Health Camp: ಮಂಗಳೂರಿನ ಜನರೇ ಗಮನಿಸಿ, ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ

ಕರಾವಳಿಯಲ್ಲಿ ಮತ್ತೆ ಸಾಮಾನ್ಯ ಶೀತ, ಜ್ವರ ಲಕ್ಷಣಗಳು ಗೋಚರಿಸಲು ಆರಂಭಿಸಲಿದೆ. ವಿಶೇಷವಾಗಿ ಶಾಲೆಗೆ ತೆರಳುವ ಮಕ್ಕಳಲ್ಲಿ ಜ್ವರದ ಲಕ್ಷಣಗಳು ವಾರಗಳ ಕಾಲ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಯಾವುದೇ ರೋಗ ಲಕ್ಷಣಗಳಿದ್ದರೂ ಉಚಿತವಾಗಿ ತಪಾಸಣೆ ಮಾಡಿಕೊಳ್ಳುವ ಅವಕಾಶ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಂಗಳೂರು: ಯಾವುದೇ ರೀತಿಯ ರೋಗ ಲಕ್ಷಣ, ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ಉಚಿತವಾಗಿ ಆರೋಗ್ಯ ತಪಾಸಣೆ ಮಾಡುವ ಅವಕಾಶ. ನುರಿತ ತಜ್ಞ ವೈದ್ಯರ ಲಭ್ಯತೆಯೊಂದಿಗೆ ಉಚಿತ ಆರೋಗ್ಯ ತಪಾಸಣೆ ಮಂಗಳೂರು ನಗರದ ಮುಲ್ಕಿ ತಾಲೂಕಿನ ಕಿನ್ನಿಗೋಳಿಯಲ್ಲಿ ನಡೆಯಲಿದೆ. ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ ಕಟೀಲು ಹಾಗೂ ಶ್ರೀರಾಮ ಯುವಕ ವೃಂದ, ಶ್ರೀಹರಿಹರ ಶ್ರೀರಾಮ ಭಜನಾ ಮಂದಿರ ಮತ್ತು ಕೋರ್ದಬ್ಬು ದೈವಸ್ಥಾನ ಗೋಳಿಜೋರ ಇದರ ಆಶ್ರಯದಲ್ಲಿ ಶಿಬಿರವು ಆಯೋಜಿಸಲಾಗಿದೆ. ಜೊತೆಗೆ ಕೆಎಂಸಿ ಅತ್ತಾವರ ಲಾಯಲ್ಟಿ ಕಾರ್ಡ್ ನೋಂದಣಿ ಕೂಡಾ ಇದೇ ಸಂದರ್ಭ ನಡೆಯಲಿದೆ. ಆಸಕ್ತರು ಸೆಪ್ಟಂಬರ್ 18ರ ಭಾನುವಾರದಂದು ನಿಗದಿತ ಸಮಯದಲ್ಲಿ ಉಪಸ್ಥಿತರಿದ್ದು, ಉಚಿತ ತಪಾಸಣೆ ಹಾಗೂ ಆರೋಗ್ಯ ಸಲಹೆಗಳನ್ನು ಪಡೆಯಬಹುದಾಗಿದೆ.

    ಶಿಬಿರದಲ್ಲಿನ ತಪಾಸಣೆಗಳು
    ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾಮಾನ್ಯ ರೋಗ ಲಕ್ಷಣ, ಎಲುಬು ಮತ್ತು ಕೀಲು ವಿಭಾಗ ಹಾಗೂ ಮಕ್ಕಳ ವಿಭಾಗದ ತಜ್ಞ ವೈದ್ಯರು ಉಪಸ್ಥಿತರಿರಲಿದ್ದಾರೆ. ಜೊತೆಗೆ ಉಚಿತ ಇಸಿಜಿ ತಪಾಸಣೆ ಕೂಡಾ ಲಭ್ಯವಿರಲಿದೆ.

    ಲಭ್ಯರಿರುವ ತಜ್ಞ ವೈದ್ಯರು
    ಶಿಬಿರದಲ್ಲಿ ಕೆಎಂಸಿ ಆಸ್ಪತ್ರೆ ಹಿರಿಯ ತಜ್ಞ ವೈದ್ಯ ಡಾ. ನಿತ್ಯಾನಂದ ಚೌಟ, ದುರ್ಗಾ ಸಂಜೀವಿನಿ ಆಸ್ಪತ್ರೆ ಕಟೀಲು ಇಲ್ಲಿನ ಎಲುಬು ಮತ್ತು ಕೀಲು ರೋಗ ತಜ್ಞ ಡಾ. ಸುಧೀಂದ್ರ ಕಾರ್ನಾಡ್ ಹಾಗೂ ಮಕ್ಕಳ ವಿಭಾಗದ ತಜ್ಞೆ ಡಾ. ರಶ್ಮಿ ಉಪಸ್ಥಿತರಿರಲಿದ್ದಾರೆ.

    ಯಾವೆಲ್ಲ ರೋಗ ತಪಾಸಣೆ?
    ಶಿಬಿರದಲ್ಲಿ ರಕ್ತದೊತ್ತಡ (ಬಿ.ಪಿ), ಶುಗರ್, ಉಬ್ಬಸ, ಕೆಮ್ಮು, ಶೀತ, ಜ್ವರ, ನೆಗಡಿ, ಗಂಟಲು ನೋವು, ಮೈಯ್ಯಲ್ಲಿ ಗುಳ್ಳೆಗಳು ಮತ್ತು ಇತರೆ ಸಾಮಾನ್ಯ ರೋಗ ಲಕ್ಷಣಗಳು. ಹಾಗೂ ಸೊಂಟ, ಮಂಡಿ, ಬೆನ್ನು, ಕುತ್ತಿಗೆ ನೋವು, ಭುಜದ ಸಮಸ್ಯೆ, ಎಲುಬು ಮತ್ತು ಸ್ನಾಯುವಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರೀಕ್ಷಿಸಬಹುದಾಗಿದೆ.

    ಮಕ್ಕಳ ರೋಗಗಳಿಗೂ ಚಿಕಿತ್ಸೆ
    ಶಿಬಿರದಲ್ಲಿ ಲಭ್ಯರಿರುವ ಮಕ್ಕಳ ತಜ್ಞೆ ಮಕ್ಕಳಿಗೆ ಸಂಬಂಧಿಸಿದ ಯಾವುದೇ ರೋಗ ಲಕ್ಷಣಗಳಿದ್ದಲ್ಲಿ ಪರೀಕ್ಷಿಸುವರು. ಜೊತೆಗೆ ಉಚಿತ ಆರೋಗ್ಯ ಸಲಹೆಯನ್ನೂ ವೈದ್ಯರಿಂದ ಮಕ್ಕಳ ಪೋಷಕರು ಪಡೆಯಬಹುದಾಗಿದೆ.

    ಲಾಯಲ್ಟಿ ಕಾರ್ಡ್ ನೋಂದಣಿ
    ಶಿಬಿರದಲ್ಲಿ ಭಾಗವಹಿಸುವವರಿಗೆ ಇನ್ನೊಂದು ಲಾಭವಿದ್ದು, ಸುಲಭವಾಗಿ ಶಿಬಿರ ನಡೆಯುವ ಸ್ಥಳದಲ್ಲೇ ಕೆಎಂಸಿ ಆಸ್ಪತ್ರೆ ಅತ್ತಾವರ ಲಾಯಲ್ಟಿ ಕಾರ್ಡ್ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ. ಈ ಕಾರ್ಡ್ ಹೊಂದಿರುವವರಿಗೆ ಕೆಎಂಸಿ ಆಸ್ಪತ್ರೆ ಅತ್ತಾವರ ಹಾಗೂ ಕಟೀಲು ದರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಹೊರ ರೋಗಿ ಹಾಗೂ ಒಳರೋಗಿ ಚಿಕಿತ್ಸೆಗಳಿಗೂ ಭಾರೀ ರಿಯಾಯಿತಿ ಪಡೆಯಬಹುದಾಗಿರುತ್ತದೆ. ಕಾರ್ಡ್ ನೋಂದಾವಣೆಗೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಶಿಬಿರ ನಡೆಯುವ ಸ್ಥಳ, ಸಮಯ?
    ಉಚಿತ ಆರೋಗ್ಯ ತಪಾಸಣಾ ಶಿಬಿರವು ಕಿನ್ನಿಗೋಳಿ ಗೋಳಿಜೋರ ಶ್ರೀಹರಿಹರ ಭಜನಾ ಮಂದಿರ ಆವರಣದಲ್ಲಿ ಸೆಪ್ಟಂಬರ್ 18ರ ಭಾನುವಾರದಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿದೆ.

    ಹೆಚ್ಚಿನ ಮಾಹಿತಿಗಾಗಿ
    ಶಿಬಿರ ಕುರಿತು ಯಾವುದೇ ಮಾಹಿತಿ ಬೇಕಿದ್ದಲ್ಲಿ ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. 9945935922, 9481769086, 9483448502, 9663184921

    ಕರಾವಳಿಯಲ್ಲಿ ಮತ್ತೆ ಸಾಮಾನ್ಯ ಶೀತ, ಜ್ವರ ಲಕ್ಷಣಗಳು ಗೋಚರಿಸಲು ಆರಂಭಿಸಲಿದೆ. ವಿಶೇಷವಾಗಿ ಶಾಲೆಗೆ ತೆರಳುವ ಮಕ್ಕಳಲ್ಲಿ ಜ್ವರದ ಲಕ್ಷಣಗಳು ವಾರಗಳ ಕಾಲ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಯಾವುದೇ ರೋಗ ಲಕ್ಷಣಗಳಿದ್ದರೂ ಉಚಿತವಾಗಿ ತಪಾಸಣೆ ಮಾಡಿಕೊಳ್ಳುವ ಅವಕಾಶ ಇಲ್ಲಿದೆ ನೋಡಿ.

    ವರದಿ: ಇರ್ಷಾದ್ ಕಿನ್ನಿಗೋಳಿ
    Published by:ಗುರುಗಣೇಶ ಡಬ್ಗುಳಿ
    First published: