• Home
 • »
 • News
 • »
 • mangaluru
 • »
 • Kambala: ಕಂಬಳ ಲೋಕದ ಕಂಬನಿ; ಪ್ರಸಿದ್ಧ ತಾಟೆ, ಬೊಟ್ಟಿಮಾರ್‌ ಕೋಣಗಳ ಮಾಲೀಕ ಇನ್ನಿಲ್ಲ

Kambala: ಕಂಬಳ ಲೋಕದ ಕಂಬನಿ; ಪ್ರಸಿದ್ಧ ತಾಟೆ, ಬೊಟ್ಟಿಮಾರ್‌ ಕೋಣಗಳ ಮಾಲೀಕ ಇನ್ನಿಲ್ಲ

ಕಣ್ಣಿರಲ್ಲಿಒ ಕಂಬಳ ಲೋಕ

ಕಣ್ಣಿರಲ್ಲಿಒ ಕಂಬಳ ಲೋಕ

ಇವರು ಬೆಳೆಸಿದ ಕಂಬಳದ ಕೋಣಗಳು ನೇಗಿಲು ಕಿರಿಯ ಮತ್ತು ಹಿರಿಯ ವಿಭಾಗದಲ್ಲೂ ದಾಖಲೆ ಸಂಖ್ಯೆಯಲ್ಲಿ ಬಹುಮಾನಗಳನ್ನು ಪಡೆದಿದ್ದವು.

 • Share this:

  ಮಂಗಳೂರು: ಕಂಬಳ ಕ್ಷೇತ್ರದ ದಿಗ್ಗಜ, ಇರುವೈಲು ಪಾಣಿಲದ ಯಜಮಾನ ಬಾಡ ಪೂಜಾರಿ  (82)  ಅಕ್ಟೋಬರ್‌ 11 ರಂದು ದಕ್ಷಿಣ ಕನ್ನಡ ಜಿಲ್ಲೆ (Dakshina Kannada) ಮೂಡಬಿದ್ರೆಯ ಇರುವೈಲು ಗ್ರಾಮದ ಅವರ ಸ್ವ ನಿವಾಸ ಪಾನಿಲದಲ್ಲಿ ನಿಧನರಾಗಿದ್ದಾರೆ. ಮಂಗಳೂರಿನಲ್ಲಿರುವಂತಹ (Mangaluru News) ಹಲವಾರು ಜಾನಪದ ಕ್ರೀಡೆಗಳಲ್ಲಿ ಕಂಬಳ (Kambala) ಕೂಡ ಒಂದು . ದಷ್ಟಪುಷ್ಟವಾಗಿ ಯಜಮಾನರು ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ  ಕಂಬಳ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ (Udupi Kambala)  ಅತ್ಯಂತ ಜನಪ್ರಿಯ ಕ್ರೀಡೆಯೆ ಈ ಕಂಬಳ. ಪ್ರಗತಿಪರ ಕೃಷಿಕರಾಗಿದ್ದ ಬಾಡ ಪೂಜಾರಿಯವರು ಸುಮಾರು 23 ವರ್ಷಗಳಿಂದ  ಕಂಬಳ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.


  ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಕೆಸರುಗದ್ದೆಯಲ್ಲಿ ಓಡಿಸಲಾಗುತ್ತದೆ. ಇಲ್ಲಿ ಕೋಣಗಳ ಜೊತೆಗೆ ಓಡಿಸುವಾತನ ಪಾತ್ರವು  ಮುಖ್ಯವಾಗಿರುತ್ತದೆ.


  ಇದಲ್ಲದೆ ಕಂಬಳದ  ಕೋಣಗಳನ್ನು ಸಾಕುವುದು, ಸ್ಪರ್ಧಿಸುವುದು, ವಿಜಯಿಯಾಗುವುದು ಕೂಡ ಕಂಬಳ ಯಜಮಾನರಿಗೆ ಪ್ರತಿಷ್ಟೆಯ ಸಂಕೇತವೂ ಹೌದು.


  ತಾಟೆ ಮತ್ತು ಬೊಟ್ಟಿಮಾರ್‌ ಕೋಣಗಳು ಭಾರೀ ಹೆಸರು ಗಳಿಸಿದ್ದವು
  ಇವರು ಸಾಕಿದ್ದ ಕೋಣಗಳಲ್ಲಿ ತಾಟೆ ಮತ್ತು ಬೊಟ್ಟಿಮಾರ್‌ ಎಂಬ ಹೆಸರಿನ ಕೋಣಗಳು ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೋಣಗಳಾಗಿದ್ದು ಬಹುದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದೆ.


  ಇದಲ್ಲದೆ ಇವರು ಬೆಳೆಸಿದ ಕಂಬಳದ ಕೋಣಗಳು ನೇಗಿಲು ಕಿರಿಯ ಮತ್ತು ಹಿರಿಯ ವಿಭಾಗದಲ್ಲೂ ದಾಖಲೆ ಸಂಖ್ಯೆಯಲ್ಲಿ ಬಹುಮಾನಗಳನ್ನು ಪಡೆದಿವೆ.


  ಶ್ರೀನಿವಾಸ  ಗೌಡ ಸಹ ಇವರ ಗರಡಿಯಲ್ಲಿ ಬೆಳೆದವರು!
  ಕಂಬಳ ಕ್ಷೇತ್ರದಲ್ಲಿ ಅತೀ ಕಡಿಮೆ ಸಮಯದಲ್ಲಿ ಓಡಿ ಉಸೇನ್‌ ಬೋಲ್ಟ್‌  ಬಿರುದು ಪಡೆದ ಶ್ರೀನಿವಾಸ  ಗೌಡ ಹಾಗೂ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಆನಂದ ಅವರು ಕೂಡ ಇವರ ಗರಡಿಯಲ್ಲಿ ಬೆಳೆದು ಪ್ರಸಿದ್ಧಿಗೆ ಬಂದವರು.


  ಸರಳಸಜ್ಜನಿಕೆಯಿಂದ  ಎಲ್ಲರೊಂದಿಗೂ ಅತ್ಮೀಯವಾಗಿದ್ದಂತಹ ಬಾಡ ಪೂಜಾರಿಯವರ ಅಗಲುವಿಕೆ ಕಂಬಳ ಕ್ಷೇತ್ರಕ್ಕೆ ಅಪಾರ ಹಾನಿಯನ್ನುಂಟು ಮಾಡಿದೆ ಎಂದು ಅಭಿಮಾನಿಗಳ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.


  ಕಂಬಳದ ಹಿನ್ನೆಲೆ
  ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ ನಮ್ಮ ಪೂರ್ವಜರು. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲದೊಂದಿಗೆ ಮತ್ತು ಸಹಕಾರದೊಂದಿಗೆ ಈ ಕ್ರೀಡೆಯನ್ನು ನಡೆಸುತ್ತಿದ್ದರು.


  ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!


  ಆದರೆ ದಕ್ಷಿಣ ಕನ್ನಡದಲ್ಲಿ ಮಾತ್ರ ಹೆಚ್ಚಾಗಿ ಈ ಕೋಣಗಳನ್ನು ಗದ್ದೆಯಲ್ಲಿ ಉಳುಮೆ ಮಾಡಲು ಉಪಯೋಗಿಸುತ್ತಿದ್ದರು. ನಂತರ ಕೆಲವೊಂದು ಬಾರಿ ಬಲಿಷ್ಟವಾದವುಗಳ ಮಧ್ಯೆ ಸ್ಪರ್ಧೆ ನಡೆಸಿ ಇದರಲ್ಲಿ ವಿಜೇತರಾದ ಕೋಣಗಳಿಗೆ ಇವುಗಳ ಯಜಮಾನರನ್ನು ಸನ್ಮಾನಿಸಲಾಗುತ್ತಿತ್ತು. ಈ ರೀತಿ ಮಾಡುವುದರಿಂದ ಜನರಲ್ಲಿ ಕ್ರೀಡಾ ಮನೋಭಾವವನ್ನು ಮತ್ತು ಕೃಷಿ ಮೇಲಿನ ಒಲವು ಹೆಚ್ಚಾಗುತ್ತಿತ್ತು.


  ಭತ್ತದ ಮೊದಲ  ಕೊಯಿಲಿನ ನಂತರ ಈ ಕ್ರೀಡೆ ನಡೆಯುತ್ತದೆ.  ಡಿಸೆಂಬರ್‌ ನಂತರದ ಚಳಿಗಾಲದಲ್ಲಿ ಪ್ರಾರಂಭವಾಗುವ ಈ ಕಂಬಳ ಸ್ಪರ್ಧೆ ಮಾರ್ಚ್‌ ಒಳಗಡೆ ಮುಗಿಸಲಾಗುತ್ತದೆ. ಕರಾವಳಿಯಲ್ಲಿ ಬಿಸಿಲಿನ ಶಾಖ ಮಾರ್ಚ್‌ ನಂತರ ಹೆಚ್ಚಾಗುವುದರಿಂದ ಈ ಸ್ಪರ್ಧೆಯನ್ನು ಆದಷ್ಟು ಇದರ ಮೊದಲೇ ಮುಗಿಸುವ ಉದ್ದೇಶವನ್ನು ಹೊಂದಿರುತ್ತಾರೆ.


  ಇದನ್ನೂ ಓದಿ: Uttara Kannada: 70 ವರ್ಷದ ಈ ತಾತ ಈಗ ಡಿಪ್ಲೋಮಾ ಸ್ಟೂಡೆಂಟ್!


  ಸಾಮಾನ್ಯವಾಗಿ ಕೊಯಿಲಿನ ನಂತರ ಬಿಡುವಾದ ಅಥ ವಾ ಬಳಸದೇ ಇರುವ ಬಿಟ್ಟಿರುವ ಗದ್ದೆಗಳಲ್ಲಿ ಕಂಬಳ ನಡೆಸುತ್ತಿದ್ದರು. ಆದರೆ ಇತ್ತೀಚಿಗೆ ಹೆಚ್ಚು ಪ್ರಸಿದ್ಧವಾದ ನಂತರವ ಕಂಬಳಕ್ಕಾಗಿಯೇ ಕೆಲವೊಂದು ಕಣಗಳನ್ನು ನಿರ್ಮಿಸಿದ್ದಾರೆ. ಈ ಕಣಗಳು ನೂರರಿಂದ ಇನ್ನೂರು ಮೀಟರ್‌ನಷ್ಟು ದೂರವನ್ನು ಒಳಗೊಂಡಿದ್ದು ಈ ಕಣಗಳಲ್ಲಿ ಸ್ಪರ್ಧೆಯನ್ನು ನಡೆಸಲಾಗುತ್ತದೆ.

  Published by:ಗುರುಗಣೇಶ ಡಬ್ಗುಳಿ
  First published: