Mangaluru Power Cut: ಶುಕ್ರವಾರ ಮಂಗಳೂರು ನಗರದ ಈ ಪ್ರದೇಶಗಳಲ್ಲಿ ಪವರ್ ಕಟ್

ಬೆಳಗ್ಗೆಯಿಂದ ಸಾಯಂಕಾಲದವರೆಗೂ ವಿದ್ಯುತ್ ಕಟ್ ಆಗಲಿದ್ದು, ಸಾರ್ವಜನಿಕರ ಸೇವೆಗೆ ಅಲಭ್ಯವಾಗಲಿದೆ. ಹಾಗಿದ್ರೆ ಯಾವೆಲ್ಲ ಪ್ರದೇಶಗಳಲ್ಲಿ ಶುಕ್ರವಾರ ಕರೆಂಟ್ ಕೈ ಕೊಡಲಿದೆ ಅನ್ನೋ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಂಗಳೂರು: ಜೂನ್ 24ರ ಶುಕ್ರವಾರದಂದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವೆಡೆ ವಿದ್ಯುತ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆಯಿಂದ ಸಾಯಂಕಾಲದವರೆಗೂ ವಿದ್ಯುತ್ ಕಟ್ ಆಗಲಿದ್ದು, ಸಾರ್ವಜನಿಕರ ಸೇವೆಗೆ ಅಲಭ್ಯವಾಗಲಿದೆ. ಹಾಗಿದ್ರೆ ಯಾವೆಲ್ಲ ಪ್ರದೇಶಗಳಲ್ಲಿ ಶುಕ್ರವಾರ ಕರೆಂಟ್ ಕೈ ಕೊಡಲಿದೆ ಅನ್ನೋ (Mangaluru Power Cut) ಕುರಿತಾದ ಮಾಹಿತಿ ಇಲ್ಲಿದೆ. ಶುಕ್ರವಾರ ಮಂಗಳೂರು ನಗರದ ನೆಹರೂ ಮೈದಾನ ಉಪಕೇಂದ್ರ ಹಾಗೂ ವಿವೇಕ್ ಮೋಟಾರ್ ಫೀಡರ್ ಗಳಲ್ಲಿನ ಜಂಪರ್ ಬದಲಾವಣೆ ಮತ್ತು ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಇದರ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ (Power Cut Area List) ಉಂಟಾಗಲಿದೆ.

  ಅದಲ್ಲದೇ, ಕದ್ರಿ ಉಪಕೇಂದ್ರದಿಂದ ಹೊರಡುವ 11 ಕೆವಿ ಶಿವಭಾಗ್ ಫೀಡರ್ ನಲ್ಲೂ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಹಾಗಾಗಿ ಕದ್ರಿ ವ್ಯಾಪ್ತಿಯಲ್ಲೂ ಕರೆಂಟ್ ಇರದು.

  ಎಲ್ಲೆಲ್ಲಿ ಪವರ್ ಕಟ್?
  ನೆಹರೂ ಮೈದಾನ ವ್ಯಾಪ್ತಿ
  ಲೇಡಿಗೋಷನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗಾ, ಜೆ.ಎಚ್.ಎಸ್. ರಸ್ತೆ, ಪಿ.ಎಂ. ರಾವ್ ರಸ್ತೆ, ಗೌರಿಮಠ ರೋಡ್, ರಾಘವೇಂದ್ರ ಮಠ ರಸ್ತೆ, ಮೈದಾನ್ 3ನೇ ಕ್ರಾಸ್, ಮೈದಾನ್ 4ನೇ ಕ್ರಾಸ್, ಬೀಬಿ ಅಲಾಬಿ ರಸ್ತೆ, ರಾವ್ ಅಂಡ್ ರಾವ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

  Mangaluru To Mumbai: ಇನ್ಮುಂದೆ ಪ್ರತಿದಿನವೂ ಮಂಗಳೂರಿನಿಂದ ಮುಂಬೈಗೆ ಹಾರಿರಿ! ಹೊಸ ವಿಮಾನ ಆರಂಭ

  ಕದ್ರಿ ವ್ಯಾಪ್ತಿ
  ಶಿವಭಾಗ್ 1ನೇ ಕ್ರಾಸ್, 2ನೇ ಕ್ರಾಸ್, 3ನೇ ಕ್ರಾಸ್, 4ನೇ ಕ್ರಾಸ್, 5ನೇ ಕ್ರಾಸ್ ಮತ್ತು 6ನೇ ಕ್ರಾಸ್ ರಸ್ತೆ ಹಾಗೂ ಆಭರಣ ಜ್ಯುವೆಲ್ಲರಿಯ ಹಿಂದುಗಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

  ವಿದ್ಯುತ್ ಕಡಿತ ಸಮಯ
  ನೆಹರೂ ಮೈದಾನ ವ್ಯಾಪ್ತಿ: ಶುಕ್ರವಾರ ಬೆಳಗ್ಗೆ 10 ರಿಂದ 5 ಗಂಟೆ ವರೆಗೆ
  ಕದ್ರಿ ವ್ಯಾಪ್ತಿ: ಶುಕ್ರವಾರ ಬೆಳಗ್ಗೆ 10 ರಿಂದ 4 ಗಂಟೆಯವರೆಗೆ

  ಇದನ್ನೂ ಓದಿ: Gold Bond: ಪೋಸ್ಟ್ ಆಫೀಸ್​ಗೆ ಭೇಟಿ ನೀಡಿ ಬದುಕು ಬಂಗಾರ! ಮಂಗಳೂರಿನ ಜನತೆಗೆ ಸುವರ್ಣಾವಕಾಶ!

  ಸಾರ್ವಜನಿಕರ ಗಮನಕ್ಕೆ
  ಸಾರ್ವಜನಿಕರು ಮೆಸ್ಕಾಂ ಸಂಬಂಧಿತ ಯಾವುದೇ ದೂರು, ಸಲಹೆ ಹಾಗೂ ಮಾಹಿತಿಗಾಗಿ 24x7 ಸಹಾಯವಾಣಿ ಸಂಖ್ಯೆ 1912 ಅನ್ನು ಸಂಪರ್ಕಿಸಬಹುದಾಗಿದೆ.
  Published by:guruganesh bhat
  First published: