• Home
  • »
  • News
  • »
  • mangaluru
  • »
  • Mangaluru News: ಆಳ್ವಾಸ್​ನಲ್ಲಿ ಬೃಹತ್ ಉದ್ಯೋಗ ಮೇಳ; ಹೀಗೆ ನೀವೂ ಭಾಗವಹಿಸಿ

Mangaluru News: ಆಳ್ವಾಸ್​ನಲ್ಲಿ ಬೃಹತ್ ಉದ್ಯೋಗ ಮೇಳ; ಹೀಗೆ ನೀವೂ ಭಾಗವಹಿಸಿ

ಆಳ್ವಾಸ್ ಕಾಲೇಜ್

ಆಳ್ವಾಸ್ ಕಾಲೇಜ್

ಆಳ್ವಾಸ್ ಪ್ರಗತಿ - 2022 ಉದ್ಯೋಗ ನೇಮಕಾತಿ ಮೇಳದಲ್ಲಿ 200 ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಸಾವಿರಾರು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

  • News18 Kannada
  • Last Updated :
  • Mangalore, India
  • Share this:

    ಮಂಗಳೂರು: ಇಲ್ಲಿನ ಮೂಡಬಿದಿರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ (Alvas Institution Moodbidri)  ಬೃಹತ್ ಉದ್ಯೋಗ ನೇಮಕಾತಿ ಮೇಳವು ನಡೆಯಲಿದೆ. ಅಕ್ಟೋಬರ್ 14 ಹಾಗೂ 15 ರಂದು ಎರಡು ದಿನಗಳ ಕಾಲ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ನಲ್ಲಿ 'ಆಳ್ವಾಸ್ ಪ್ರಗತಿ - 2022' (Alvas Pragati)ಬೃಹತ್ ಉದ್ಯೋಗ ನೇಮಕಾತಿ ಮೇಳವು (Job Fair) ಜರುಗಲಿದೆ. ದೇಶದ ಪ್ರತಿಷ್ಠಿತ ಕಂಪೆನಿಗಳು, ಹತ್ತಾರು ಕಾಲೇಜುಗಳ ವಿದ್ಯಾರ್ಥಿಗಳು ಸಂದರ್ಶನಲ್ಲಿ ಭಾಗವಹಿಸಲಿದ್ದಾರೆ. ಇನ್ನೂ ಹೆಸರು ನೋಂದಾಯಿಸದ ಅಭ್ಯರ್ಥಿಗಳು ಕೂಡಲೇ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.


    ಪ್ರತಿಷ್ಠಿತ ಕಂಪೆನಿಗಳು ಭಾಗಿ
    ಆಳ್ವಾಸ್ ಪ್ರಗತಿ - 2022 ಉದ್ಯೋಗ ನೇಮಕಾತಿ ಮೇಳದಲ್ಲಿ 200 ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಸಾವಿರಾರು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.


    ಪದವಿ ಕಡ್ಡಾಯ
    ಉದ್ಯೋಗ ನೇಮಕಾತಿ ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವೀಧರರಾಗಿರಬೇಕು.


    ಯಾವಾಗ ಉದ್ಯೋಗ ಮೇಳ?
    'ಆಳ್ವಾಸ್ ಪ್ರಗತಿ - 2022' ಅಕ್ಟೋಬರ್ 14 ಮತ್ತು 15 ರಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ನಡೆಯಲಿದೆ.


    ಇದನ್ನೂ ಓದಿ: Kalaburagi: ಈ ಊರಲ್ಲಿ ಮದುವೆಗೆ ಮಂಚ ಮಾತ್ರ ಗಿಫ್ಟ್ ಸಿಗಲ್ಲ!


    ವಿದ್ಯಾರ್ಥಿಗಳೇ, ನಿಮ್ಮ ಬಳಿ ಇರಲಿ ಈ ಡಾಕ್ಯುಮೆಂಟ್
    'ಆಳ್ವಾಸ್ ಪ್ರಗತಿ - 2022' ಬೃಹತ್ ಉದ್ಯೋಗ ನೇಮಕಾತಿ ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ 5-10 ಪಾಸ್ ಪೋರ್ಟ್ ಸೈಜಿನ ಫೋಟೋಗಳು, ಎಲ್ಲಾ ಸೆಮಿಸ್ಟರ್ ನ ಅಂಕ ಪಟ್ಟಿ ನಕಲು‌ ಪ್ರತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಮತ್ತು ಬೆಳಿಗ್ಗೆ 8.30 ಗೆ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಮತ್ತು ಆನ್ ಲೈನ್ ಮೂಲಕ ಕಡ್ಡಾಯವಾಗಿ ರೆಸ್ಯೂಮ್ ಅಪ್ಲೋಡ್ ಮಾಡಿರಬೇಕು.


    ಅರ್ಜಿ ಸಲ್ಲಿಕೆ ಹೇಗೆ?
    ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಸೂಕ್ತ ಮಾಹಿತಿಯನ್ನು ನೀಡುವ ಮೂಲಕ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


    ಇದನ್ನೂ ಓದಿ: Susla Recipe: ಮಸ್ತ್​ ಮಸ್ತ್ ರುಚಿಯ ಸೂಸಲಾ! ಅದ್ಭುತ ರೆಸಿಪಿ ಇಲ್ಲಿದೆ


    ಹೆಚ್ಚಿನ ಮಾಹಿತಿಗಾಗಿ
    ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಮೊಬೈಲ್ ಸಂಖ್ಯೆ 8971750414, 8494934852, 9008907716 ಸಂಪರ್ಕಿಸಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: