• Home
  • »
  • News
  • »
  • mangaluru
  • »
  • Mangaluru: ಗಿಡವಾಗಿ ಬೆಳೆಯೋ ಪಟಾಕಿ! ಢಂಢಂ ಅಂತ ಬೇಕಾದಷ್ಟು ಸಿಡಿಸಿ!

Mangaluru: ಗಿಡವಾಗಿ ಬೆಳೆಯೋ ಪಟಾಕಿ! ಢಂಢಂ ಅಂತ ಬೇಕಾದಷ್ಟು ಸಿಡಿಸಿ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬಿಡಿ ಪಟಾಕಿಯಲ್ಲಿ ಮೆಣಸು, ಟೊಮೆಟೊ, ಪಾಲಕ್,  ಸನ್ ಫ್ಲವರ್, ಸೌತೆಕಾಯಿ, ಸುಕ್ಲಿ ಬಾಂಬ್​ನಲ್ಲಿ ಮೆಣಸಿನಕಾಯಿ ಟೊಮೆಟೊ, ಮೂಲಂಗಿ, ರಾಕೆಟ್​ನಲ್ಲಿ ಬೀಟ್​ರೂಟ್, ಸನ್ ಫ್ಲವರ್, ದುರ್ಸು ಪಟಾಕಿಯಲ್ಲಿ ಮುಳ್ಳು ಸೌತೆ, ಅಲಸಂದೆ, ನೆಲಚಕ್ರದಲ್ಲಿ ಪಾಲಕ್, ಮೂಲಂಗಿ ಬೀಜಗಳನ್ನು ಹಾಕಲಾಗಿದೆ.

  • News18 Kannada
  • Last Updated :
  • Mangalore, India
  • Share this:

    ಸಿಡಿಯಲ್ಲ, ಸದ್ದು ಮಾಡಲ್ಲ. ಬೆಳಕೂ ನೀಡಲ್ಲ. ಹಾಗಂತ ಇದ್ಯಾವುದೂ ಹಳೆ ಠುಸ್ ಪಟಾಕಿನೂ ಅಲ್ಲ. ಮನೆ ಬೆಳಗದಿದ್ದರೂ ಈ ಪಟಾಕಿಗಳು ಪರಿಸರ ಬೆಳಗಿಸುತ್ತೆ ಅನ್ನೋದೆ ಇದ್ರ ವಿಶೇಷ. ಇದುವೇ ನೋಡಿ ಪರಿಸರ ಪ್ರೇಮಿ ಪಟಾಕಿಗಳು. ನಿಜ, ದೀಪಾವಳಿ ಹತ್ತಿರ ಬರುತ್ತಿದ್ದಂತೆ ಪಟಾಕಿ ಸ್ಟಾಲ್​ಗಳು ಕಾಣಿಸಿಕೊಳ್ಳುತ್ತವೆ. ಆದ್ರೆ ಪಟಾಕಿ ಸಿಡಿಸುವುದರಿಂದ ಪರಿಸರ ಮಾಲಿನ್ಯ ಅನ್ನೋ ಮಾತು ಕೇಳಿ ಬರ್ತದೆ. ಹೀಗಾಗಿಯೇ ಮಂಗಳೂರಿನ  (Mangaluru News) ಪಕ್ಷಿಕೆರೆಯಲ್ಲಿರುವ ಪೇಪರ್ ಸೀಡ್ಸ್ ಸಂಸ್ಥೆ ಪರಿಸರ ಪ್ರೇಮಿ ಪಟಾಕಿಗಳನ್ನ (Green Firecrackers) ತಯಾರಿಸುತ್ತಿದೆ. ಥೇಟ್ ಪಟಾಕಿಗಳನ್ನೇ ಹೋಲುವ ಇದರ ಒಳಗೆ ಮಾತ್ರ ಯಾವುದೇ ಸಿಡಿಮದ್ದು ಇರಲ್ಲ, ಬದಲಿಗೆ ಗಿಡವಾಗಿ ಬೆಳೆಯುವ ತರಕಾರಿ ಬೀಜಗಳನ್ನ ಇರಿಸಲಾಗಿದೆ.


    ಈ ನಿಟ್ಟಿನಲ್ಲಿ ಪೇಪರ್ ಸೀಡ್ಸ್ ಸಂಸ್ಥೆಯ ನಿತಿನ್ ವಾಸ್ ಅವರ ತಂಡ ಕಾರ್ಯೋನ್ಮುಖವಾಗಿದ್ದು, ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.


    6 ವಿಧದ ಪಟಾಕಿ
    ಈ ಎಲ್ಲ ಪಟಾಕಿಗಳ ಬಣ್ಣ, ಆಕಾರ ಇದೆಲ್ಲವೂ ನೋಡಲು ಸಿಡಿಯುವ ಪಟಾಕಿಯಂತೆಯೇ ಇದ್ದರೂ ಇದ್ಯಾವುದೂ ಸಿಡಿಯದು. ಇದನ್ನ ಖರೀದಿಸಿದವರು ಹೂಕುಂಡಲಿಯಲ್ಲೋ, ಮಣ್ಣಿನಲ್ಲಿ ಹಾಕಿಟ್ಟರೆ ಮೊಳಕೆಯೊಡೆದು ಗಿಡವಾಗಿ ಚಿಗುರುತ್ತೆ. ತಯಾರಿಸೋ 6 ವಿಧದ ಪಟಾಕಿಗಳಲ್ಲೂ ನಾನಾ ಬಗೆಯ ತರಕಾರಿ ಬೀಜಗಳನ್ನ ಇಡಲಾಗಿದೆ.


    ಇದನ್ನೂ ಓದಿ: Mangaluru Viral Video: ಒಂದೇ ಬಲೆಗೆ ಕ್ವಿಂಟಾಲ್‌ಗಟ್ಟಲೆ ಮೀನು ಸಿಕ್ತು!


    ಯಾವೆಲ್ಲ ತರಕಾರಿ ಬೀಜಗಳಿವೆ?
    ಬಿಡಿ ಪಟಾಕಿಯಲ್ಲಿ ಮೆಣಸು, ಟೊಮೆಟೊ, ಪಾಲಕ್,  ಸನ್ ಫ್ಲವರ್, ಸೌತೆಕಾಯಿ, ಸುಕ್ಲಿ ಬಾಂಬ್​ನಲ್ಲಿ ಮೆಣಸಿನಕಾಯಿ ಟೊಮೆಟೊ, ಮೂಲಂಗಿ, ರಾಕೆಟ್​ನಲ್ಲಿ ಬೀಟ್​ರೂಟ್, ಸನ್ ಫ್ಲವರ್, ದುರ್ಸು ಪಟಾಕಿಯಲ್ಲಿ ಮುಳ್ಳು ಸೌತೆ, ಅಲಸಂದೆ, ನೆಲಚಕ್ರದಲ್ಲಿ ಪಾಲಕ್, ಮೂಲಂಗಿ ಬೀಜಗಳನ್ನು ಹಾಕಲಾಗಿದೆ.


    ಇದನ್ನೂ ಓದಿ: KSRTC ದೀಪಾವಳಿ ಆಪರ್! ಶುರುವಾಗಲಿದೆ ಭರ್ಜರಿ ಟೂರ್ ಪ್ಯಾಕೇಜ್


    ಒಟ್ಟಿನಲ್ಲಿ ನಿತಿನ್ ವಾಸ್ ಅವರ ತಂಡದ ಪರಿಶ್ರಮದಿಂದ ಈ ವಿಶಿಷ್ಟ ಪರಿಕಲ್ಪನೆಯ ಮೂಲಕ ಇಕೋ ಫ್ರೆಂಡ್ಲಿ ಪಟಾಕಿ ತಯಾರಾಗಿದೆ. ಪರಿಸರ ಪ್ರಿಯರು ಇಂತಹ ಪಟಾಕಿಗಳನ್ನು ಖರೀದಿಸಿದ್ರೆ ಮುಂದಿನ ವರ್ಷದ ದೀಪಾವಳಿಗೆ ಸೊಂಪಾಗಿ ಬೆಳೆದ ಗಿಡಗಳಿಂದ ತರಕಾರಿ ಪಡೆದುಕೊಳ್ಳಬಹುದು ಅನ್ನೋದನ್ನ ಮರೀಬೇಡಿ.


    ಹಸಿರು ಪಟಾಕಿಗಾಗಿ ಇವರನ್ನು ಸಂಪರ್ಕಿಸಿ
    ನಿಮಗೂ ಪರಿಸರ ಸ್ನೇಹಿ ಪಟಾಕಿ ಬೇಕಿದ್ದಲ್ಲಿ ಸಂಪರ್ಕಿಸಿ ನಿತಿನ್ ವಾಸ್ ಅವರ ಸಂಪರ್ಕ ಸಂಖ್ಯೆ 91087 54870


    ವರದಿ: ಇರ್ಷಾದ್ ಕಿನ್ನಿಗೋಳಿ, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: