Gold Bond: ಪೋಸ್ಟ್ ಆಫೀಸ್​ಗೆ ಭೇಟಿ ನೀಡಿ ಬದುಕು ಬಂಗಾರ! ಮಂಗಳೂರಿನ ಜನತೆಗೆ ಸುವರ್ಣಾವಕಾಶ!

ಭಾರತೀಯ ಅಂಚೆ ಇಲಾಖೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಪ್ರಚುರಪಡಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಸುವರ್ಣಾವಕಾಶವೊಂದು ಒದಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಮಂಗಳೂರು: ಬಂಗಾರದ ಮೇಲೆ ಹೂಡಿಕೆ ಮಾಡುವ ಆಸಕ್ತಿ ನಿಮ್ಮಲ್ಲಿದೆಯೇ? ನಿಮ್ಮ ಮನೆಯ ಹೆಣ್ಣು ಮಗುವಿಗಾಗಿ ಬಂಗಾರದ ಕನಸು ಕಾಣುತ್ತಿರುವಿರೇ? ಹಾಗಿದ್ರೆ ಇನ್ನೇಕೆ ತಡ ತಕ್ಷಣವೇ ಅಂಚೆ ಕಚೇರಿಗೆ ತೆರಳಿ ಈ ಸುವರ್ಣಾವಕಾಶವನ್ನು ಸದುಪಯೋಗಡಿಸಿಕೊಳ್ಳಿ. ಅಷ್ಟಕ್ಕೂ ಈ ಆಫರ್ ನಿಮ್ಮದಾಗಿಸಿಕೊಳ್ಳಲು ನೀವು ಮಾಡಬೇಕಿರುವುದಿಷ್ಟೇ..ಭಾರತೀಯ ಅಂಚೆ ಇಲಾಖೆ (Indian Post Sovereign Gold Bond Scheme) ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಪ್ರಚುರಪಡಿಸುತ್ತಾ ಬರಲಾಗಿದೆ. ಇದೀಗ 7ನೇ ಹಂತದ ‘ಸಾರ್ವಭೌಮ ಚಿನ್ನದ ಬಾಂಡ್‘ (Sovereign Gold Bond Scheme) ಯೋಜನೆ ಆರಂಭಿಸಲಾಗಿದ್ದು, ಕಡಿಮೆ ಮೊತ್ತ ಹೂಡಿಕೆ ಮಾಡಿ ಚಿನ್ನದ ಮೊತ್ತ ಪಡೆಯುವ ಅವಕಾಶ ಕಲ್ಪಿಸುತ್ತಿದೆ.

  ಕೂಡಲೇ ತ್ವರೆ ಮಾಡಿ
  ಬಂಗಾರದ ಕನಸು ನನಸಾಗಿಸಲು ನೀವು ಮಾಡಬೇಕಿರುವುದು ಸಿಂಪಲ್ ಕೆಲಸ. ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸ್ಥಳೀಯ ಅಂಚೆ ಕಚೇರಿಗೆ ತೆರಳಿಗೆ ‘ಸಾರ್ವಭೌಮ ಚಿನ್ನದ ಬಾಂಡ್ ಯೋಜನೆ 2022-23‘ನೇ ಸಾಲಿನ 7ನೇ ಹಂತದ ಸ್ಕೀಮ್ ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಮತ್ತು ಕನಿಷ್ಟ ಒಂದು ಗ್ರಾಂ ಚಿನ್ನದ ಮೌಲ್ಯ ₹5091/- ಪಾವತಿಸಿ ನಿಮ್ಮ ಖಾತೆಯನ್ನು ತೆರೆಯಬಹುದು.

  ಬಂಗಾರದ ಬಾಂಡ್ ಯಾರಿಗೆಷ್ಟು?
  1. ಓರ್ವ ವ್ಯಕ್ತಿ ಅಥವಾ ಅವಿಭಕ್ತ ಕುಟುಂಬವು ಕನಿಷ್ಟ 1 ಗ್ರಾಂ ನಿಂದ 4 ಕೆಜಿ ವರೆಗಿನ ಪ್ರಸ್ತುತ ಚಾಲ್ತಿಯಲ್ಲಿರುವ ಬಂಗಾರದ ಮೌಲ್ಯ ಪಾವತಿಸಿ ಬಾಂಡ್ ಪಡೆದುಕೊಳ್ಳಲು ಅವಕಾಶವಿದೆ.

  2. ಟ್ರಸ್ಟ್ ಹೆಸರಿನಲ್ಲಿ ಬಾಂಡ್ ಖರೀದಿಸುವುದಾದರೆ 20ಕೆಜಿ ವರೆಗಿನ ಬಂಗಾರದ ಮೌಲ್ಯ ಠೇವಣಿ ಇಡುವ ಮೂಲಕ ಬಾಂಡ್ ಪಡೆದುಕೊಳ್ಳಬಹುದಾಗಿದೆ.

  ವಯೋಮಿತಿ
  ಸ್ಥಳೀಯ ಅಂಚೆ ಕಚೇರಿಗೆ ತೆರಳಿಗೆ ನೀವು ಅಥವಾ ನಿಮ್ಮವರ ಹೆಸರಿನಲ್ಲಿ ಚಿನ್ನದ ಮೊತ್ತವನ್ನು ಒಂದೇ ಹಂತದಲ್ಲಿ ಪಾವತಿಸಬೇಕು (One Time Paymnet). ಹೀಗೆ ನೋಂದಣಿ ಮಾಡಬೇಕಿದ್ದರೆ ಯಾವುದೇ ವಯೋಮಿತಿ ಇರುವುದಿಲ್ಲ. ನಿಮ್ಮ ಮುದ್ದಿನ ಎಳೆಯ ಹೆಣ್ಣಾಗಲೀ, ಗಂಡು ಮಗುವೇ ಆಗಲಿ ಅವರ ಹೆಸರಲ್ಲೂ ಸ್ಕೀಂ ಆರಂಭಿಸಬಹುದು. ಹೀಗೆ ಯಾವುದೇ ವಯೋಮಿತಿ ಇಲ್ಲ. ಪುರುಷರೂ ಕೂಡಾ ಈ ಬಾಂಡ್ ನಲ್ಲಿ ಠೇವಣಿ ಇರಿಸಬಹುದಾಗಿದೆ.

  ಸಾರ್ವಭೌಮ ಚಿನ್ನದ ಬಾಂಡ್ ಲಾಭವೇನು?
  1. ಭಾರತೀಯ ಅಂಚೆ ಇಲಾಖೆ ಅಡಿ ಈ ಕಾರ್ಯಕ್ರಮವು ನಡೆಯುತ್ತಿರುವುದರಿಂದ ಯಾವುದೇ ಆತಂಕವಿಲ್ಲದೇ ಸುರಕ್ಷಿತವಾಗಿ ಹೂಡಿಕೆ ಮಾಡಬಹುದಾಗಿದೆ.
  2. ಕೇವಲ ಬಂಗಾರದ ಮೌಲ್ಯವಷ್ಟೇ ಠೇವಣಿ ಇಡುವುದರಿಂದ ಲಾಕರ್ ನಲ್ಲಿದೆ ಅನ್ನೋ ವೃಥಾ ಚಿಂತೆಯಿರದು. ಬಂಗಾರದ ವರ್ಗಾಯಿಸುವಿಕೆಯ ರಿಸ್ಕ್ ಕೂಡಾ ಇರದು.
  3. ತಮ್ಮ ಮನೆಯ ಹೆಣ್ಣು ಮಕ್ಕಳ ಹೆಸರಿನಲ್ಲಿ ಖರೀದಿಸುವ ಬಾಂಡ್ ಭವಿಷ್ಯದಲ್ಲಿ ಹೆಣ್ಣು ಮಗುವಿನ ಕನಸು ನನಸಾಗಿಸಲು ಸಹಕಾರಿಯಾಗುತ್ತದೆ.
  4. ಠೇವಣಿ ಇರಿಸಿದ ಹಣವು ತೆರಿಗೆ ವಿನಾಯಿತಿಯೂ ಪಡೆಯಲಿದೆ. ಮುಂದೆ ಸಾಲ ಸೌಲಭ್ಯಕ್ಕಾಗಿಯೂ ಹಣದ ಉಪಯೋಗ ಬರಬಹುದು.

  ಆರ್ಥಿಕ ಲಾಭವಿದೆ ನೋಡಿ!
  ಗರಿಷ್ಟ 8 ವರ್ಷಗಳ ಕಾಲ ನಾವು ಪಾವತಿಸಿರುವ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ಅವಧಿಗೂ ಮುನ್ನ ಬಾಂಡ್ ಹಿಂದೆಗೆದುಕೊಳ್ಳಲು ಬಯಸಿದರೆ ಐದು ವರ್ಷಗಳ ನಂತರ ವಾಪಾಸ್ ಪಡೆಯಬಹುದು. ಹಾಗಿದ್ರೆ, ಇದರಿಂದ ಸಿಗುವ ಆರ್ಥಿಕ ಲಾಭವನ್ನು ಗಮನಿಸಿ.
  1. ಪ್ರತಿ ವರ್ಷ ಶೇಕಡಾ 2 .5 ಬಡ್ಡಿ ದರ ಲಭ್ಯ
  2. ಅವಧಿ ಪೂರ್ಣ ಅಥವಾ ಅವಧಿ ಪೂರ್ವ (5 ವರ್ಷಗಳ ಬಳಿಕ) ಬಾಂಡ್ ಹಿಂದೆ ತೆಗೆದುಕೊಳ್ಳುವ ಸಮಯ ಅಂದಿನ ಮಾರುಕಟ್ಟೆಯಲ್ಲಿರುವ ಬಂಗಾರದ ಮೌಲ್ಯವನ್ನು ನೀವು ಪಡೆಬಹುದಾಗಿದೆ.

  ಬಾಂಡ್ ಖರೀದಿಗೆ ಬೇಕಾದ ದಾಖಲೆಗಳಿವು
  ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸ್ಥಳೀಯ ಅಂಚೆ ಕಚೇರಿಗಳಿಗೆ ತೆರಳಿ ಸಾರ್ವಭೌಮ ಗೋಲ್ಡ್ ಬಾಂಡ್ ಮೂಲಕ ನಿಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಆದರೆ ಹೀಗೆ ಅಂಚೆ ಕಚೇರಿಗೆ ತೆರಳುವವರು ಕಡ್ಡಾಯವಾಗಿ ಈ ದಾಖಲಾತಿಗಳನ್ನು ಕೊಂಡೊಯ್ಯಲೇಬೇಕು.
  1. ಪಾನ್ ಕಾರ್ಡ್
  2. ಆಧಾರ್ ಕಾರ್ಡ್
  3. ಬ್ಯಾಂಕ್ ಪಾಸ್ ಬುಕ್

  ಇದನ್ನೂ ಓದಿ: Dakshina kannada Pashu Mitra: ದಕ್ಷಿಣ ಕನ್ನಡದ ಜನರೇ, ಪಶುಮಿತ್ರ ತರಬೇತಿಗೇ ಕೂಡಲೇ ಅರ್ಜಿ ಸಲ್ಲಿಸಿ

  ಕೊನೆಯ ದಿನಾಂಕವನ್ನೂ ಗಮನಿಸಿ
  ಜೂನ್ 20ರಿಂದ ಆರಂಭಿಸಿ ಜೂನ್ 24ರ ವರೆಗೆ ಅವಕಾಶವಿರುತ್ತದೆ. (ಕೇವಲ ಐದು ದಿನಗಳು ಮಾತ್ರ)

  ಇನ್ನೂ ಹೆಚ್ಚಿನ ಮಾಹಿತಿಗಾಗಿ
  ದೂರವಾಣಿ 0824-2218400, 2212305
  ಸುಭಾಷ್ ಸಾಲಿಯಾನ್ 9964024230
  ಶಂಕರ್ ಕೆ. 72591566169 ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

  ಇದನ್ನೂ ಓದಿ: Mangaluru News: ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದೀರೇ? ಸುಲಭವಾಗಿ ಈ ಸಹಾಯಧನ ಪಡೆಯಿರಿ

  ಭಾರತೀಯ ಅಂಚೆ ಇಲಾಖೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಪ್ರಚುರಪಡಿಸುತ್ತಾ ಬರಲಾಗಿದೆ. ಇದೀಗ 7ನೇ ಹಂತದ ‘ಸಾರ್ವಭೌಮ ಚಿನ್ನದ ಬಾಂಡ್‘ (Sovereign Gold Bond Scheme) ಯೋಜನೆ ಆರಂಭಿಸಲಾಗಿದ್ದು, ಕಡಿಮೆ ಮೊತ್ತ ಹೂಡಿಕೆ ಮಾಡಿ ಚಿನ್ನದ ಮೊತ್ತ ಪಡೆಯುವ ಅವಕಾಶ ಕಲ್ಪಿಸುತ್ತಿದೆ.
  Published by:guruganesh bhat
  First published: