Mangaluru Power Cut: ಮಂಗಳೂರಲ್ಲಿ ಈ 2 ದಿನ ಕೈ ಕೊಡಲಿದೆ ಕರೆಂಟ್! ಸಮಯ, ಏರಿಯಾ ಮಾಹಿತಿ ಇಲ್ಲಿದೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವೆಡೆ ಎರಡು ದಿನಗಳ ಕಾಲ ವಿದ್ಯುತ್ ಕಡಿತಗೊಳ್ಳಲಿದೆ. ಹಾಗಿದ್ರೆ ಯಾವ ಏರಿಯಾದಲ್ಲಿ, ಯಾವ ದಿವಸ, ಎಷ್ಟು ಗಂಟೆ ಕಾಲ ಕರೆಂಟ್ ಇರಲ್ಲ ಅನ್ನೋದರ ಡೀಟೆಲ್ಸ್ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಮಂಗಳೂರು: ಮಂಗಳೂರು ನಗರದಲ್ಲಿರುವವರು ಮುಂದಿನ ಎರಡು ದಿನಗಳ ಕಾಲ ಹಗಲಿಡೀ ಬಹುತೇಕ ವಿದ್ಯುತ್ ಸೇವೆಯಿಂದ ವಂಚಿತರಾಗಲಿದ್ದಾರೆ. ಮೆಸ್ಕಾಂ (MESCOM) ವತಿಯಿಂದ ಪ್ರಮುಖ ಕೆಲಸ ಕಾರ್ಯಗಳು ನಡೆಯಬೇಕಿರುವುದರಿಂದ ಜೂನ್ 15 ಮತ್ತು ಜೂನ್ 16 ರಂದು ಎರಡು ದಿನಗಳ ಕಾಲ ವಿದ್ಯುತ್ ಕಡಿತಗೊಳಿಸಲಿರುವುದಾಗಿ ಮೆಸ್ಕಾಂ ಅಥವಾ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ (Mangalore Electricity Supply Company Limited) ತಿಳಿಸಿದೆ. ಈ ದಿನಾಂಕದಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ವಿದ್ಯುತ್ ಸೇವೆಯಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ. ಹಾಗಾದರೆ ಯಾವ ಏರಿಯಾದಲ್ಲೆ ಎಷ್ಟು ಹೊತ್ತಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ? ಇಲ್ಲಿದೆ ನೋಡಿ ವಿವರ.

  ಮಂಗಳೂರಿನ ಯಾವ ಏರಿಯಾದಲ್ಲಿ, ಯಾವ ದಿನಾಂಕದಂದು ಕರೆಂಟ್ ಇರುವುದಿಲ್ಲ ಅನ್ನೋದರ ಡೀಟೆಲ್ಸ್ ಇಲ್ಲಿದೆ.
  ಜೂನ್ 15ರಂದು ಎಲ್ಲೆಲ್ಲಿ?
  ಕಾವೂರು ವ್ಯಾಪ್ತಿ
  ಜೂ.15ರ ಬೆಳಿಗ್ಗೆ 10 ರಿಂದ 5ರವರೆಗೆ ಕಾವೂರು ಜಂಕ್ಷನ್, ಮಹಾಲಿಂಗೇಶ್ವರ ದೇವಸ್ಥಾನದ ಆಸುಪಾಸು, ಕಾವೂರು ಕಟ್ಟೆ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಮಹಾನಗರ ಪಾಲಿಕೆ ಚರಂಡಿ ಎಸ್.ಟಿ.ಪಿ ಘಟಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೆಸ್ಕಾಂನಿಂದ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.


  ಕುದ್ರೋಳಿ
  ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ನ್ಯೂಫೀಲ್ಡ್ ಸ್ಟ್ರೀಟ್, ಕಾರ್ ಸ್ಟ್ರೀಟ್, ದಯಾನಂದ ಪೈ ಕಾಲೇಜ್, ಮಹಾಮಾಯಿ ಟೆಂಪಲ್ ರಸ್ತೆ, ಕಾರ್ಪೊರೇಷನ್ ಬ್ಯಾಂಕ್, ಗೋಪಾಲ ಕೃಷ್ಣ ಟೆಂಪಲ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

  ಕೊಣಾಜೆ
  ಬೆಳಿಗ್ಗೆ 10 ರಿಂದ ಸಾಯಂಕಾಲ 4 ಗಂಟೆಯವರೆಗೆ ಕೊಣಾಜೆ ಉಪಕೇಂದ್ರದಿಂದ ಹೊರಡುವ ಕೊಣಾಜೆ, ಉಳ್ಳಾಲ ಎಕ್ಸ್ಪ್ರೆಸ್, ಕಿನ್ಯಾ, ಮಂಜನಾಡಿ, ಪಜೀರ್ ಮತ್ತು ಬೋಳಿಯಾರ್, ಆಸೈಗೋಳಿ, ತಿಬ್ಲೆಪದವು, ಗ್ರಾಮಚಾವಡಿ, ಹರೇಕಳ, ಪಾವೂರು, ಇನೋಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

  ಜೂನ್ 16ರಂದು ಎಲ್ಲೆಲ್ಲಿ?
  ನೆಹರೂ ಮೈದಾನ
  ಜೂ.16ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಎ.ಬಿ ಶೆಟ್ಟಿ ಸರ್ಕಲ್, ಭಾರತೀಯ ವಿಶ್ವ ವಿದ್ಯಾಭವನ, ಎಸ್.ಪಿ.ಆಫೀಸ್, ಪಾಂಡೇಶ್ವರ ಕಟ್ಟೆ, ಪಾಂಡೇಶ್ವರ ನ್ಯೂ ರಸ್ತೆ, ಮಹಾಲಿಂಗೇಶ್ವರ ದೇವಸ್ಥಾನ, ಅಮೃತನಗರ, ರೋಸಾರಿಯೋ ಚರ್ಚ್ ರೋಡ್, ಪೊಲೀಸ್ ಲೇನ್, ಪಿ.ಡಬ್ಲ್ಯು.ಡಿ., ಕಮರ್ಷಿಯಲ್ ಟ್ಯಾಕ್ಸ್ ಕಚೇರಿ, ಕೇರಳ ಸಮಾಜ, ಎಮ್.ವಿ. ಶೆಟ್ಟಿ, ಓಲ್ಡ್ ಕೆಂಟ್ ರಸ್ತೆ, ದೂಮಪ್ಪ ಕಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.


  ಇದನ್ನೂ ಓದಿ: Belagavi Jute Bags: ಬೆಳಗಾವಿ ಮಹಿಳೆಯರ ಸೆಣಬಿನ ಬ್ಯಾಗ್​ಗೆ ಅಮೆರಿಕಾ, ಯೂರೋಪ್ ಫಿದಾ!

  ನಂದಿಗುಡ್ಡ
  ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಮಾರ್ನಮಿಕಟ್ಟೆ, ಮಂಕೀಸ್ಟ್ಯಾಂಡ್ ರೋಡ್, ಶಿವನಗರ, ಸುಭಾಷ್ ನಗರ, ಜೆಪ್ಪು, ಬೋಳಾರ, ಮುಳಿಹಿತ್ಲು, ಮಂಗಳಾದೇವಿ, ಹೊಯಿಗೆ ಬಜಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ ಮಾಹಿತಿ ನೀಡಿದೆ.

  ಅತ್ತಾವರ
  ಬೆಳಿಗ್ಗೆ 10 ರಿಂದ 5ರವರೆಗೆ ಅತ್ತಾವರ, ಮಿಲಾಗ್ರಿಸ್ ಚರ್ಚ್, ವೆನ್ಲಾಕ್ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ನೆನಪಿಡಿ.

  ಇದನ್ನೂ ಓದಿ: Vijayapura: ನೀವು ಹಸು ಸಾಕುತ್ತೀರೇ? ಈಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ

  ಯೆಯ್ಯಾಡಿ, ಹರಿಪದವು
  ಮೇರಿಹಿಲ್, ಯೆಯ್ಯಾಡಿ, ಹರಿಪದವು, ಕುಂಟಲ್ಪಾಡಿ, ಕೆ.ಪಿ.ಟಿ, ಉದಯನಗರ, ಲ್ಯಾಂಡ್ ಲಿಂಕ್ಸ್, ಪೆರ್ಲಗುರಿ, ಪದವಿನಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ.  ಜೂನ್ 15 ಮತ್ತು 16 ರಂದು ಮಂಗಳೂರಿನ ಜನ ವಿದ್ಯುತ್ ನಿಲುಗಡೆಯ ಸಮಯ ನೋಡಿಕೊಂಡು ತಮ್ಮ ಕೆಲಸ ಕಾರ್ಯಗಳ ಯೋಜನೆ ರೂಪಿಸಿಕೊಂಡರೆ ಕೆಲಸಕ್ಕೆ ಅಡೆತಡೆ ಉಂಟಾಗುವುದಿಲ್ಲ.
  Published by:guruganesh bhat
  First published: