• Home
  • »
  • News
  • »
  • mangaluru
  • »
  • ಮಹತ್ವದ ಮಾಹಿತಿ ಪ್ರಕಟಿಸಿದ KSRTC, ಹೊಸ ಟಿಕೆಟ್ ದರ ವಿವರ ಹೀಗಿದೆ

ಮಹತ್ವದ ಮಾಹಿತಿ ಪ್ರಕಟಿಸಿದ KSRTC, ಹೊಸ ಟಿಕೆಟ್ ದರ ವಿವರ ಹೀಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಮಾನ ನಿಲ್ದಾಣದಿಂದಲೂ ಮಣಿಪಾಲ ಹಾಗೂ ಮಂಗಳೂರು ನಗರಕ್ಕೆ ಬಸ್ ವ್ಯವಸ್ಥೆ ಇರಲಿದೆ. ಕೇವಲ ವಿಮಾನ ನಿಲ್ದಾಣದ ಪ್ರಯಾಣಿಕರು ಮಾತ್ರವಲ್ಲ, ಇತರೆ ಪ್ರಯಾಣಿಕರೂ ಇದರಲ್ಲಿ ಓಡಾಡಬಹುದಾಗಿದೆ.

  • Share this:

    ಮಂಗಳೂರು: ಮಂಗಳೂರು ಹಾಗೂ ಮಣಿಪಾಲದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಬಜ್ಪೆಗೆ ಈಗಾಗಲೇ ವೋಲ್ವೋ ಬಸ್ ಸೇವೆ (Volvo Bus To Mangaluru Airport) ಆರಂಭವಾಗಿದೆ. ಮಂಗಳೂರು ನಗರದ ರೈಲ್ವೇ ನಿಲ್ದಾಣದಿಂದ (Mangaluru Railway Station) ಹಾಗೂ ಮಣಿಪಾಲದಿಂದ ಬಸ್ ಸೇವೆ ಇರಲಿದೆ. ಅದೇ ರೀತಿ, ವಿಮಾನ ನಿಲ್ದಾಣದಿಂದಲೂ ಮಣಿಪಾಲ ಹಾಗೂ ಮಂಗಳೂರು ನಗರಕ್ಕೆ ಬಸ್ ವ್ಯವಸ್ಥೆ ಇರಲಿದೆ. ಕೇವಲ ವಿಮಾನ ನಿಲ್ದಾಣದ ಪ್ರಯಾಣಿಕರು ಮಾತ್ರವಲ್ಲ, ಇತರೆ ಪ್ರಯಾಣಿಕರೂ ಇದರಲ್ಲಿ ಓಡಾಡಬಹುದಾಗಿದೆ. ಹಾಗಾಗಿ ಮಂಗಳೂರು ನಗರದಿಂದ (Mangaluru News) ಹೊರಟ ಬಸ್​ಗಳಲ್ಲಿ  ವಿವಿಧ ನಿಲ್ದಾಣಗಳಿಗೆ ಎಷ್ಟು ಚಾರ್ಜ್ ಎಂಬ ವಿವರವನ್ನು KSRTC ಪ್ರಕಟಿಸಿದೆ.


    ಬಸ್ ಸಮಯ ಹೀಗಿರುತ್ತೆ
    ಮಂಗಳೂರು ನಗರ ರೈಲ್ವೇ ನಿಲ್ದಾಣದಿಂದ ವಿಮಾನ‌ ನಿಲ್ದಾಣಕ್ಕೆ - ಬೆಳಗ್ಗೆ 6.30, 8.45 ಹಾಗೂ 11.10 ಮಧ್ಯಾಹ್ನ 3 ಸಂಜೆ 5.15 ಹಾಗೂ ಕೊನೆಯ ರಾತ್ರಿ ಬಸ್ 7.30 ಕ್ಕೆ ಹೊರಡಲಿದೆ.


    ವಿಮಾನ ನಿಲ್ದಾಣದಿಂದ ರೈಲ್ವೇ ನಿಲ್ದಾಣಕ್ಕೆ
    ಬೆಳಗ್ಗೆ 7.40, 10 ಗಂಟೆ, ಮಧ್ಯಾಹ್ನ 12.20, 4.30, ಸಂಜೆ 6.25 ಹಾಗೂ ರಾತ್ರಿ 8.45 ಕ್ಕೆ ಹೊರಡಲಿದೆ.


    ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ
    ಬೆಳಗ್ಗೆ 7.15, 8.45 ಹಾಗೂ ಸಂಜೆ 5.15 ಕ್ಕೆ ಹೊರಡಲಿದೆ.


    ವಿಮಾನ ನಿಲ್ದಾಣದಿಂದ ಮಣಿಪಾಲಕ್ಕೆ ಬೆಳಗ್ಗೆ 10.45 ಮಧ್ಯಾಹ್ನ 12.30 ಹಾಗೂ ರಾತ್ರಿ 9.15ಕ್ಕೆ ಹೊರಡಲಿದೆ.


    ದರ ಹೀಗಿರಲಿದೆ
    ರೈಲು ನಿಲ್ದಾಣದಿಂದ ವಿಮಾನ‌ ನಿಲ್ದಾಣಕ್ಕೆ ₹100
    ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ₹300


    ಸ್ಥಳೀಯ ಓಡಾಟ ದರ ಹೀಗಿರಲಿದೆ
    ಬಜಪೆ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕ ಪ್ರಯಾಣಿಕರ ಬೇಡಿಕೆ ಮೇರೆಗೆ ಮಂಗಳೂರು ರೈಲು ನಿಲ್ದಾಣದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆಯಾಗುವ ನಗರ ವೋಲ್ವೋ ಸಾರಿಗೆಗಳ ಮಧ್ಯಂತರ ಸ್ಥಳಗಳ ಪ್ರಯಾಣದರ ನಿಗದಿಪಡಿಸಲಾಗಿದ್ದು ಹೀಗಿರಲಿದೆ..


    ಮಂಗಳೂರು ರೈಲು ನಿಲ್ದಾಣದಿಂದ - ಜ್ಯೋತಿ 20ರೂ., ಕೆಎಸ್‍ಆರ್​ಟಿಸಿ ಬಿಜೈ 25ರೂ., ಕುಂಟಿಕಾನ 30ರೂ., ಕೊಂಚಾಡಿ 35ರೂ., ಕಾವೂರು 40ರೂ., ಮರವೂರು 60ರೂ., ಕರಂಬಾರು 70ರೂ.ಗಳು.


    ಇದನ್ನೂ ಓದಿ: Kambala Calendar: ಕಂಬಳ ಸೀಸನ್ ಶುರು! ಇಲ್ಲಿದೆ ನೋಡಿ ಟೈಮ್​ ಟೇಬಲ್


    ಜ್ಯೋತಿಯಿಂದ - ಕೆಎಸ್‍ಆರ್​ಟಿಸಿ ಬಿಜೈ 20ರೂ., ಕುಂಟಿಕಾನ 25ರೂ., ಕೊಂಚಾಡಿ 30ರೂ., ಕಾವೂರು 35ರೂ., ಮರವೂರು 50ರೂ., ಕರಂಬಾರು 60ರೂ.ಗಳು.


    ಕೆಎಸ್‍ಆರ್​ಟಿಸಿ ಬಿಜೈಯಿಂದ - ಕುಂಟಿಕಾನ 20ರೂ., ಕೊಂಚಾಡಿ 25ರೂ., ಕಾವೂರು 30ರೂ., ಮರವೂರು 40ರೂ., ಕರಂಬಾರು 50ರೂ.ಗಳು.


    ಕುಂಟಿಕಾನದಿಂದ – ಕೊಂಚಾಡಿ 20ರೂ., ಕಾವೂರು 25ರೂ., ಮರವೂರು 30ರೂ., ಕರಂಬಾರು 40ರೂ.ಗಳು.


    ಇದನ್ನೂ ಓದಿ: Auto Fare Hike: ನವೆಂಬರ್ 15ರಿಂದ ಆಟೋ ಪ್ರಯಾಣಕ್ಕೆ ಇಷ್ಟು ಹಣ ಕೊಡ್ಲೇಬೇಕು! ಹೊಸ ಪ್ರಯಾಣ ದರ ಜಾರಿ!


    ಕೊಂಚಾಡಿಯಿಂದ - ಕಾವೂರು 20ರೂ., ಮರವೂರು 30ರೂ., ಕರಂಬಾರು 40ರೂ.
    ಕಾವೂರುನಿಂದ - ಮರವೂರು 20ರೂ., ಕರಂಬಾರು 30ರೂ. ಪ್ರಯಾಣ ದರ ನಿಗದಿಪಡಿಸಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರಿನ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: