Mangaluru News: ಕನ್ನಡಿಗರಿಗೇ ಆದ್ಯತೆ ಮೇರೆಗೆ ಉದ್ಯೋಗ ನೀಡುತ್ತಿದೆ ಮಂಗಳೂರಿನ ಎಂಸಿಸಿ ಬ್ಯಾಂಕ್! ಹೀಗೆ ಅರ್ಜಿ ಹಾಕಿ

ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವತಿಯಿಂದ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಕಡ್ಡಾಯವಾಗಿ ಕನ್ನಡ ಭಾಷೆ ಬಲ್ಲವರಾಗಿರಬೇಕು. ಜುಲೈ 8ರ ಒಳಗಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಂಗಳೂರು: ಕಡಲತಡಿಯ ಅತ್ಯುತ್ತಮ ಸಹಕಾರಿ ಬ್ಯಾಂಕ್ ಗಳಲ್ಲಿ ಒಂದಾದ ‘ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್' ಹಲವು ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಈ ಕೆಳಗಿನ ವಿವರಗಳಂತೆ ಅರ್ಜಿ ಸಲ್ಲಿಸಬಹುದಾಗಿದೆ. ‘ದಿ ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್' (MCC Bank) ವತಿಯಿಂದ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಕಡ್ಡಾಯವಾಗಿ ಕನ್ನಡ ಭಾಷೆ ಬಲ್ಲವರಾಗಿರಬೇಕು. ಜುಲೈ 8ರ ಒಳಗಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.  ಮಂಗಳೂರಿನ (Mangaluru News) ಜನರಿಗೆ ಅತ್ಯುತ್ತಮ ಉದ್ಯೋಗಾವಕಾಶವೊಂದರ (Mangaluru Job Alert) ವಿವರ ಇಲ್ಲಿದೆ. 

    ಹುದ್ದೆಗಳ ವಿವರವೇನು?
    ಎಂಸಿಸಿ ಬ್ಯಾಂಕ್ ಪ್ರಸಕ್ತ ನೇಮಕಾತಿಯಲ್ಲಿ 25 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಅನ್ನೋದನ್ನ ಗಮನಿಸಿ.











































    ಹುದ್ದೆಗಳ ಹೆಸರುವಿವರ
    ಅಕೌಂಟೆಂಟ್    05
    ಕಿರಿಯ ಅಧಿಕಾರಿ    02
    ಕಿರಿಯ ಸಹಾಯಕ    15
    ಅಟೆಂಡರ್/ಡ್ರೈವರ್    03
    ಒಟ್ಟು    25
    ಅರ್ಜಿ ಸಲ್ಲಿಸುವ ವಿಧಾನಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು
    ಕೊನೆಯ ದಿನಾಂಕಜುಲೈ 8
    ಹೆಚ್ಚಿನ ವಿವರಗಳಿಗಾಗಿ0824- 2421369/2445742, 2445746
    ಸ್ಥಳಮಂಗಳೂರು

    ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ
    ಆಸಕ್ತ ಅಭ್ಯರ್ಥಿಗಳು ಅಂಚೆ, ಕೊರಿಯರ್ ಅಥವಾ ಖುದ್ದಾಗಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಅರ್ಜಿ ಅಥವಾ ಪಾವತಿಗೆ ಅವಕಾಶವಿರುವುದಿಲ್ಲ.

    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
    ಅರ್ಹ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಜುಲೈ 8ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.

    ವಿದ್ಯಾರ್ಹತೆಯ ವಿವರಗಳು ಇಲ್ಲಿದೆ
    1. ಅಕೌಂಟೆಂಟ್: ಈ ಹುದ್ದೆಗೆ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Bsc, Bcom, BA, Mcom, BE, BBM, BCA, MCA ಹೀಗೆ ಯಾವುದಾದರೂ ಒಂದು ವಾಣಿಜ್ಯ, ಸಹಕಾರ ಅಥವಾ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್  ಜ್ಞಾನ ಹೊಂದಿರಬೇಕು. Tally ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಕಡ್ಡಾಯ. ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.

    2. ಕಿರಿಯ ಅಧಿಕಾರಿ:
    ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್​ಸಿ, ಬಿ.ಕಾಮ್, BA, ಎಂ.ಕಾಮ್, BE, BBM, BCA, MCA ಹೀಗೆ ಯಾವುದಾದರೂ ಒಂದು ವಾಣಿಜ್ಯ, ಸಹಕಾರ ಅಥವಾ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್  ಜ್ಞಾನ ಹೊಂದಿರಬೇಕು. ಕನ್ನಡ ಭಾಷೆಯಲ್ಲಿ ವ್ಯವಹಾರ, ಬರೆಯಲು ಹಾಗೂ ಓದುವ ಸಾಮರ್ಥ್ಯ ಹೊಂದಿರಬೇಕು. ಇಲ್ಲೂ ಬ್ಯಾಂಕಿಂಗ್ ವ್ಯವಹಾರದಲ್ಲಿ ಅನುಭವವಿದ್ದಂತಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

    3. ಕಿರಿಯ ಸಹಾಯಕ (Junior Assistant) :
    ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿರಬೇಕು. ಕನ್ನಡದಲ್ಲಿ ವ್ಯವಹಾರ ಜ್ಞಾನ, ಸ್ಪಷ್ಟವಾಗಿ ಓದಲು ಹಾಗೂ ಬರೆಯಲು ಬರುವಂತವರಾಗಿರಬೇಕು. ಕಂಪ್ಯೂಟರ್ ಜ್ಞಾನವೂ ಅಗತ್ಯವಿರುತ್ತದೆ.

    4. ಅಟೆಂಡರ್/ಡ್ರೈವರ್ (Attender/Driver) 
    ಎಸ್ಎಸ್ಎಲ್​ಸಿ ತೇರ್ಗಡೆಯಾಗಿರಬೇಕು. ಕನ್ನಡವನ್ನು ಒಂದು ಭಾಷೆಯನ್ನಾಗಿ ಓದಿರಬೇಕು.

    ವಯೋಮಿತಿ ವಿವರ ಇಲ್ಲಿದೆ
    ಕನಿಷ್ಟ – 18 ವರ್ಷ ಗರಿಷ್ಟ ವಯೋಮಿತಿ ಹೀಗಿವೆ. ಸಾಮಾನ್ಯ ಅಭ್ಯರ್ಥಿಗಳಿಗೆ – 35 ವರ್ಷಪರಿಶಿಷ್ಟ ಜಾತಿ/ಪಂಗಡ/ ವರ್ಗ ಹಾಗೂ ಹಿಂದುಳಿದ ವರ್ಗ 1 – 40 ವರ್ಷಗಳು.

    ಇತರೆ ಹಿಂದುಳಿದ ವರ್ಗಗಳಿಗೆ (2ಎ, 2ಬಿ, 3ಎ, 3ಬಿ) – 38 ವರ್ಷಗಳು
    ಅರ್ಜಿ ಶುಲ್ಕಸಾಮಾನ್ಯ ಅಭ್ಯರ್ಥಿ ಹಾಗೂ ಹಿಂದುಳಿದ ವರ್ಗಗಳಿಗೆ - ₹1000/-ಪರಿಶಿಷ್ಟ ಜಾತಿ/ಪಂಗಡ/ ಹಿಂದುಳಿದ ವರ್ಗ 1 ₹ 500/-

    ಅರ್ಜಿ ಶುಲ್ಕ ಪಾವತಿ ವಿಧಾನ ಹೀಗಿದೆ
    ಅರ್ಜಿದಾರರು ಕಡ್ಡಾಯವಾಗಿ ಡಿ.ಡಿ. ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ. “ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ನಿ.” ಈ ಹೆಸರಿಗೆ ಡಿ.ಡಿ. ಮಾಡಬಹುದು.

    ಅರ್ಜಿ ಪಡೆಯುವ ವಿಧಾನ ಹೇಗೆ?
    ಆಸಕ್ತರು ಎಂಸಿಸಿ ಬ್ಯಾಂಕ್ ಇದರ ಅಧಿಕೃತ ವೆಬ್ ಸೈಟ್ ಇಲ್ಲಿಂದ ಪಡೆಯಬಹುದಾಗಿದೆ. ವೆಬ್​ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

    ಅರ್ಜಿ ಸಲ್ಲಿಸಬೇಕಾದ ವಿಳಾಸ ಇಲ್ಲಿದೆ
    ಅರ್ಜಿದಾರರು ಅರ್ಜಿಗಳನ್ನು ತುಂಬಿದ ಬಳಿಕ ಅರ್ಜಿ ಸಲ್ಲಿಕೆ ಇರುವ ಕೊನೆಯ ದಿನಾಂಕಕ್ಕೂ ಮುನ್ನ ತಲುಪುವಂತೆ ಈ ವಿಳಾಸಕ್ಕೆ ಕಳುಹಿಸಬೇಕು ಅಥವಾ ತಲುಪಿಸಬೇಕು.

    ವಿಳಾಸ
    ಮಹಾಪ್ರಬಂಧಕರು, ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ನಿ., ಆಡಳಿತ ಕಚೇರಿ, ಒಂದನೇ ಮಹಡಿ, ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ, ಹಂಪನಕಟ್ಟೆ, ಮಂಗಳೂರು – 575001

    ಇದನ್ನೂ ಓದಿ: Dakshina Kannada Jobs: ದಕ್ಷಿಣ ಕನ್ನಡದಲ್ಲಿ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ; ತಿಂಗಳಿಗೆ ₹10 ಸಾವಿರ ಸಂಬಳ

    ಆಯ್ಕೆ ವಿಧಾನವೇನು?
    200 ಅಂಕಗಳ ಲಿಖಿತ ಪರೀಕ್ಷೆ ಹಾಗೂ ಅದರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ 15 ಅಂಕಗಳಿಗೆ ಸೀಮಿತವಾಗಿ ಮೌಖಿಕ ಸಂದರ್ಶನ ನಡೆಸಲಾಗುತ್ತದೆ.
    ಅರ್ಜಿಯೊಂದಿಗೆ ಸಲ್ಲಿಸಬೇಕಾದ ಪ್ರಮಾಣ ಪತ್ರಗಳು ಅರ್ಜಿದಾರರು ಸರಳ ವಿಧಾನದಲ್ಲಿ ಅರ್ಜಿಯನ್ನು ತುಂಬಿ ಲಕೋಟೆಯಲ್ಲಿ ಮುಚ್ಚುವ ವೇಳೆ ಕಡ್ಡಾಯವಾಗಿ ಈ ಎಲ್ಲಾ ದಾಖಲೆಗಳ ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತೀಕರಿಸುವುದನ್ನು ಮರೆಯಬೇಡಿ.

    ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
    0824- 2421369/2445742, 2445746 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.ವೆಬ್ ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

    Vijayapura: ಪ್ಲಾಸ್ಟಿಕ್, ಮದ್ಯದ ಬಾಟಲಿ ಹೆಕ್ಕಿದ ಸ್ವಾಮೀಜಿ! ವಿಡಿಯೋ ನೋಡಿ

    ಈ ದಾಖಲೆಗಳನ್ನು ಮರೆಯದೇ ಲಗ್ಗತ್ತಿಸಿ
    1. ಇತ್ತೀಚೆಗಿನ ಮೂರು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು (ಫೋಟೋ ಹಿಂದೆ ಸಹಿ ಕಡ್ಡಾಯ)
    2. ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿ
    3. ವಯಸ್ಸಿನ ದೃಢೀಕರಣಕ್ಕೆ ಎಸ್ಎಸ್ಎಲ್​ಸಿ ಅಂಕಪಟ್ಟಿ
    4. ಸೇವಾ ಅನುಭವ ಪತ್ರ- ಈ ಎಲ್ಲಾ ದಾಖಲೆಗಳಿಗೂ ಕಡ್ಡಾಯವಾಗಿ ಪ್ರತಿ ಪುಟಗಳಿಗೂ ಅನ್ವಯಿಸುವಂತೆ ಸ್ವಹಸ್ತಾಕ್ಷರ ಬಳಸಿ ಸಹಿ ಮಾಡತಕ್ಕದ್ದು.
    Published by:guruganesh bhat
    First published: