ಮಂಗಳೂರು: ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರ (Kudroli Gokarnanatha Temple) ವತಿಯಿಂದ ನಡೆಯುತ್ತಿರುವ 'ಮಂಗಳೂರು ದಸರಾ' (Mangaluru Dasara) ಪ್ರತಿದಿನ ಸಹಸ್ರಾರು ಸಂಖ್ಯೆಯ ಭಕ್ತರ ಆಗಮನಕ್ಕೆ ಸಾಕ್ಷಿಯಾಗುತ್ತಿದೆ. ಕರಾವಳಿಯ ಈ ದಸರಾವು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, 'ಮೈಸೂರು ದಸರಾ'ದಷ್ಟೇ (Mysuru Dasara) ವಿಶ್ವವಿಖ್ಯಾತಿಯನ್ನು ಪಡೆಯುತ್ತಿದೆ.
'ಮಂಗಳೂರು ದಸರಾ' ವಿಶೇಷವೆಂದರೆ ಶಾರದೆ ಜೊತೆಗೆ ನವದುರ್ಗೆಯರಿಗೂ ದಸರಾ ದರ್ಬಾರ್ ನಲ್ಲಿ ಸ್ಥಾನವಿದೆ. ಜೊತೆಗೆ ಆದಿಶಕ್ತಿಯೂ ಇದ್ದು, ಒಳ ಪ್ರವೇಶಿಸುತ್ತಿದ್ದಂತೆ ವಿಘ್ನನಿವಾರಕ ಗಣಪತಿಯು ಸ್ವಾಗತಿಸುತ್ತಾನೆ.
ಸೆಪ್ಟೆಂಬರ್ 26 ರಂದು ಕ್ಷೇತ್ರದ ಅಭಿವೃದ್ಧಿಯ ರೂವಾರಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರಿಂದ ದಸರಾ ಹಬ್ಬವು ಚಾಲನೆ ಪಡೆದಿದೆ.
ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಕಂಠ, ಕೂಷ್ಮಾಂಡ, ಸ್ಕಂದಮಾತ, ಕಾತ್ಯಾಯಿನಿ, ಮಹಾಗೌರಿ, ಮಹಾಕಾಳಿ, ಸಿದ್ಧಿಧಾತ್ರಿ ನವದುರ್ಗೆಯರು ಇಲ್ಲಿ ಭಕ್ತರನ್ನು ಹರಸುತ್ತಿದ್ದಾರೆ.
ಶಾರದೆಗೆ ವಿಶೇಷ ಪೂಜೆ ಜೊತೆಗೆ, ಆಯಾಯ ದಿನದ ಅಲಂಕಾರವೂ ಧನ್ಯತಾ ಭಾವ ಮೂಡಿಸುತ್ತದೆ.
ಅದ್ಧೂರಿ ದಸರಾ ಮೆರವಣಿಗೆಯು ಅಕ್ಟೋಬರ್ 5 ರ ಸಾಯಂಕಾಲ 4 ಗಂಟೆಯು ಆರಂಭಗೊಳ್ಳಲಿದೆ.
ಕ್ಷೇತ್ರದಿಂದ ಹೊರಟು ಮಂಗಳೂರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಕ್ಟೋಬರ್ 6 ರ ಪ್ರಾತಃಕಾಲದಲ್ಲಿ ಮಂಟಪ ಪೂಜೆ ನಡೆಯಲಿದೆ.
ಬಳಿಕ ದೇಗುಲದ ಆವರಣದಲ್ಲಿಯೇ ವಿಸರ್ಜನೆ ನಡೆಯಲಿದೆ.
ದಸರಾ ಮೆರವಣಿಗೆಗೆ ರಾಜ್ಯದ ವಿವಿಧ ಕಲಾತಂಡಗಳು, ಹುಲಿವೇಷ, ಟ್ಯಾಬ್ಲೋ, ಸ್ಥಳೀಯ ಸಾಂಪ್ರದಾಯಿಕ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಪ್ರದರ್ಶನ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ