Mangaluru News: ಮಂಗಳೂರು ಮಳೆಗೆ ಕರೆಂಟ್ ಕಟ್, ಪ್ರದೇಶ, ಸಮಯದ ವಿವರ ಇಲ್ಲಿದೆ

ಜುಲೈ 1ರಂದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ನಾಳೆ ಮಳೆ ಮಧ್ಯೆ ಈ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಸೇವೆ ಅಲಭ್ಯವಾಗಲಿದೆ. ಯಾವ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ ಎಂಬ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಂಗಳೂರು: ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಈ ಮಧ್ಯೆ ಶುಕ್ರವಾರದಂದು (ಜುಲೈ 1) ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವೆಡೆ ಹಗಲಿಡೀ ವಿದ್ಯುತ್ (Mangaluru Power Cut) ಉಂಟಾಗಲಿದೆ. 33/11ಕೆ.ವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ಮಾರ್ಕೆಟ್ ಹಾಗೂ ಸೌತ್ವಾರ್ಫ್ ಫೀಡರ್​ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ ಮಳೆಯ ಮಧ್ಯೆ ನಾಳೆ ಕರೆಂಟ್ ಕೂಡಾ ಕೈಕೊಡಲಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ (Dakshina Kannada Rains) ಕಾರ್ಮೋಡ ಸಹಿತ ಕತ್ತಲ ವಾತಾವರಣ ಕವಿದಿದೆ. ಆದ್ದರಿಂದ ಶುಕ್ರವಾರ ವಿದ್ಯುತ್ ಕೈ ಕೊಡಲಿರುವುದರಿಂದ ಮಂಗಳೂರು (Mnagaluru Rain News) ಮಹಾನಗರ ಪಾಲಿಕೆ ವ್ಯಾಪ್ತಿಯ ಜನ ಪವರ್ ಕಟ್ ಆಗುವ ಮುನ್ನವೇ ಕರೆಂಟ್​ನಿಂದಾಗುವ ಕೆಲಸವನ್ನು ಮಾಡಿ ಮುಗಿಸಬೇಕಿದೆ.

  ಎಲ್ಲೆಲ್ಲ ಪವರ್ ಕಟ್?
  ಅಗತ್ಯ ಕಾಮಗಾರಿ ಹಿನ್ನೆಲೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶಗಳೆಲ್ಲ ಪವರ್ ಕಟ್ ಆಗಲಿದೆ. ಇಲ್ಲವೇ ಮೆಸ್ಕಾಂ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

  ವಿದ್ಯುತ್ ಕಡಿತ ಆಗುವ ಪ್ರದೇಶಗಳು ಹೀಗಿವೆ

  1. ಸರಕಾರಿ ಲೇಡಿಗೋಷನ್ ಆಸ್ಪತ್ರೆ
  2. ಸೆಂಟ್ರಲ್ ಮಾರ್ಕೆಟ್
  3. ಶಾಂತದುರ್ಗಾ
  4. ಜೆ.ಎಚ್.ಎಸ್. ರಸ್ತೆ
  5. ಪಿ.ಎಂ. ರಾವ್ ರೋಡ್
  6. ಗೌರಿಮಠ ರೋಡ್
  7. ರಾಘವೇಂದ್ರ ಮಠ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು
  8. ಹ್ಯಾಮಿಲ್ಟನ್ ಸರ್ಕಲ್
  9. ಧಕ್ಕೆ
  10. ಓಲ್ಡ್ ಪೋರ್ಟ್ ಗೇಟ್
  11. ಬದ್ರಿಯಾ ರೋಡ್
  12. ಗೂಡ್ ಶೆಡ್ ರಸ್ತೆ
  13. ಬ್ಯಾಂಬು ಬಜಾರ್
  14. ನೀರೇಶ್ವಲ್ಯ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶ
  ಈ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿರುವುದಾಗಿ ಮೆಸ್ಕಾಂ (MESCOM) ತಿಳಿಸಿದೆ.

  ಎಷ್ಟು ಹೊತ್ತು ಪವರ್ ಕಟ್?
  ಜುಲೈ 1ರ ಶುಕ್ರವಾರದಂದು ಬೆಳಗ್ಗೆ 10 ರಿಂದ ಸಾಯಂಕಾಲ 5 ಗಂಟೆ ವರೆಗೆ ವಿದ್ಯುತ್ ಸೇವೆ ಅಲಭ್ಯವಾಗಲಿದೆ.

  ಮೆಸ್ಕಾಂ (MESCOM) ಸಹಾಯವಾಣಿ ಸಂಖ್ಯೆ : 1912

  ಇದನ್ನೂ ಓದಿ: Dakshina Kannada Rain: ಮಳೆಯಿಂದ ಸಮಸ್ಯೆಯಾದರೆ ಈ ಸಹಾಯವಾಣಿ ಸಂಪರ್ಕಿಸಿ; ದಕ್ಷಿಣ ಕನ್ನಡ ಜನರಿಗೆ ಸೂಚನೆ

  ಮಳೆಗಾಲ ಕರೆಂಟ್ ಬಗ್ಗೆ ಜಾಗರೂಕತೆ
  ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಈಗಾಗಲೇ ಹಲವೆಡೆ ಭೂ ಪ್ರದೇಶಗಳು ನೆರೆ ಆವೃತವಾಗಿವೆ. ಇಂತಹ ಸಮಯದಲ್ಲಿ ವಿದ್ಯುತ್ ತಂತಿಗಳಿಂದ ಅನಾಹುತಗಳು ಸಂಭವಿಸಬಹುದು. ಹಾಗಾಗಿ ಮಳೆ ಸುರಿಯುತ್ತಿರುವ ವೇಳೆ ವಿದ್ಯುತ್ ಕಂಬಗಳಿಂದ ಅಂತರ ಕಾಯ್ದುಕೊಳ್ಳಿ. ತಂತಿ ತುಂಡರಿದು ಬಿದ್ದಲ್ಲಿ ಅಂತಹ ನೀರಿನಲ್ಲಿ ನಡೆಯುವಂತಹ ಸಾಹಸಕ್ಕೂ ಮುಂದಾಗದಿರಿ.

  ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!

  ಹೆಲ್ಪ್ ಲೈನ್ ಸಂಖ್ಯೆ ಹೀಗಿವೆ
  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಮೆಸ್ಕಾಂ ಇಲಾಖೆ ಕೂಡಾ ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧವಾಗಿದೆ. ಆದ್ದರಿಂದ ಸಾರ್ವಜನಿಕರು ಕೂಡಾ ಯಾವುದೇ ವಿದ್ಯುತ್ ಸಂಬಂಧಿತ ಅವಘಡಗಳು ಸಂಭವಿಸಿದ್ದಲ್ಲಿ ಸ್ಥಳೀಯ ಮೆಸ್ಕಾಂ ಶಾಖೆಗಳನ್ನು ಸಂಪರ್ಕಿಸಬಹುದಾಗಿದೆ.
  Published by:guruganesh bhat
  First published: