳಿಕ ರಜೆ ಸಾರಲಾಗಿತ್ತು.

    ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ
    ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಬೆಳಿಗ್ಗೆ 8.30ರ ವರೆಗೂ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 1ರ ಶುಕ್ರವಾರದಂದು ಅಂಗನವಾಡಿ ಸಹಿತ ಶಾಲೆ, ಪಿಯುಸಿ ಹಾಗೂ ಪದವಿ ತರಗತಿಗಳಿಗೆ ರಜೆ ನೀಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಆದೇಶಿಸಿದ್ದಾರೆ.

    ಇದನ್ನೂ ಓದಿ:  Belagavi: ಈ ಸರ್ಕಾರಿ ಶಾಲೇಲಿ ಕಲಿಯಲು ಪುಣ್ಯ ಮಾಡಿರಬೇಕು! ಬೆಳಗಾವಿ ಶಾಲೆಯ ವಿಡಿಯೋ ನೋಡಿ

    ಸಹಾಯವಾಣಿ ಸಂಖ್ಯೆ
    ಯಾವುದೇ ಸಂದರ್ಭದಲ್ಲೂ ಜಿಲ್ಲೆಯ ಜನರು ನೆರೆ ಭೀತಿ, ಅಪಾಯದ ಸ್ಥಿತಿಯಲ್ಲಿ ಸಿಲುಕಿಕೊಳ್ಳುವ ಆತಂಕ ಎದುರಾದಲ್ಲಿ ಈ ಕೆಳಗಿನ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

    ಇದನ್ನೂ ಓದಿ: Vijayapura: ಬದುಕು ಬದಲಿಸಿದ ಕೊರೊನಾ! ಲಕ್ಷ ಲಕ್ಷ ಸಂಪಾದಿಸುತ್ತಿರುವ ವಿಜಯಪುರ ಯುವಕ

    ತುರ್ತು ಸಹಾಯವಾಣಿ ಸಂಖ್ಯೆ - 1077
    ಮೆಸ್ಕಾಂ – 1912 (ವಿದ್ಯುತ್ ಸಂಬಂಧಿತ ದೂರು)
    ಪೊಲೀಸ್ – 100
    ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆ: 0824-2442590, 2220319, 9483908000
    Published by:guruganesh bhat
    First published: