Mangaluru News: ಭಾನುವಾರ ಮಂಗಳೂರಿನ ಈ ಪ್ರದೇಶಗಳಲ್ಲಿ ಪವರ್ ಕಟ್

MESCOM Power Cut: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುರ್ತಾಗಿ ಮೆಸ್ಕಾಂ ವತಿಯಿಂದ ಕಾಮಗಾರಿ ನಡೆಯಬೇಕಿರುವ ಹಿನ್ನೆಲೆ ನಾಳೆ ಪಾಲಿಕೆ ವ್ಯಾಪ್ತಿಯ ಬಹುತೇಕ ಕಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಂಗಳೂರು: ಕಾವೂರು-ಬೈಕಂಪಾಡಿ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ನಡೆಯಬೇಕಿರುವುದರಿಂದ ನಾಳೆ (ಜೂನ್ 19) ಮಂಗಳೂರು ಮಹಾನಗರ ಪಾಲಿಕೆ (MESCOM) ವ್ಯಾಪ್ತಿಯ ಬಹುತೇಕ ಕಡೆ ವಿದ್ಯುತ್ ಸೇವೆಯಲ್ಲಿ ವ್ಯತ್ಯಯ (Mangaluru Power Cut) ಉಂಟಾಗಲಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ನಾಳೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿದ್ಯುತ್ ಸೇವೆ ಹಲವು ಪ್ರದೇಶಗಳಿಗೆ ಅಲಭ್ಯವಾಗಲಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುರ್ತಾಗಿ ಮೆಸ್ಕಾಂ ವತಿಯಿಂದ ಕಾಮಗಾರಿ ನಡೆಯಬೇಕಿರುವ ಹಿನ್ನೆಲೆ ನಾಳೆ, ಜೂನ್ 19ರಂದು ಮಂಗಳೂರು ಪಾಲಿಕೆ ವ್ಯಾಪ್ತಿಯ ಬಹುತೇಕ ಕಡೆ ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ.

    ವಿದ್ಯುತ್ ಕಡಿತ ಸಮಯ
    ಜೂನ್ 19 ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೂ ವಿದ್ಯುತ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿರುವುದಾಗಿ ಮೆಸ್ಕಾಂ ತಿಳಿಸಿದೆ.

    ಯಾವೆಲ್ಲ ಏರಿಯಾ?
    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೈಕಂಪಾಡಿ, ಬೈಕಂಪಾಡಿ ಕೈಗಾರಿಕಾ ವಲಯ, ಅಂಗರಗುಂಡಿ, ಕುಡಂಬೂರು, ಎಪಿಎಂಸಿ ಮಾರ್ಕೆಟ್, ನಿತ್ಯ ನಗರ, ಸಣ್ಣ ನಗರ, ಪ್ರೀತಿ ನಗರ, ಪ್ರಗತಿ ನಗರ, ಎಂಎಸ್ಇಝೆಡ್ ಕಾಲೊನಿ, 62ನೇ ತೋಕೂರು, ವಿಷ್ಣುಮೂರ್ತಿ ದೇವಸ್ಥಾನ, ರಾಮನಗರ, ಶಿವಗಿರಿ ನಗರ, ರಾಘವೇಂದ್ರ ಮಠ, ಮಿತ್ತೊಟ್ಟು ಕಾಲೊನಿ, ಸಸಿಹಿತ್ಲು, ಮುಕ್ಕ, ದ್ವಾರಕ ನಗರ, ತಡಂಬೈಲ್, ಚೇಳ್ಯಾರ್, ಮಧ್ಯ, ಮುಚ್ಚೂರು, ಕುಡ್ಸೆಂಪ್, ಪೆಡ್ಡಿಯಂಗಡಿ, ಕುತ್ತೆತ್ತೂರು, ಸೂರಿಂಜೆ, ರಾಜೀವ್ ನಗರ, ಸುರತ್ಕಲ್, ದೇಲಂತಬೆಟ್ಟು, ಕಾಟಿಪಳ್ಳ 1ರಿಂದ 9ನೇ ಬ್ಲಾಕ್, ಕಾಟಿಪಳ್ಳ, ಕೃಷ್ಣಾಪುರ, ಪಡ್ರೆ, ಕೋಟೆ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಇದನ್ನೂ ಓದಿ: Mangaluru News: ಕಡಬ ತಾಲೂಕಿನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ; ನಿಮ್ಮ ಸಮಸ್ಯೆಯನ್ನು ಇಲ್ಲೇ ಹೇಳಿಬಿಡಿ

    ಈ ಪ್ರದೇಶಗಳಲ್ಲೂ ಕರೆಂಟ್ ಇರಲ್ಲ
    ಅಷ್ಟೇ ಅಲ್ಲದೇ ಆದರ್ಶ ನಗರ, ಶಿಬರೂರು, ಚೊಕ್ಕಬೆಟ್ಟು, ಕಾನ, ಕಟ್ಲ, ರೆಹಜಾ, ಕಿಸ್ಕೋ, ಎಂಸಿಎಫ್, ಅಂಬುಜಾ ಸಿಮೆಂಟ್, ಎನ್.ಐ.ಟಿ.ಕೆ., ರುಚಿಸೋಯ, ಕೋಸ್ಟಲ್ ಚಿಪ್ ಬೋರ್ಡ್, ಅದಾನಿ ವಿಲ್ ಮಾರ್, ಬ್ರೈಟ್ ಪ್ಯಾಕೇಜ್, ಎನ್.ಎಂ.ಪಿ.ಟಿ., ಯುಪಿಸಿಎಲ್, ಚೆಟ್ಟಿನಾಡ್, ಸ್ಟೀಲ್ ಬ್ಯಾರೆಲ್, ಬಿಎಎಸ್ಎಫ್, ಎಚ್.ಪಿ.ಸಿ.ಎಲ್., ಜೆ.ಎಸ್.ಡಬ್ಲ್ಯೂ ಕೋಲ್ ಟರ್ಮಿನಲ್, ಜೆ.ಎಸ್.ಡಬ್ಲ್ಯೂ ಕಂಟೈನರ್ ಟರ್ಮಿನಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಉಂಟಾಗಲಿರುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: Dakshina Kannada News: ದಕ್ಷಿಣ ಕನ್ನಡ ಜಿಲ್ಲೆಯ ಜನರೇ, ಈ ನಂಬರ್​ಗಳನ್ನು ಸೇವ್ ಮಾಡಿ ಇಟ್ಕೊಂಡಿರಿ

    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುರ್ತಾಗಿ ಮೆಸ್ಕಾಂ ವತಿಯಿಂದ ಕಾಮಗಾರಿ ನಡೆಯಬೇಕಿರುವ ಹಿನ್ನೆಲೆ ನಾಳೆ ಪಾಲಿಕೆ ವ್ಯಾಪ್ತಿಯ ಬಹುತೇಕ ಕಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    Published by:guruganesh bhat
    First published: