• Home
 • »
 • News
 • »
 • mangaluru
 • »
 • Mangaluru News: ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದೀರೇ? ಸುಲಭವಾಗಿ ಈ ಸಹಾಯಧನ ಪಡೆಯಿರಿ

Mangaluru News: ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದೀರೇ? ಸುಲಭವಾಗಿ ಈ ಸಹಾಯಧನ ಪಡೆಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಮಂದಿಗೆ ಕಿರುಸಾಲ ಹಾಗೂ ಸಹಾಯಧನ ವಿತರಿಸಲು ಸರ್ಕಾರವು ನಿರ್ಧರಿಸಿದೆ. ಸ್ವಂತ ಉದ್ಯೋಗ ಆರಂಭಿಸುವ ಕನಸು ಕಾಣುತ್ತಿದ್ದವರಿಗೆ ಈ ಯೋಜನೆಯು ಕಡಿಮೆ ಸಬ್ಸಿಡಿ ಮೂಲಕ ಸಾಲ ಸೌಲಭ್ಯ ಕಲ್ಪಿಸುತ್ತಿದೆ.

 • Share this:

  ಮಂಗಳೂರು: ನೀವು ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುತ್ತಿದ್ದೀರ? ಸ್ವಂತ ಉದ್ಯೋಗ ಆರಂಭಿಸಬೇಕು ಅನ್ನೋ ಕನಸು ಕಾಣುತ್ತಿದ್ದೀರ? ಹಾಗಿದ್ರೆ ಇನ್ನೇಕೆ ತಡ?  ನಿಮ್ಮ ಕನಸು ನನಸು ಮಾಡಲಿರುವ ಈ ಯೋಜನೆಯಡಿ ಕಿರುಸಾಲ ಪಡೆಯಲು ಈಗಲೇ ಅರ್ಜಿ ಹಾಕಿರಿ, ಮತ್ತು ಸಹಾಯಧನದ ಮೂಲಕ ಸ್ವಂತ ಉದ್ಯಮ ಆರಂಭಿಸಿರಿ. ಅಲ್ಪಸಂಖ್ಯಾತ ಅಭಿವೃದ್ಧಿ (Minority Community)  ನಿಗಮದಿಂದ ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಮಂದಿಗೆ ಕಿರುಸಾಲ (Micro Loan) ಹಾಗೂ ಸಹಾಯಧನ ವಿತರಿಸಲು ಸರ್ಕಾರವು (Karnataka Government) ನಿರ್ಧರಿಸಿದೆ. ಸ್ವಂತ ಉದ್ಯೋಗ ಆರಂಭಿಸುವ ಕನಸು ಕಾಣುತ್ತಿದ್ದವರಿಗೆ ಈ ಯೋಜನೆಯು ಕಡಿಮೆ ಸಬ್ಸಿಡಿ ಮೂಲಕ ಸಾಲ ಸೌಲಭ್ಯ ಕಲ್ಪಿಸುತ್ತಿದೆ.


  ಯಾವೆಲ್ಲ ಸಮುದಾಯಕ್ಕೆ ಅವಕಾಶ?
  ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ ಧರ್ಮಗಳಲ್ಲಿ ಹೀಗೆ ಯಾವುದೇ ಒಂದು ಅಲ್ಪಸಂಖ್ಯಾತ ಸಮುದಾಯವನ್ನು ನೀವು ಪ್ರತಿನಿಧಿಸುತ್ತಿದ್ದರೆ ತಕ್ಷಣವೇ 2022-23ನೇ ಸಾಲಿನ ಸರ್ಕಾರದ ವಿವಿಧ ಯೋಜನೆಯಡಿ ಸವಲತ್ತು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.


  ಯಾರಿಗೆ, ಎಷ್ಟು ಶೇಕಡಾ ಸಹಾಯಧನ ಸಿಗುತ್ತೆ?
  ಸ್ವಯಂ ಉದ್ಯೋಗ ಯೋಜನೆಯಡಿ ವ್ಯಾಪಾರ, ಸಣ್ಣ ಕೈಗಾರಿಕೆ ಮತ್ತು ಕೃಷಿ ಅವಲಂಬಿತ ಚಟುವಟಿಕೆ ಮುಂತಾದವುಗಳನ್ನು ಪ್ರಾರಂಭಿಸಲು ಸಾಲ ಮತ್ತು ಸಹಾಯಧನ ನೀಡಲಾಗುವುದು.


  ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ ಪ್ಯಾಸೆಂಜರ್ ಆಟೋರಿಕ್ಷಾ, ಟ್ಯಾಕ್ಸಿ, ಗೂಡ್ಸ್ ವಾಹನ ಖರೀದಿಸಲು ಶೇಕಡಾ 33ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅದಲ್ಲದೇ, ಸ್ವಯಂ ಉದ್ಯೋಗ ನಡೆಸಲು ಉದ್ಧೇಶಿಸುವವರು ಕೂಡಾ ತಮ್ಮ ಸವಿವರವಾದ ಯೋಜನಾ ವರದಿಯೊಂದಿಗೆ ಸುಲಭವಾಗಿ ಅರ್ಜಿ ಸಲ್ಲಿಸಹುದಾಗಿದೆ.


  ಶ್ರಮಶಕ್ತಿಗೂ ಬಂಪರ್
  ಶ್ರಮಶಕ್ತಿ ಯೋಜನೆಯಡಿ ವಿವಿಧ ಅಲ್ಪಸಂಖ್ಯಾತ ಸಮುದಾಯದ ಕುಲ ಕಸುಬುದಾರರಿಗೆ ತರಬೇತಿ ನೀಡುವ ಉದ್ದೇಶವನ್ನು ಸರಕಾರ ಹೊಂದಿದೆ. ಜೊತೆಗೆ ಈ ಯೋಜನೆಯಡಿ ಅರ್ಜಿದಾರರು ಕಲಾತ್ಮಕ ಹಾಗೂ ತಾಂತ್ರಿಕ ಕೌಶಲ್ಯ ವೃದ್ದಿಸಿಕೊಂಡು ಅದೇ ಕಸುಬಿನಲ್ಲಿ ಮುಂದುವರೆಯಲು ಹಾಗೂ ಸಣ್ಣ ವ್ಯಾಪಾರ ಪ್ರಾರಂಭಿಸಲು ಶೇಕಡ 50ರಷ್ಟು ಸಹಾಯಧನ ನೀಡಲಾಗುವುದು.


  ಅರ್ಜಿ ಸಲ್ಲಿಸುವುದು ಹೇಗೆ?
  ಹಾಗಿದ್ರೆ ಇನ್ನೇಕೆ ತಡ? ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಕೂಡಲೇ ಇಲಾಖೆಯ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತರು ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ವೆಬ್ ಸೈಟ್ ತೆರೆಯುತ್ತಿದ್ದಂತೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವೆಬ್​ ಸೈಟ್​ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


  ಇದನ್ನೂ ಓದಿ: Dakshina Kannada News: ದಕ್ಷಿಣ ಕನ್ನಡ ಜಿಲ್ಲೆಯ ಜನರೇ, ಈ ನಂಬರ್​ಗಳನ್ನು ಸೇವ್ ಮಾಡಿ ಇಟ್ಕೊಂಡಿರಿ


  ಒಂದು ವೇಳೆ ಗೊಂದಲವಿದ್ದಲ್ಲಿ ಸ್ಥಳೀಯ ಡಿಜಿಟಲ್ ಸೇವಾ ಕೇಂದ್ರ ಅಥವಾ ಸೈಬರ್ ಗಳಿಗೂ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಅರ್ಜಿ ಸಲ್ಲಿಕೆ ಸಮಯದಲ್ಲಿ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಸಹಿತ ಪ್ರಮುಖ ದಾಖಲೆಗಳು ಹೊಂದಿರುವುದು ಕಡ್ಡಾಯವಾಗಿರುತ್ತದೆ.


  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು?
  ಈ ಎಲ್ಲ ಯೋಜನೆಗಳಿಗೂ ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನಾಂಕವಾಗಿರುತ್ತದೆ.
  ಅರ್ಜಿದಾರರು ವಿವಿಧ ಯೋಜನೆಗಳಿಗೆ ಹೊಂದಿರಬೇಕಾದ ದಾಖಲೆಗಳ ಬಗ್ಗೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವೆಬ್ ಸೈಟ್​ನಲ್ಲಿ ಪರಿಶೀಲಿಸಬಹುದಾಗಿದೆ.  ಈ ವೆಬ್​ಸೈಟ್​ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


  ಇದನ್ನೂ ಓದಿ: Udupi Helpline: ಉಡುಪಿ ಜಿಲ್ಲೆಯ ಜನರೇ ಅಲರ್ಟ್! ನಿಮ್ಮ ಜೀವ ಉಳಿಸುತ್ತೆ ಈ ನಂಬರ್


  ವೆಬ್ ಸೈಟ್ ನಲ್ಲಿ ಗಮನಿಸಿ, ಅರ್ಜಿ ಹಾಕಿ
  ಇನ್ನು ವೆಬ್ ಸೈಟ್ ನಲ್ಲೇ ಅರ್ಜಿ ಹಾಕುವವರು ವೆಬ್ ತಾವು ಯಾವ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದೇವೆ ಅನ್ನೋದನ್ನು ಗಮನಿಸಬೇಕಾಗುತ್ತದೆ. ಅಲ್ಪಸಂಖ್ಯಾತರಿಗೆ ಸಾಲ/ಸಹಾಯಧನ, ಶ್ರಮ ಶಕ್ತಿ ಯೋಜನೆ, ಸರಕು ಹಾಗೂ ಟ್ಯಾಕ್ಸಿಗಳಿಗೆ ಹಾಗೂ ಸ್ವಯಂ ಉದ್ಯೋಗಗಳಿಗೆ ನೀಡುವ ಸಾಲ ಹೀಗೆ ವಿವಿಧ ಸಾಲ ಯೋಜನೆಗಳು ಚಾಲ್ತಿಯಲ್ಲಿವೆ.

  Published by:guruganesh bhat
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು