Mangaluru Plastic Ban: ಪ್ಲಾಸ್ಟಿಕ್ ಬಳಸಿದರೆ ₹20 ಸಾವಿರ ದಂಡ; ಅಂಗಡಿಯೂ ಮುಚ್ಚಬೇಕಾದೀತು ಹುಷಾರ್!

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಪಾಲಿಕೆ ಮುಂದಾಗಿದೆ. ಇದೇ ಜುಲೈ 1ರಿಂದ ಪ್ಲಾಸ್ಟಿಕ್ ನಿಷೇಧ ಜಾರಿಯಾಗುವಂತೆ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಂಗಳೂರು: ರಾಜ್ಯದಲ್ಲಿ ಈ ಹಿಂದಿನಿಂದಲೂ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದೆ. ಆದರೆ ಅದರ ಸಮರ್ಪಕ ಜಾರಿ ಸಾಧ್ಯವಾಗಿಲ್ಲ. ಇದೀಗ ಮಂಗಳೂರು (Mangaluru News) ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಕಬಳಕೆಯ ಪ್ಲಾಸ್ಟಿಕ್(Single Use Plastic Ban) ನಿಷೇಧಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಅದರಂತೆ ಎಲ್ಲ ಅಂಗಡಿ ಮುಂಗಟ್ಟು, ಕೈಗಾರಿಕೆ, ಮಾಲ್ ಗಳಿಗೂ ಸೂಚನೆ ರವಾನಿಸಿದ್ದಾರೆ. ಜುಲೈ 1ರಿಂದಲೇ ಜಾರಿಗೆ ಬರುವಂತೆ ಪ್ಲಾಸ್ಟಿಕ್ ನಿಷೇಧಿಸಲಾಗುತ್ತಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದಲ್ಲಿ ₹20ಸಾವಿರ ದವರೆಗೂ ದಂಡ ಕಟ್ಟಿಸಿಕೊಳ್ಳುವ ಶಿಕ್ಷೆಯನ್ನು ಮಾಲಕರು ಎದುರಿಸಬೇಕಾದೀತು. ಹಾಗಿದ್ರೆ ಏಕಬಳಕೆಯ ಯಾವೆಲ್ಲ ಪ್ಲಾಸ್ಟಿಕ್ ಗಳು ನಿಷೇಧಿಸಲಾಗುತ್ತದೆ (Plastic Ban) ಅನ್ನೋದರ ಡಿಟೇಲ್ಸ್ ಇಲ್ಲಿದೆ.

  ಏಕಬಳಕೆಯ ಪ್ಲಾಸ್ಟಿಕ್ ಎಂದರೇನು?
  ಸಾಮಾನ್ಯವಾಗಿ ಗ್ರಾಹಕರು ಅಂಗಡಿ, ಮುಂಗಟ್ಟುಗಳಿಗೆ ತೆರಳುವ ವೇಳೆ ನೇರವಾಗಿ ಕೈ ಬೀಸಿಕೊಂಡು ಹೋಗುತ್ತಾರೆ. ಅಲ್ಲಿ ದಿನಸಿ ಇನ್ನಿತರ ವಸ್ತುಗಳನ್ನು ಖರೀದಿಸುತ್ತಾರೆ. ಗ್ರಾಹಕನಲ್ಲಿ ಯಾವುದೇ ಕೈಚೀಲ ಇಲ್ಲದೇ ಹೋದಾಗ ಅಂಗಡಿ ಮಾಲಿಕರು ಸಾಮಾನುಗಳನ್ನು ಪ್ಲಾಸ್ಟಿಕ್ ಕವರ್​ಗಳಲ್ಲಿ ಹಾಕಿಕೊಡುತ್ತಾನೆ.

  ಆ ರೀತಿ ತರುವ ಕವರ್ ಸಾಮಾನ್ಯವಾಗಿ ಒಂದು ಬಾರಿ ಬಳಸಿ, ಬಳಿಕ ಅದನ್ನು ಕಸದ ಡಬ್ಬಿಗೆ ಎಸೆಯುವವರೇ ಜಾಸ್ತಿ. ಹಾಗಾಗಿ, ಇಂತಹದ್ದನ್ನು ಏಕಬಳಕೆಯ ಪ್ಲಾಸ್ಟಿಕ್ ಎನ್ನಲಾಗುತ್ತದೆ. ಹಾಗಂತ ಏಕ ಬಳಕೆಯ ಪ್ಲಾಸ್ಟಿಕ್ ಅಷ್ಟಕ್ಕೇ ಸೀಮಿತ ಎಂದುಕೊಂಡರೆ ತಪ್ಪು. ಎಲ್ಲೆಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯಾಗುತ್ತೆ ಅಂತಾ ಇಲ್ಲಿ ನೋಡಿ..

  ಇದೆಲ್ಲಕ್ಕೂ ನಿಷೇಧ

  1. ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್
  2. ಪ್ಲಾಸ್ಟಿಕ್ ಬ್ಯಾನರ್ಗಳು
  3. ಪ್ಲಾಸ್ಟಿಕ್ ಬಂಟಿಂಗ್ಸ್
  4. ಪ್ಲಾಸ್ಟಿಕ್ ಫ್ಲೆಕ್ಸ್
  5. ಪ್ಲಾಸ್ಟಿಕ್ ಪ್ಲೇಟ್​ಗಳು
  6. ಪ್ಲಾಸ್ಟಿಕ್ ಧ್ವಜಗಳು
  7. ಪ್ಲಾಸ್ಟಿಕ್ ಕಪ್​ಗಳು
  8. ಪ್ಲಾಸ್ಟಿಕ್ ಸ್ಪೂನ್​ಗಳು
  9. ಅಂಟಿಕೊಳ್ಳುವ ಫಿಲ್ಮ್​ಗಳು
  10. ಡೈನಿಂಗ್ ಟೇಬಲ್ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳು, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳನ್ನು ನಿಷೇಧಿಸಲಾಗಿದೆ.

  ಇದೂ ಬಳಸುವಂತಿಲ್ಲ
  1. ಪ್ಲಾಸ್ಟಿಕ್ ಇಯರ್ ಬಡ್ಗಳು
  2. ಬಲೂನ್ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್ಗಳು
  3. ಪ್ಲಾಸ್ಟಿಕ್ ಧ್ವಜಗಳು
  4. ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್ಗಳು
  5. ಪ್ಲಾಸ್ಟಿಕ್ ಐಸ್ಕ್ರೀಮ್ ಸ್ಟಿಕ್ಗಳು
  6. ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟೈರೀನ್ (ಥರ್ಮಾಕೋಲ್)
  7. ಸ್ವೀಟ್ ಬಾಕ್ಸ್ಗಳ ಸುತ್ತ ಸುತ್ತುವ ಅಥವಾ ಪ್ಯಾಕಿಂಗ್ ಫಿಲ್ಮ್ಗಳು
  8. ಆಮಂತ್ರಣ ಪತ್ರಗಳು
  9. ಸಿಗರೇಟ್ ಪ್ಯಾಕೆಟ್ಗಳು
  10. 100 ಮೈಕ್ರಾನ್ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಬ್ಯಾನರ್ಗಳು

  ಯಾರಿಗೆಲ್ಲ ಎಫೆಕ್ಟ್?
  ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಪ್ರಕಾರ ಈ ಕೆಳಗಿನ ಪ್ರತಿಯೊಂದಕ್ಕೂ ನಿಯಮ ಅನ್ವಯಿಸುತ್ತದೆ.

  1. ಎಲ್ಲಾ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲೀಕರುಗಳು
  2. ಇ-ಕಾಮರ್ಸ್ ಕಂಪನಿಗಳು, ಬೀದಿ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು, ಮಾಲ್ಗಳು/ಮಾರುಕಟ್ಟೆ ಸ್ಥಳ
  3. ಶಾಪಿಂಗ್ ಕೇಂದ್ರಗಳು, ಸಿನಿಮಾ ಥಿಯೇಟರ್, ಪ್ರವಾಸೋದ್ಯಮ ಸ್ಥಳ, ಶಾಲಾ ಕಾಲೇಜುಗಳು, ಕಛೇರಿ ಸಂಕೀರ್ಣಗಳು, ಆಸ್ಪತ್ರೆ, ಇತರೆ ಸಂಸ್ಥೆಗಳು ಮತ್ತು ಸಾಮಾನ್ಯಸಾರ್ವಜನಿಕರಿಗೆ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವಂತೆ ಸೂಚಿಸಲಾಗಿದೆ.

  ಯಾವಾಗಿನಿಂದ ನಿಯಮ ಜಾರಿ
  ಇದೇ ಜುಲೈ 1ರಿಂದ ಜಾರಿ ಬರುವಂತೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಹೇರಲಾಗಿದೆ.

  ಇದನ್ನೂ ಓದಿ: Mangaluru News: ಕನ್ನಡಿಗರಿಗೇ ಆದ್ಯತೆ ಮೇರೆಗೆ ಉದ್ಯೋಗ ನೀಡುತ್ತಿದೆ ಮಂಗಳೂರಿನ ಎಂಸಿಸಿ ಬ್ಯಾಂಕ್! ಹೀಗೆ ಅರ್ಜಿ ಹಾಕಿ

  ಪ್ಲಾಸ್ಟಿಕ್ ದಾಸ್ತಾನು ಇರಿಸಬೇಡಿ
  ಜೂನ್ 30, 2022 ರೊಳಗೆ ಮೇಲೆ ತಿಳಿಸಲಾದ ಏಕಬಳಕೆಯ ಪ್ಲಾಸ್ಟಿಕ್ ಶೂನ್ಯ ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಘಟಕಗಳಿಂದ ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ಪಾಲಿಕೆಯು ಸೂಚಿಸಿದೆ.

  ಅಲ್ಲದೇ, ಎಲ್ಲಾಇ-ಕಾಮರ್ಸ್ ಕಂಪನಿಗಳ ವೆಬ್​ಸೈಟ್​ನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳ ಮಾರಾಟ ಮತ್ತು ಪ್ರದರ್ಶನ/ ಜಾಹೀರಾತುಗಳನ್ನು ಕೂಡಾ ಜುಲೈ 1, 2022 ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

  ಇದನ್ನೂ ಓದಿ: Dakshina Kannada Jobs: ದಕ್ಷಿಣ ಕನ್ನಡದಲ್ಲಿ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ; ತಿಂಗಳಿಗೆ ₹10 ಸಾವಿರ ಸಂಬಳ

  ಪಾಲಿಕೆ ವ್ಯಾಪ್ತಿಯಲ್ಲಿ ಭಾರೀ ದಂಡ
  ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯ SMW & Sanitisation ಉಪನಿಯಮಗಳಡಿ ₹200 ರಿಂದ ₹20ಸಾವಿರದವರೆಗೂ ದಂಡ ವಿಧಿಸಬಹುದಾಗಿದೆ. ಮಾತ್ರವಲ್ಲದೇ, ಉದ್ದಿಮೆ ಪರವಾನಗಿ ರದ್ದುಗೊಳಿಸುವುದು ಹಾಗೂ ಉದ್ದಿಮೆಯನ್ನೇ ಸ್ಥಗಿತಗೊಳಿಸುವುದಾಗಿ ಪಾಲಿಕೆ ಆಯುಕ್ತರು ಎಚ್ಚರಿಸಿದ್ಧಾರೆ.
  Published by:guruganesh bhat
  First published: