Mangaluru: ಇಲ್ಲೆಲ್ಲ ಮೊಬೈಲ್, ಬ್ಲೂಟೂತ್ ಬಳಸಬೇಡಿ! ನಿಷೇಧಾಜ್ಞೆಯಿದೆ ಎಚ್ಚರಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

SSನಿಷೇಧಾಜ್ಞೆ ಜಾರಿಯಲ್ಲಿರುವ SSLC ಪೂರಕ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಮುತ್ತ ಈ ಕೆಳಗಿನ ಚಟುವಟಿಕೆಗಳಿಗೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ನಿಷೇಧಾಜ್ಞೆ ವಿಧಿಸಲಾಗಿದೆ.

  • Share this:

    ಮಂಗಳೂರು: ಜೂನ್ 27ರ ಸೋಮವಾರದಿಂದ ಜುಲೈ 4ರವರೆಗೆ ಎಸ್ಎಸ್ಎಲ್​ಸಿ ಪೂರಕ ಪರೀಕ್ಷೆಯು (SSLC Supplementary Exam) ರಾಜ್ಯಾದ್ಯಂತ ನಡೆಯಲಿದೆ. ಅಂತೆಯೇ, ಮಂಗಳೂರು ನಗರ (Mangaluru News) ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲೂ ಪರೀಕ್ಷೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತಾಗಲು ದಕ್ಷಿಣ ಕನ್ನಡ (Dakshina Kannada ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಾಗಿ ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್ ಪೂರಕ ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಮುತ್ತ ಕಲಂ 144 ರ ಅನ್ವಯ ನಿಷೇಧಾಜ್ಞೆ ವಿಧಿಸಿ ಆದೇಶಿಸಿದ್ದಾರೆ.


    ಜೂನ್ 27 ರಿಂದ ಜುಲೈ 4ರ ವರೆಗೆ SSLC ಪೂರಕ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆ ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸುವ ಜೊತೆಗೆ ಸಾರ್ವಜನಿಕರ ಓಡಾಟದ ಮೇಲೂ ನಿಯಂತ್ರಣ ಹೇರಲಾಗುವುದು.


    ನಿಷೇಧಿತ ಪ್ರದೇಶ
    ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ SSLC ಪೂರಕ ಪರೀಕ್ಷೆ ನಡೆಯುವ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ನಿಷೇಧಾಜ್ಞೆ ಸಮಯದಲ್ಲಿ ಆ ಪ್ರದೇಶಗಳಲ್ಲಿ ಸಾರ್ವಜನಿಕರ ಓಡಾಟಕ್ಕೂ ಪೊಲೀಸ್ ಇಲಾಖೆಯು ನಿಯಂತ್ರಣ ಹೇರಲಿದೆ.


    ಯಾವೆಲ್ಲ ಕೇಂದ್ರಗಳಲ್ಲಿ ನಡೆಯಲಿದೆ ಪರೀಕ್ಷೆ?
    1. ಜೈನ್ ಹೈಸ್ಕೂಲ್, ಮೂಡಬಿದ್ರಿ
    2. ಸೈಂಟ್ ಆ್ಯನ್ಸ್ ಪ್ರೌಢ ಶಾಲೆ, ಬೋಳಾರ
    3. ವಿದ್ಯಾದಾಯಿನಿ ಪ್ರೌಢ ಶಾಲೆ, ಸುರತ್ಕಲ್
    4. ಸೈಂಟ್ ಸೆಬಾಸ್ಟಿಯನ್ ಪ್ರೌಢ ಶಾಲೆ, ಪೆರ್ಮನ್ನೂರು, ಉಳ್ಳಾಲ
    5. ಶ್ರೀರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ, ಮಂಗಳೂರು
    6. ಪದುವಾ ಹೈಸ್ಕೂಲ್, ನಂತೂರು, ಮಂಗಳೂರು
    7. ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆ, ಕುಲಶೇಖರ, ಮಂಗಳೂರು


    ಯಾವ ದಿನಾಂಕ? ಎಲ್ಲಿಯವರೆಗೆ?
    ನಿಷೇಧಾಜ್ಞೆಯು SSLC ಪೂರಕ ಪರೀಕ್ಷೆ ನಡೆಯುವ ದಿನಾಂಕಗಳಾದ 27-06-2022 ರಿಂದ 04-07-2022ರ ವರೆಗೆ ಜಾರಿಯಲ್ಲಿರುತ್ತದೆ.


    ಏನೆಲ್ಲ ನಿಷೇಧ?
    ನಿಷೇಧಾಜ್ಞೆ ಜಾರಿಯಲ್ಲಿರುವ SSLC ಪೂರಕ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಮುತ್ತ ಈ ಕೆಳಗಿನ ಚಟುವಟಿಕೆಗಳಿಗೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ನಿಷೇಧಾಜ್ಞೆ ವಿಧಿಸಲಾಗಿರುತ್ತದೆ.
    1. ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುವಂತಿಲ್ಲ.
    2. ನಕಲು ಮಾಡಲು ಸಹಾಯ ಮಾಡುವುದಾಗಲೀ, ಚೀಟಿ ಅಥವಾ ಇನ್ನಿತರ ವಸ್ತು ರವಾನಿಸುವುದಾಗಲೀ, ಹಂಚುವುದಾಗಲೀ ಮಾಡುವಂತಿಲ್ಲ.
    3. ಆ್ಯಸಿಡ್, ಸ್ಫೋಟಕ, ಮಾರಕ ಆಯುಧಗಳನ್ನು ಕೊಂಡೊಯ್ಯುವಂತಿಲ್ಲ.
    4. ನಿಷೇಧಿತ ವಲಯದಲ್ಲಿ ಮೊಬೈಲ್, ದೂರವಾಣಿ, ಬ್ಲೂಟೂತ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ಸಂಪೂರ್ಣ ನಿಷೇಧ ಇರಲಿದೆ.


    ಇದನ್ನೂ ಓದಿ: Madhavananda Prabhu: ಬ್ರಿಟೀಷರ ಎದೆ ನಡುಗಿಸಿದ್ದ ವಿಜಯಪುರದ ಸಂತ! 27 ಬಾರಿ ಜೈಲುವಾಸ ಅನುಭವಿದ್ದ ಮಾಧವಾನಂದ ಪ್ರಭು


    ಜೆರಾಕ್ಸ್ ಅಂಗಡಿಯೂ ಬಂದ್
    ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮುನ್ನ 200 ಮೀಟರ್ ನಿಷೇಧಾಜ್ಞೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷೆ ಅವಧಿ ಮುಗಿಯುವವರೆಗೂ ಕಡ್ಡಾಯವಾಗಿ ಬಂದ್ ಮಾಡುವಂತೆ ಡಿಸಿಪಿ ಹರಿರಾಂ ಶಂಕರ್ ಸೂಚಿಸಿದ್ಧಾರೆ.


    ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!


    ಸರಕಾರಿ ಕಾರ್ಯಕ್ರಮಗಳಿಗೆ ವಿನಾಯಿತಿ
    ಸರಕಾರ ಹಾಗೂ ಸರಕಾರದ ಆದೇಶದಂತೆ ನಡೆಯುವ ಕಾರ್ಯಕ್ರಮಗಳಿಗೆ ನಿಷೇಧಾಜ್ಞೆ ವಿಧಿಸಲಾಗಿರುವ ಪ್ರದೇಶಗಳಲ್ಲೂ ವಿನಾಯಿತಿ ನೀಡಲಾಗಿರುತ್ತದೆ.
    ಅಲ್ಲದೇ, ನಿಷೇಧಾಜ್ಞೆಯು ಪರೀಕ್ಷಾ ಕೇಂದ್ರದ ಸುತ್ತಮುತ್ತಲಷ್ಟೇ ಸೀಮಿತವಾಗಿದ್ದು ಸಾರ್ವಜನಿಕ ಜೀವನದ ಮೇಲೆ ಯಾವುದೇ ರೀತಿಯ ತೊಂದರೆ ಉಂಟು ಮಾಡದು.

    Published by:guruganesh bhat
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು